ಕಲಾಭಿ 5ನೇ ಸಂವತ್ಸರದ ಸಂಭ್ರಮ: ಕಿಶೋರ ರಂಗ ಪಯಣ 2026, ಮಕ್ಕಳ ನಾಟಕೋತ್ಸವಕ್ಕೆ ಚಾಲನೆ

Upayuktha
0

 


ಮಂಗಳೂರು: ಕಲಾಭಿ 5ನೇ ಸಂವತ್ಸರದ ಸಂಭ್ರಮ ಮತ್ತು ಕಲಾ ಹಬ್ಬಗಳ ಸಲುವಾಗಿ ನಡೆಯುವ ಮಕ್ಕಳ ನಾಟಕೋತ್ಸವಕಿಶೋರ ರಂಗ ಪಯಣ 2026”,ಮೂರು ದಿನಗಳ ಮಕ್ಕಳ ನಾಟಕೋತ್ಸವದ ಉದ್ಘಾಟನಾ ಸಮಾರಂಭವು ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಎಲ್.ಸಿ. .ಆರ್ ರಂಗಮಂದಿರದಲ್ಲಿ ಇತ್ತೀಚೆಗೆ ಜರುಗಿತು.

 

ಶ್ರೀ ಈಶ್ವರ್ ಪ್ರಸಾದ್ ಶೆಟ್ಟಿ ಸ್ಥಾಪಕರು, ಯಾತಾರ್ಥ್ ಸೋಶಿಯಲ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಿಶೋರ ರಂಗ ಪಯಣದಲ್ಲಿ ಮಕ್ಕಳ ಉತ್ಸಾಹದ ಬಗ್ಗೆ ಮತ್ತು ಇದರ ಹಿಂದಿರುವ ಕಲಾಭಿ ತಂಡದ ಪ್ರಯತ್ನದ ಬಗ್ಗೆ ಪ್ರಶಂಸಿದರು. ನಾಟ್ಯ ನಾಟಕ ಯಕ್ಷಗಾನ ಎಲ್ಲವನ್ನು ಮುನ್ನಡೆಸುತ್ತಿರುವ ಕಲಾಭಿ ಮುಂದಕ್ಕೂ  ಹೀಗೆ ಉಜ್ವಲವಾಗಿ ಬೆಳಗಲಿ ಎಂದು ಹಾರೈಸಿದರು.

 

ಕಾರ್ಯಕ್ರಮದ ಮುಖ್ಯ ಅತಿಥಿ ವಿಜಯಕ್ರಾಂತಿ, ಎಸಿಪಿ ಮಂಗಳೂರು ದಕ್ಷಿಣ ಉಪವಿಭಾಗ ಮಾತನಾಡಿ ನಾನು ಮಂಗಳೂರಿಗೆ ಬಂದಾಗ ಇಲ್ಲಿನ ಸಂಸ್ಕೃತಿ ಮತ್ತು ರಂಗ ಚಟುವಟಿಕೆಗಳನ್ನು ನೋಡಿ ಖುಷಿಯಾಯಿತು ಇಂತಹ ರಂಗ ಕಾರ್ಯಕ್ರಮಗಳನ್ನು ಬೇಸಿಗೆ ಶಿಬಿರಗಳನ್ನು ನಡೆಸಿ ಮಕ್ಕಳನ್ನು ಬೆಳೆಸಿದಲ್ಲಿ ಮಕ್ಕಳಲ್ಲಿ ಹೊಸ ಚೈತನ್ಯವನ್ನು ತುಂಬಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

ಇನ್ನೋರ್ವ ಅತಿಥಿ ರೆವರೆಂಡ್ ಫಾ. ಮೇಲ್ವಿನ್ ಡಿಕುನ್ಹ ಎಸ್ ಜೆ, ಮಕ್ಕಳ ಉತ್ಸಾಹ ಅವರಿಗೆ ಪ್ರೋತ್ಸಾಹ ನೀಡಿ ಬೆಳೆಸಿದ ಉಜ್ವಲ್ ಯುವಿ ಮತ್ತು ಕಲಾಭಿ ತಂಡದ ಕೆಲಸ ಸ್ಲಾಘನೀಯ ಎಂದರು.

 


ಕಲಾಭಿ 5ನೇ ವರ್ಷದ ಸಂವತ್ಸರದ ಸಂಭ್ರಮದ ಸಲುವಾಗಿ, ಕಲಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಕಲಾವಿದರನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ, "ಕಲಾಭಿ ಯುವ ಪುರಸ್ಕಾರ 2026" ಪ್ರಶಸ್ತಿಯನ್ನು ಕು. ರಕ್ಷ ಪೂಜಾರಿ ಅವರಿಗೆ ನೀಡಿ ಗೌರವಿಸಲಾಯಿತು.

 

 ಕಿಶೋರ ರಂಗ ಪಯಣ 2026 ಮಕ್ಕಳ ನಾಟಕೋತ್ಸವದ ಮೊದಲನೆಯ ದಿನ, ಕಲಾಭಿ ಚಿಲ್ಡ್ರನ್ಸ್ ಥಿಯೇಟರ್ ಪ್ರಸ್ತುತಪಡಿಸಿದ, ಭುವನ್ ಮಣಿಪಾಲ್ ನಿರ್ದೇಶನದ "ಅಲ್ಲಾವುದ್ದೀನ್ ಮಾಯಾ ದೀಪ" ನಾಟಕ ಪ್ರದರ್ಶನಗೊಂಡಿತು.

 

ಕಲಾಭಿಯ ಪೋಷಕಾಧ್ಯಕ್ಷ ಮಹೇಶ್ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿ, ಭಾರ್ಗವಿ ನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುರೇಶ್ ಬಿ ವರ್ಕಾಡಿ  ಅತಿಥಿಗಳನ್ನು ಸ್ವಾಗತಿಸಿ, ಉಜ್ವಲ್ ಯು ವಿ ಧನ್ಯವಾದ ಸಮರ್ಪಿಸಿದರು.

 

ಏಪ್ರಿಲ್ 25ರಂದು ಧಮನಿ ಕುಂದಾಪುರ ಪ್ರಸ್ತುತಿಯ ರೋಹಿತ್ ಬೈಕಾಡಿ ನಿರ್ದೇಶನದ "ಸೂರ್ಯ ಚಂದ್ರ" ನಾಟಕ ಹಾಗೂ ಏಪ್ರಿಲ್ 26ರಂದು ಸಂಜೆ 3 ಗಂಟೆಗೆ ಮಂಗಳೂರಿನ  ನಿರ್ದೇಶಕ ವಿಜಯ್ ಕುಮಾರ್ ಕೋಡಿಯಾಲ್ ಬೈಲ್, ಶಿಕ್ಷಣ ತಜ್ಞೆ ಸಚಿತ ನಂದಗೋಪಾಲ್ಉದ್ಯಮಿ ಶ್ರೀ ಮಹೇಶ್ ಕಾಮತ್, ಮೈಟ್ ಕಾಲೇಜು ಉಪನ್ಯಾಸಕಿ ದೀಪ್ತಿ ಶೆಟ್ಟಿ ಇವರ ಉಪಸ್ಥಿತಿಯಲ್ಲಿ, ಯೂತ್ ಐಕಾನ್ ಶರಣ್ ಚಿಲಿಂಬಿ ಅವರ ಚರ್ಚಾ ನಿರ್ವಹಣೆಯಲ್ಲಿ, 'ಎಜುಕೇಶನ್ VS ಕೋ-ಕರಿಕಕ್ಯುಲರ್ ಮತ್ತು ಮಗುವಿನ ಜೀವನದ ಮೇಲೆ ಕಲೆಯ ಪ್ರಭಾವ' ವಿಷಯದ ಮೇಲೆ "ಮಂಥನ" ಎಂಬ ಚರ್ಚೆಯು ನಡೆಯಲಿದೆ. ಸಂಜೆ ಅರಳು 2026 ಕಾರ್ಯಗಾರದ ಮಕ್ಕಳಿಂದ ಶ್ರೀ ಚರಿತ್ ಸುವರ್ಣ  ನಿರ್ದೇಶನದ " ಶಭಾಷ್" ನಾಟಕವು ನಡೆಯಲಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


 

 

Post a Comment

0 Comments
Post a Comment (0)
To Top