ಬಳ್ಳಾರಿ:
ಆರ್ ವೈ ಎಂ ಇಂಜಿನಿಯರಿಂಗ್
ಕಾಲೇಜಿನ ಎಂ.ಬಿ.ಎ
ವಿಭಾಗದ ವತಿಯಿಂದ ರಾಷ್ಟ್ರಮಟ್ಟದ ‘ಅಸ್ತ್ರ ಮ್ಯಾನೇಜ್ಮೆಂಟ್ ಫೆಸ್ಟ್–2026’ ಕಾರ್ಯಕ್ರಮ ನಡೆಯಿತು. ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ
ಈ ಕಾರ್ಯಕ್ರಮವು ಪದವಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು
ಅನಾವರಣಗೊಳಿಸುವ ಜೊತೆಗೆ, ಅವರಲ್ಲಿರುವ ನಾಯಕತ್ವ, ಸೃಜನಶೀಲತೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಉದ್ದೇಶವನ್ನು ಹೊಂದಿತ್ತು.
ಸಂಘದ
ಕಾರ್ಯದರ್ಶಿ ಡಾ. ಅರವಿಂದ್ ಪಟೇಲ್
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಮ್ಯಾನೇಜ್ಮೆಂಟ್ ಫೆಸ್ಟ್ಗಳು
ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು
ವಿಶಿಷ್ಟ ವೇದಿಕೆಯಾಗಿದ್ದು, ಅವರ ಆತ್ಮವಿಶ್ವಾಸವನ್ನು ವೃದ್ಧಿಸಿ
ಭವಿಷ್ಯ ನಿರ್ಮಾಣಕ್ಕೆ ದಿಕ್ಕು ತೋರಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ
ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಹಾಗೂ ಬೆಂಗಳೂರಿನ
ಪ್ರತಿಷ್ಠಿತ ಕಂಪನಿಯ ನಿರ್ದೇಶಕರಾದ ನವೀನ್ ಲೋಕೆರೆ ಹಾಗೂ ಮುರಳಿ ಅವರು
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ತಮ್ಮ ಉದ್ಯಮ ಜೀವನದ
ಅನುಭವಗಳನ್ನು ಹಂಚಿಕೊಂಡರು. ಅವರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ
ಪ್ರೇರಣೆಯಾಗಿ ಪರಿಣಮಿಸಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಬಸವರಾಜ್, ಕಾಲೇಜಿನ ಪ್ರಾಚಾರ್ಯ ಡಾ. ಹೆಚ್. ಮಹಾಬಲೇಶ್ವರ್, ಉಪಪ್ರಾಚಾರ್ಯ ಡಾ. ಸವಿತಾ ಸೋನಾಲಿ
ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ. ಎ. ತಿಮ್ಮನಗೌಡ ಅತಿಥಿಗಳನ್ನು
ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶ ಮತ್ತು ಅಗತ್ಯತೆಯನ್ನು ಪ್ರಸ್ತಾವಿಕ ನುಡಿಯಲ್ಲಿ ವಿವರಿಸಿದರು.
ಹಣಕಾಸಿನ
ನಿರ್ವಹಣೆಗೆ ಸಂಬಂಧಿಸಿದ ‘ಕೌಟಿಲ್ಯ’, ಉತ್ತಮ ವ್ಯವಸ್ಥಾಪನಾ ಕೌಶಲ್ಯವನ್ನು ಅಳೆಯುವ ‘ಸಮರ್ಥ’, ಮಾರುಕಟ್ಟೆ ತಂತ್ರಗಳನ್ನು ಪರೀಕ್ಷಿಸುವ ‘ಸವ್ಯಸಾಚಿ’, ರಸಪ್ರಶ್ನೆಯ ರೂಪದಲ್ಲಿನ ‘ವಿವೇಚನ’, ಮಾನವ ಸಂಪನ್ಮೂಲ ನಿರ್ವಹಣೆಯ
‘ನಿರ್ಗುಣ’ ಹಾಗೂ ಸಾಂಸ್ಕೃತಿಕ ಪ್ರತಿಭೆಗಳಿಗೆ
‘ರಂಗಕ್ಷೇತ್ರ’ ಎಂಬ ಹೆಸರಿನಲ್ಲಿ ವೈವಿಧ್ಯಮಯ
ಸ್ಪರ್ಧೆಗಳು ಜರುಗಿದವು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 40 ಕ್ಕೂ ಹೆಚ್ಚು ಕಾಲೇಜುಗಳ
ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


