ನಾಲ್ಕನೇ ಹಂತದ ಸ್ವಚ್ಛ ಸುರತ್ಕಲ್ ಸಂತೆ ಅಭಿಯಾನ

Upayuktha
0


ಸುರತ್ಕಲ್‌: ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ) ಸ್ವಚ್ಛ ಸುರತ್ಕಲ್ ನಾಲ್ಕನೇ ಹಂತದ ಅಭಿಯಾನವನ್ನು ಎಂ.ಆರ್.ಪಿ.ಎಲ್. ಸಂಸ್ಥೆಯ ಸಹಬಾಗಿತ್ವದಲ್ಲಿ ನಡೆಸುತ್ತಿದ್ದು ಮಂಗಳೂರು ಮಹಾ ನಗರ ಪಾಲಿಕೆಯ ಸುರತ್ಕಲ್ ಉಪ ವಲಯದ ಸಹಕಾರದೊಂದಿಗೆ ಸ್ವಚ್ಛ ಸುರತ್ಕಲ್ ಸಂತೆ ಅಭಿಯಾನವನ್ನು ಆರಂಭಿಸಿದೆ.


ಕಳೆದ ಎರಡು ಬುಧವಾರದ ಸಂತೆಯಲ್ಲಿ ಸ್ವಚ್ಛತಾ ಕಾರ್ಯಕರ್ತರು, ಆರೋಗ್ಯ ವಿಭಾಗದ ಅಧಿಕಾರಿಗಳು, ಅರೋಗ್ಯ ಮೇಲ್ವಿಚಾರಕರು, ಸಮುದಾಯ ಸಂಘಟಕರು ವ್ಯಾಪಾರಿಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ತ್ಯಾಜ್ಯ ವಸ್ತುಗಳನ್ನು ಸಂತೆ ಮುಗಿದ ಕೊಡಲೇ ನಿಯಮಗಳ ಪ್ರಕಾರ ಸೂಕ್ತವಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದರು. ಅದಕ್ಕೆ ಸ್ಪಂದಿಸಿರುವ ವ್ಯಾಪಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿದ್ದು ಸಂತೆಯ ಪರಿಸರ ಸೂಕ್ತವಾಗಿ ಸ್ವಚ್ಛಗೊಂಡಿದೆ.


ಸ್ವಚ್ಛತಾ ಅಭಿಯಾನದ ಸಂಯೋಜಕ ಸತೀಶ್ ಸದಾನಂದ್ ಮಾತನಾಡಿ ಸರ್ವರ ಸಹಕಾರದಿಂದ ಅಭಿಯಾನ ಯಶಸ್ಸು ಗಳಿಸುತ್ತದೆ ಎಂದರು. ಅಭಿಯಾನ ಮುಂದಿನ ವಾರಗಳಲ್ಲೂ ಮುಂದುವರಿಯಲಿದ್ದು ತ್ಯಾಜ್ಯ ಮುಕ್ತ ಸ್ವಚ್ಛ ಮಾದರಿ ಸಂತೆಯನ್ನಾಗಿಸುವ ಗುರಿಯನ್ನು ಹೊಂದಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top