ಆಳ್ವಾಸ್‌ನಲ್ಲಿ ಮೆಟಾಸಾಫ್ಟ್ ಮತ್ತು ಕಾಕುಂಜೆ ಸಾಫ್ಟ್ ವೇರ್ ಕಚೇರಿ ಉದ್ಘಾಟನೆ

Upayuktha
0

 


ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದ ಟೆಕ್ನಾಲಜಿ ಸೆಂಟರ್ನಲ್ಲಿ ಮೆಟಾಸಾಫ್ಟ್ ಐಟಿ ಸೊಲ್ಯೂಷನ್ಸ್ ಹಾಗೂ ಕಾಕುಂಜೆ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಹೊಸ ಕಚೇರಿ ಹಾಗೂ ಸಂಶೋಧನೆನವೀನತೆ ಕೇಂದ್ರವನ್ನು ಗುರುವಾರ ಉದ್ಘಾಟಿಸಲಾಯಿತು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೊಸ ಕಚೇರಿ ಉದ್ಘಾಟಿಸಿ ಮಾತನಾಡಿ, ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು- ತಂತ್ರಜ್ಞಾನ, ಸಂಶೋಧನೆ ಹಾಗೂ ಉದ್ಯೋಗಾವಕಾಶಗಳ ಸಮಗ್ರ ಪರಿಸರವನ್ನು ಒದಗಿಸುವ ವಿಶಿಷ್ಟ ಕ್ಯಾಂಪಸ್ ಆಗಿ ಹೊರಹೊಮ್ಮಿದೆ. ಇಲ್ಲಿ ಸ್ಥಾಪಿಸಿರುವ ವಿವಿಧ ಐಟಿ ಕಂಪನಿಗಳು ಮತ್ತು ಸ್ಟಾರ್ಟಪ್ಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ. ಕೇಂದ್ರವು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್, ಪ್ರಾಜೆಕ್ಟ್, ಉದ್ಯೋಗಾವಕಾಶಗಳು ಹಾಗೂ ಸಂಶೋಧನೆನವೀನತೆ ಕ್ಷೇತ್ರಗಳಲ್ಲಿ ಪೂರಕ ವೇದಿಕೆಯಾಗಿ  ಕಾರ್ಯನಿರ್ವಹಿಸಲಿದೆ ಎಂದರು.


ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಮೆಟಾಸಾಫ್ಟ್ ಸಂಸ್ಥೆಯ ಕಾರ್ಯಾಕಾರಿ ನಿರ್ದೇಶಕಿ ಸರಿತಾ ಪ್ರವೀಣ್, ಅಂಚನ್ ಆಯುರ್ವೇದಿಕ್ ಇಂಡಸ್ಟ್ರೀಸ್ ಸಂಸ್ಥಾಪಕ ಡಾ. ನಾರಾಯಣ ಟಿ. ಅಂಚನ್, ಆಗರಿ ಎಂಟರ್ಪ್ರೈಸಸ್ ಮಾಲೀಕ ಆಗರಿ ರಾಘವೇಂದ್ರ ರಾವ್, ಪ್ರಿಯಾ ಅಸೋಸಿಯೇಟ್ಸ್ನ ಡಾ. ಪ್ರಿಯಾ ಹಾಗೂ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್, ಉಪಸ್ಥಿತರಿದ್ದರು.


ಕಾಕುಂಜೆ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಕೆ. ಭಟ್ ಕಾಕುಂಜೆ, ಮಾಲತಿ ಎಸ್ಎನ್ ಭಟ್ ಕಾಕುಂಜೆ, ಅಪರ್ಣಾ ಜಿಕೆ ಭಟ್ ಕಾಕುಂಜೆ, ತಂಡದ ಸದಸ್ಯರು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top