ಅಥಣಿ ತಾಲೂಕಿಗೆ ಕೀರ್ತಿ ತಂದ ಪ್ರತಿಭೆಗಳಿಗೆ ಗೌರವ
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಾದ ಪ್ರಾರ್ಥನಾ ನಾಗಪ್ಪಾ ಬಿರಾದರ ಪಾಟೀಲ ಹಾಗೂ ದಶರಥ ಶಿವಾಜಿ ಬೋಸಲೆ ಅವರ ಅಪೂರ್ವ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಹಲ್ಯಾಳ ಗ್ರಾಮದ ಪ್ರಾರ್ಥನಾ ಅವರು ಕಟಗೇರಿ ಸರಕಾರಿ ಕನ್ನಡ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ರೀತಿ ಖೋತನಟ್ಟಿ ಗ್ರಾಮದ ದಶರಥ ಅವರು ಐಗಳಿ ಆದರ್ಶ ಶಿಕ್ಷಣ ಸಂಸ್ಥೆಯ ವಸತಿ ನಿಲಯದಲ್ಲಿ ಅಭ್ಯಾಸ ಮಾಡಿ 625ರಲ್ಲಿ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರಿಬ್ಬರನ್ನೂ ಮದಭಾವಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ ನಾಯಿಕ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರವೀಣ ನಾಯಿಕ ಅವರು, “ಸರಕಾರಿ ಶಾಲೆಯಲ್ಲಿಯೂ ಉನ್ನತ ಮಟ್ಟದ ಸಾಧನೆ ಸಾಧ್ಯ ಎಂಬುದನ್ನು ಈ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ. ಪೋಷಕರು ಸರಕಾರಿ ಶಾಲೆಗಳತ್ತ ಹೆಚ್ಚಿನ ಗಮನ ಹರಿಸಬೇಕು,” ಎಂದು ಹೇಳಿದರು. ಮುಂದಿನ ವಿದ್ಯಾಭ್ಯಾಸದಲ್ಲೂ ಶ್ರಮಪಟ್ಟು ಉತ್ತಮ ಸ್ಥಾನಮಾನ ಗಳಿಸಲೆಂದು ಅವರು ಶುಭ ಹಾರೈಸಿದರು.
ಪ್ರಾರ್ಥನಾ ಅವರು ತಮ್ಮ ಸಾಧನೆಗೆ ತಂದೆ-ತಾಯಿ ಮತ್ತು ಶಿಕ್ಷಕರ ಮಾರ್ಗದರ್ಶನವೇ ಪ್ರಮುಖ ಕಾರಣವೆಂದು ತಿಳಿಸಿದರು. ದಶರಥ ಅವರ ಸಾಧನೆಯನ್ನೂ ಇದೇ ವೇಳೆ ಪ್ರಶಂಸಿಸಲಾಯಿತು.
ಕಾರ್ಯಕ್ರಮದಲ್ಲಿ ಮಹೇಶ್ ಶರ್ಮಾ, ಅನೀಲ ಭಾಮನೆ ಹಾಗೂ ಆದಿತ್ಯಗೌಡಾ ನಾಯಿಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

