ಸರ್ಕಾರಿ ಪ್ರಥಮ ದರ್ಜೆ ಕಾಪು ಶಿಕ್ಷಕ- ರಕ್ಷಕ ಸಮಿತಿಯ ವಾರ್ಷಿಕ ಸಭೆ

Upayuktha
0

ಮಕ್ಕಳು ಮಾರ್ಕ್ಸ್ ಪಡೆಯುವುದರ ಜೊತೆಗೆ ವ್ಯಕ್ತಿತ್ವ ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು.-ಜೇಷ್ಠ ಲಕ್ಷ್ಮಿ

ಕಾಪು: ಸರ್ಕಾರಿ ಪ್ರಥಮ ದರ್ಜೆ ಕಾಪು ಇಲ್ಲಿನ 2025 -26 ನೇ ಶೈಕ್ಷಣಿಕ ಸಾಲಿನ ಶಿಕ್ಷಕ- ರಕ್ಷಕ ಸಮಿತಿಯ ವಾರ್ಷಿಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರಿನ ಆಳ್ವಾಸ್ ಆಯುಕ್ಯಾರಿನ ಮನಶಾಸ್ತ್ರಜ್ಞರಾದ ಜೇಷ್ಠ ಲಕ್ಷ್ಮಿ ಅವರು ಮಾತನಾಡುತ್ತಾ, "ಈ ದಿನ ನಾವು ವಿದ್ಯಾರ್ಥಿಗಳ ತರಗತಿ ಹಾಜರಾತಿ, ಅಂಕ, ರ್‍ಯಾಂಕ್, ಮುಂತಾದ ವಿಷಯದಲ್ಲಿ ಸಿಲುಕಿಕೊಂಡಿದ್ದೇವೆ, ತಮ್ಮ ಮಕ್ಕಳು ಅಧ್ಯಯನ ಮಾಡುತ್ತಿರುವ ವಿಷಯದಲ್ಲಿ ಎಷ್ಟು ಪ್ರೌಢಿಮೆ ಹೊಂದಿದ್ದಾರೆ ಮತ್ತು ಅವರ ವ್ಯಕ್ತಿತ್ವ ಹೇಗೆ ರೂಪುಗೊಳ್ಳುತ್ತಿದೆ ಎನ್ನುವುದನ್ನು ಪರೀಕ್ಷಿಸುವ ಮನೋಭಾವವನ್ನು ಮರೆತಿದ್ದೇವೆ, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಮಗ್ರವಾಗಿ ರೂಪಿಸುವಲ್ಲಿ ಕೇವಲ ಶಿಕ್ಷಕರಷ್ಟೇ ಅಲ್ಲ ಪೋಷಕರ ಪಾತ್ರವು ದೊಡ್ಡದು" ಎಂದರು.


ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋಪಾಲಕೃಷ್ಣ ಎಂ ಗಾಂವ್ಕರ್ ವಹಿಸಿ ಪೋಷಕರ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಹೋದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಕಷ್ಟ ಎಂದರು, ಅಂತೆಯೇ ಈ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಮಿತಿಯ ಅಧ್ಯಕ್ಷರಾದ ಸವಿತಾ ಸನಿಲ್ ಅವರು ಮಾತನಾಡುತ್ತಾ ನಾವು ಸರ್ಕಾರಿ ಕಾಲೇಜು ಅಂದಾಗ ಒಂದಷ್ಟು ತಪ್ಪು ಕಲ್ಪನೆಗಳನ್ನು ಈಗಲೂ ಇಟ್ಟುಕೊಂಡಿದ್ದೇವೆ, ಆದರೆ ಸಮಯ ಬದಲಾಗಿದೆ, ನಾವೆಲ್ಲ ಪೋಷಕರಾಗಿ ಈ ಕಾಲೇಜಿಗೆ ನಮ್ಮ ಮಕ್ಕಳಿಗೆ ಪ್ರವೇಶಾತಿ ದೊರಕಿದ್ದು, ಮತ್ತು ಇಲ್ಲಿ ಅಧ್ಯಯನಕ್ಕೆ ಅವಕಾಶ ಒದಗಿದ್ದು ನಮ್ಮೆಲ್ಲರ ಅದೃಷ್ಟ ಮತ್ತು ಸಂತೋಷದ ವಿಷಯ ಎಂದುಕೊಳ್ಳಬೇಕು.ಇಲ್ಲಿ ಶೈಕ್ಷಣಿಕವಾಗಿ ತುಂಬಾ ಉತ್ತಮವಾಗಿರುವ ವಾತಾವರಣವಿದ್ದು ಎಲ್ಲಾ ರೀತಿಯ ಸೌಲಭ್ಯಗಳನ್ನು ಈ ಕಾಲೇಜು ಹೊಂದಿದೆ , ವಿದ್ಯಾರ್ಥಿಗಳಿಗೆ ಈ ದಿನದ ಶೈಕ್ಷಣಿಕ ಅವಶ್ಯಕತೆಗಳನ್ನು ಈ ಸಂಸ್ಥೆ ಒದಗಿಸುತ್ತಿದೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಲೇಜಿಗೆ ನಮ್ಮ ಸುತ್ತಮುತ್ತಲಿನ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಿಕೊಡಲು ಖುಷಿಪಡಬೇಕು' ಎಂದರು.


ಈ ಸಭೆಯಲ್ಲಿ ಕಾಲೇಜಿನ ರಕ್ಷಕ -ಶಿಕ್ಷಕ ಸಮಿತಿಯ ಸಂಯೋಜಕರಾದ ಡಾ. ನಯನ ಎಲ್ಎಂ, ಐ ಕ್ಯೂಎಸಿ ಸಂಯೋಜಕರಾದ ಡಾ. ರೋಶ್ನಿ ಯಶ್ವಂತ್, ವಿದ್ಯಾರ್ಥಿ ಸಮಿತಿಯ ಸಲಹೆಗಾರರಾದ ದೀಪಿಕಾ ಸುವರ್ಣ, ಕಾಲೇಜಿನ ಎಲ್ಲಾ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕೆತರ ಸಿಬ್ಬಂದಿಗಳು, ಶಿಕ್ಷಕ- ರಕ್ಷಕ ಸಮಿತಿಯ ಪದಾಧಿಕಾರಿಗಳು ಮತ್ತು ಉತ್ತಮ ಸಂಖ್ಯೆಯಲ್ಲಿ ಪೋಷಕರು ಉಪಸ್ಥಿತರಿದ್ದರು.


ಅತಿಥಿಗಳನ್ನು ಡಾ. ನಯನ ಎಲ್ಎಂ ಸ್ವಾಗತಿಸಿದರೆ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ  ಯಶೋಧರವರು ವಂದಿಸಿದರು. ಕಾರ್ಯಕ್ರಮವನ್ನು ಪ್ರಶಾಂತ್ ಅವರು ನಿರೂಪಿಸಿದರು.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top