ಬಳ್ಳಾರಿ:
ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್
(ಬಿಐಟಿಎಂ), ಬಳ್ಳಾರಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ. ಜಗದೀಶ್ ಆರ್.ಎಂ. ಅವರು ತೈವಾನ್
ನ ನ್ಯಾಷನಲ್ ಕೌಶಿಯುಂಗ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್
ಟೆಕ್ನಾಲಜಿ (ಎನ್.ಕೆ.ಯು.ಎಸ್.ಟಿ.) ಯ
ಐಒಟಿ ಸೈಬರ್ ಸೆಕ್ಯೂರಿಟಿ ಸಂಶೋಧನಾ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಪೋಸ್ಟ್ ಡಾಕ್ಟೋರಲ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಈ ಸಂಶೋಧನೆಯನ್ನು ಪ್ರೊ. ಚಿನ್-ಶಿಹ್ ಶೈ
(ಎನ್.ಕೆ.ಯು.ಎಸ್.ಟಿ.) ಹಾಗೂ ಡಾ.
ಮೊಹಮ್ಮದ್ ಅಲಿ ಹುಸ್ಸೇನ್, ಡೀನ್
(ಆರ್ & ಡಿ), ಶ್ರೀನಿಧಿ ಇನ್ಸ್ಟಿಟ್ಯೂಟ್
ಆಫ್ ಸೈನ್ಸ್ ಮತ್ತು ಟೆಕ್ನಾಲಜಿ, ಹೈದರಾಬಾದ್ ಅವರ ಮಾರ್ಗದರ್ಶನದಲ್ಲಿ ಕೈಗೊಂಡಿದ್ದಾರೆ.
“ಐಒಟಿ
ಬಳಸಿ ಬೆಳೆಗಳ ಮೇಲ್ವಿಚಾರಣೆಗಾಗಿ ಅಡಾಪ್ಟಿವ್ ಕೃತಕ ಬುದ್ಧಿಮತ್ತೆ (ಎಐ)
ಆಧಾರಿತ ತಂತ್ರಜ್ಞಾನ” ಎಂಬ ಸಂಶೋಧನಾ ವಿಷಯದ
ಮೇಲೆ ಕಾರ್ಯನಿರ್ವಹಿಸಿರುವ ಡಾ. ಜಗದೀಶ್ ಅವರು,
ಈ ಶೈಕ್ಷಣಿಕ ಪ್ರಯಾಣವು ಅತ್ಯಂತ ಸಮೃದ್ಧ ಮತ್ತು ಜ್ಞಾನವರ್ಧಕ ಅನುಭವವಾಗಿದ್ದು, ಐಒಟಿ ಹಾಗೂ ಕೃತಕ
ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ತಮ್ಮ ಸಂಶೋಧನಾ ಸಾಮರ್ಥ್ಯವನ್ನು
ಮತ್ತಷ್ಟು ವಿಸ್ತರಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಸಾಧನೆಯ ಕುರಿತು ಸಂಸ್ಥೆಯ ಅಧ್ಯಕ್ಷ ಡಾ. ಯಶವಂತ್ ಭೂಪಾಲ್
ಅವರು ಸಂತಸ ವ್ಯಕ್ತಪಡಿಸಿ, ನಮ್ಮ
ಸಂಸ್ಥೆಯ ಅಧ್ಯಾಪಕರು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಇದು ನಮ್ಮ ಸಂಸ್ಥೆಯ
ಗೌರವವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ತಿಳಿಸಿದ್ದಾರೆ.
ಸಂಸ್ಥೆಯ
ನಿರ್ದೇಶಕ ವೈ. ಜೆ. ಪೃಥ್ವಿರಾಜ್, ಕಾಲೇಜಿನ
ಪ್ರಾಚಾರ್ಯ ಡಾ. ಯಡವಳ್ಳಿ ಬಸವರಾಜ್,
ಡೀನ್ ಗಳು, ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು
ಅಭಿನಂದನೆ ಸಲ್ಲಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


