ವಿವೇಕಾನಂದ ವಿದ್ಯಾವರ್ಧಕ ಸಂಘದ ದಾಖಲೆಯ ಸಾಧನಾಭಿನಂದನ ಕಾರ್ಯಕ್ರಮ

Upayuktha
0


ಪುತ್ತೂರು: 2025-26ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಅದ್ಭುತ ಸಾಧನೆ ಮಾಡಿದೆ. ತನ್ನ ಆಡಳಿತ ವ್ಯಾಪ್ತಿಯ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ, ತಾಲೂಕಿನ 21 ಪ್ರೌಢ ಶಾಲೆಗಳ ಎಸ್‌ಎಸ್‌ಎಲ್‌ಸಿ ಶೇ. 99 ಫಲಿತಾಂಶ ಪಡೆದು ಇತಿಹಾಸ ನಿರ್ಮಿಸಿದೆ.


ಪರೀಕ್ಷೆ ಬರೆದ 1302 ವಿದ್ಯಾರ್ಥಿಗಳಲ್ಲಿ 1286 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 455 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, 645 ಪ್ರಥಮ, 144 ದ್ವಿತೀಯ ಹಾಗೂ 42 ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 5 ವಿದ್ಯಾಥಿಗಳು 625ರಲ್ಲಿ 620 ಕ್ಕಿಂತ ಹೆಚ್ಚು ಅಂಕಗಳಿಸಿ ಜಿಲ್ಲೆಯ ಟಾಪ್ 10ರಲ್ಲಿ 3 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.


ಸಾಧನೆಯ ಸರಮಾಲೆ: ಶೇ. 100 ಫಲಿತಾಂಶ ವಿವೇಕಾನಂದ ವಿದ್ಯಾವರ್ಧಕ ಸಂಘದ 21 ಪ್ರೌಢ ಶಾಲೆಗಳಲ್ಲಿ 14 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿದೆ. 4 ಶಾಲೆಗಳು ಶೇ. 97 ಹಾಗೂ 3 ಶಾಲೆಗಳು ಶೇ. 96 ಉತ್ತೀರ್ಣತೆಯನ್ನು ದಾಖಲಿಸಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಕು. ಆದ್ಯಾ 622 ಅಂಕಗಳಿಸಿ ತಾಲೂಕಿಗೆ ಪ್ರಥಮ, ಜಿಲ್ಲೆಗೆ ದ್ವಿತೀಯ ಹಾಗೂ ರಾಜ್ಯಕ್ಕೆ ನಾಲ್ಕನೆಯ ಸ್ಥಾನ ಗಳಿಸುವಲ್ಲಿ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲದ ಕು. ಅಪೇಕ್ಷ ಎನ್. ಹಾಗೂ ಗಜಾನನ ವಿದ್ಯಾಸಂಸ್ಥೆಯ ಅನನ್ಯ ಎ. 621 ಅಂಕ ಗಳಿಸಿ ತಾಲೂಕಿಗೆ ದ್ವಿತೀಯ, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಕನ್ನಡ ಮಾಧ್ಯಮದಲ್ಲಿ ನಾವೇ ಸೈ: ಕನ್ನಡ ಮಾಧ್ಯಮ ಶಾಲೆಯನ್ನೂ ಉಳಿಸಿ ಬೆಳೆಸುವಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಮುಂಚೂಣಿಯಲ್ಲಿದೆ. 10 ಕನ್ನಡ ಮಾಧ್ಯಮ ಶಾಲೆಗಳಲ್ಲಿ 4 ಶಾಲೆಗಳು ಶೇ. 100 ಹಾಗೂ 5 ಶಾಲೆಗಳು ಶೇ. 97 ಫಲಿತಾಂಶವನ್ನು ದಾಖಲಿಸಿದೆ. ಉಪ್ಪಿನಂಗಡಿ ಶ್ರೀರಾಮ ಶಾಲೆಯ ತುಷಾರ್ ಎಸ್. ದೇವಾಡಿಗ ಕನ್ನಡ ಮಾಧ್ಯಮದಲ್ಲಿ 617 ಅಂಕಗಳಿಸಿ ತಾಲೂಕಿಗೆ ಪ್ರಥಮ, ಜಿಲ್ಲೆಗೆ ಆರನೇ ಸ್ಥಾನ ಹಾಗೂ ರಾಜ್ಯಕ್ಕೆ 9ನೇ ಸ್ಥಾನ ಪಡೆದುಕೊಂಡಿದ್ದಾರೆ.


`ಸಾಧನಾಭಿವಂದನೆ'-ಪ್ರತಿಭೆಗೆ ಪುರಸ್ಕಾರ ಕಳೆದ ಶತಮಾನಗಳಿಂದ ಪುತ್ತೂರನ್ನು ಕೇಂದೀಕರಿಸಿ, ಹತ್ತೂರಿನಲ್ಲಿ ವಿದ್ಯಾಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿರುವ ವಿವೇಕಾನಂದ ವಿದ್ಯಾವರ್ಧಕ ಸಂಘವು ಗ್ರಾಮೀಣ ಪ್ರದೇಶಗಳಲ್ಲೂ ವಿದ್ಯಾಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದೆ. 29 ಕ್ಯಾಂಪಸ್‌ಗಳ 85 ವಿದ್ಯಾಸಂಸ್ಥೆಗಳಲ್ಲಿ 22ಸಾವಿರಕ್ಕೂ ಮಿಗಿಲು ವಿದ್ಯಾರ್ಥಿಗಳನ್ನು ಹೊಂದಿರುವ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತಿರುವ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆ ಇದಾಗಿದೆ. ಸಂಸ್ಕಾರಯುತವಾದ ಗುಣಮಟ್ಟದ ಶಿಕ್ಷಣವನ್ನು ನಡೆಸುತ್ತಿರುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. ಸಂಘದ ಈ ಸಾಧನೆಗೆ ಎಲ್ಲಾ ಸಂಸ್ಥೆಗಳ ಆಡಳಿತ ಸಮಿತಿ, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ ಹಾಗೂ ಪೋಷಕರ ಸಹಕಾರವೇ ಕಾರಣವೆಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top