ಭಾರತೀಯ ಕಲಾ ಪ್ರಕಾರಗಳು ವೈವಿಧ್ಯಮಯವಾದದು - ಮುರಳಿ ಕೃಷ್ಣಕೆ.ಎನ್

Upayuktha
0


ಪುತ್ತೂರು:
ಲಲಿತ ಕಲೆಗಳನ್ನು ನಮ್ಮ ಹಿರಿಯರು ದೈವಿಕಕಲೆಯನ್ನಾಗಿ ಸ್ವೀಕರಿಸಿ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ್ದಾರೆ.ಯಾವ ಕಲೆಗಳು ಖುಷಿಯನ್ನುಕೊಡುತ್ತದೆಯೋ ಹಾಗೆಯೇ ಬೇಗನೇ ಮನವನ್ನು ಆವರಿಸಿಕೊಳ್ಳುತ್ತದೆಯೋ ಅವುಗಳು ದೈವಿಕ ಕಲೆಗಳೆನ್ನಬಹುದು. ಭಾರತೀಯ ಲಲಿತ ಕಲೆಗಳಲ್ಲಿ ಭರತನಾಟ್ಯ,ಮೋಹಿನಿಯಾಟ್ಟಂ, ಕಥಕ್ಕಳಿ, ಕೂಚಿಪುಡಿಇತ್ಯಾದಿ ಪ್ರಕಾರಗಳನ್ನು ಕಾಣಬಹುದಾಗಿದ್ದುಒಂದೊಂದು ಪ್ರಾಂತ್ಯದಲ್ಲೂ ಬೇರೆ ಬೇರೆತೆರನಾದ ವಿಶೇಷತೆಗಳಿಂದ ಕೂಡಿದೆ. ಇಂತಹಾ ವೈವಿಧ್ಯತೆಯನ್ನು ನಾವು ಭಾರತೀಯ ಕಲೆಗಳಲ್ಲಿ ಕಾಣಬಹುದಾಗಿದೆಎಂದುಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣಕೆ.ಎನ್ ನುಡಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ವಿವೇಕಾನಂದ ಸಂಶೋಧನಾಕೇಂದ್ರ, ಭಾರತೀಯ ಸಂಸ್ಕøತಿ ಮತ್ತು ಲಲಿತ ಕಲೆಗಳ ಅಧ್ಯಯನಕೇಂದ್ರ, ಲಲಿತ ಕಲಾ ಸಂಘ, ಐಕ್ಯೂಎಸಿ ಹಾಗೂ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಪುತ್ತೂರುಇದರ ಸಹಯೋಗದಲ್ಲಿ ನಡೆದ 'ಶಿವಾರ್ಪಣಂ' ಭರತನಾಟ್ಯದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ನೃತ್ಯೋಪಾಸನಾ ಕಲಾ ಅಕಾಡೆಮಿಯ ನಿರ್ದೇಶಕಿ ವಿದುಷಿ ಶಾಲಿನಿ ಆತ್ಮಭೂಷಣ, ನೃತ್ಯಕಲೆಗಳ ಬಗ್ಗೆ ಅಧ್ಯಯನಾಧಾರಿತ ಕಾರ್ಯಾಗಾರಗಳು ಆಗುವುದುಕಡಿಮೆಯಾಗಿದೆ ಎನ್ನಬಹುದು. ಹಾಗಿದ್ದಾಗ ಲಲಿತ ಕಲೆಗಳ ಬಗ್ಗೆ ಕಾರ್ಯಗಾರಗಳು ನಡೆದುಅದರಿಂದ ವಿದ್ಯಾರ್ಥಿಗಳು, ಆಸಕ್ತರು ಪ್ರಯೋಜನ ಪಡೆದುಕೊಂಡಾಗ ಆಯೋಜಿಸಿದವರ, ಕಲಾವಿದರಆಶಯ ಪೂರ್ಣವಾಗುತ್ತದೆ. ಕಲಿಕೆಯ ಸಂದರ್ಭದಲ್ಲಿ ಹಿರಿಯರಜೊತೆಗೆಇದ್ದುಕಲಿತಾಗ, ಅಭ್ಯಾಸ ಮಾಡಿದಾಗ ನಮ್ಮದು ಒಳ್ಳೆಯ ಗುಣಮಟ್ಟದ ಅಧ್ಯಯನವಾಗಬಲ್ಲದು ಎಂದರು.


ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷಡಾ. ಶ್ರೀಪತಿ ಕಲ್ಲೂರಾಯ ಹಾಗೂ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಾಶಂಸನೆಗೈದರು.


ಈ ಸಂದರ್ಭದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣಇವರನ್ನು ಸನ್ಮಾನಿಸಲಾಯಿತು.


ನಂತರ ನೃತ್ಯೋಪಾಸನಾ ಕಲಾ ಅಕಾಡೆಮಿಯಮತ್ತು  ನೃತ್ಯವನ್ನು ಅಭ್ಯಸಿಸಿದ ಕಾಲೇಜಿನಆಯ್ದ ವಿದ್ಯಾರ್ಥಿಗಳಿಂದ ನವರಸಗಳ ಪ್ರಸ್ತುತಿಯಕುರಿತಾದ ಭರತನಾಟ್ಯಕಾರ್ಯಾಗಾರ ನಡೆಯಿತು.


ಕಾರ್ಯಾಗಾರದಲ್ಲಿ ಹಾಡುಗಾರಿಕೆಯಲ್ಲಿ ಡಾ. ನಿಷಿತಾ ಪುತ್ತೂರು, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಹಾಗೂ ನಟುವಾಂಗದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣಇವರು ಸಹಕರಿಸಿದರು.


ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನಾಕೇಂದ್ರದ  ನಿರ್ದೇಶಕಿ ಹಾಗೂ ಸ್ನಾತಕೋತ್ತರ ವಿಭಾಗದಡೀನ್‍ಡಾ. ವಿಜಯ ಸರಸ್ವತಿ.ಬಿ ಸ್ವಾಗತಿಸಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಮತ್ತು ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನಕೇಂದ್ರದ ಸಂಯೋಜಕಿಡಾ. ವಿದ್ಯಾಎಸ್ ವಂದಿಸಿದರು.ಕಾಲೇಜಿನ ವಿದ್ಯಾರ್ಥಿ ಸಂಘದಜತೆ ಕಾರ್ಯದರ್ಶಿ ಹಂಪನಾ ನಿರೂಪಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top