ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಕೆನರಾ ಶಾಲೆಯಲ್ಲಿ ಸನ್ಮಾನ

Upayuktha
0

ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನವೇ ಯಶಸ್ಸಿನ ಮೂಲ: ಮುಖ್ಯೋಪಾಧ್ಯಾಯಿನಿ ಅರುಣಾಕುಮಾರಿ





ಮಂಗಳೂರು: ನಗರದ ಡೊಂಗರಕೇರಿಯಲ್ಲಿರುವ ಕೆನರಾ ಪ್ರಧಾನ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ಅವರ ಸಾಧನೆಯನ್ನು ಕೊಂಡಾಡಲಾಯಿತು. ಶಾಲೆಯ ಶೈಕ್ಷಣಿಕ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮದ ಜೊತೆಗೆ ಶಿಕ್ಷಕರ ಸಮರ್ಪಿತ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲವೂ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.


ಕೆನರಾ ಹೈಸ್ಕೂಲ್ (ಮೈನ್)ನ ಮುಖ್ಯಶಿಕ್ಷಕರಾದ ಅರುಣಾಕುಮಾರಿ ಮಾತನಾಡಿ, ಕೆನರಾ ಹೈಸ್ಕೂಲ್‌ನ ಕನ್ನಡ ಮಾಧ್ಯಮದ ವಿದ್ಯಾರ್ಥಿ ಈ ಬಾರಿ ಜಿಲ್ಲೆಗೆ ಪ್ರಥಮ ಟಾಪರ್ ಆಗಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಕಲಿಕೆಯ ವಿಚಾರದಲ್ಲಿ ಮಾತ್ರವಲ್ಲ ಇತರ ಪಠ್ಯೇತರ ವಿಚಾರದಲ್ಲೂ ಸಾಕಷ್ಟು ಮುಂದೆ ಇದ್ದಾರೆ. 8 ಮಂದಿ 600ಕ್ಕಿಂತ ಹೆಚ್ಚು ಅಂಕ ಪಡೆದವರಿದ್ದಾರೆ. ಯಾವುದೇ ಟ್ಯೂಶನ್ ಇಲ್ಲದೇ ಬರೀ ತರಗತಿಯ ಪಾಠದಿಂದಲೇ ಈ ಸಾಧನೆಯನ್ನು ಮಾಡಿದ್ದಾರೆ ಎಂದರು.


“ವಿದ್ಯಾರ್ಥಿಗಳ ದೃಢ ಪರಿಶ್ರಮ, ಶಿಸ್ತು ಮತ್ತು ಶಿಕ್ಷಕರ ಸೂಕ್ತ ಮಾರ್ಗದರ್ಶನದಿಂದ ಈ ಯಶಸ್ಸು ಸಾಧ್ಯವಾಗಿದೆ. ಮುಂದಿನ ವಿದ್ಯಾಭ್ಯಾಸದಲ್ಲಿಯೂ ಇದೇ ಮನೋಭಾವವನ್ನು ಮುಂದುವರಿಸಬೇಕು” ಎಂದು ಹೇಳಿದರು.


“ಶಾಲೆಯ ಸಾಧನೆ ನಿರಂತರವಾಗಿರಲು ಶಿಕ್ಷಕರ ನಿಷ್ಠೆ ಮತ್ತು ವಿದ್ಯಾರ್ಥಿಗಳ ಏಕಾಗ್ರತೆ ಮುಖ್ಯ. ಈ ಸಾಧನೆ ಎಲ್ಲರ ಸಂಯುಕ್ತ ಪ್ರಯತ್ನದ ಫಲ” ಎಂದು ಅವರು ಅಭಿಪ್ರಾಯಪಟ್ಟರು.


ಡೊಂಗರಕೇರಿ ಕೆನರಾ ಹೈಸ್ಕೂಲ್ ಮೈನ್‌ನ ಸಂಚಾಲಕರಾದ ಅಶ್ವಿನಿ ಕಾಮತ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯ ಕುರಿತು ಶಾಲೆಗೆ ಹೆಮ್ಮೆಯಿದೆ. ವಿದ್ಯಾರ್ಥಿಗಳು ಕಲಿಕೆಯ ವಿಚಾರದಲ್ಲಿ ತಮ್ಮ ಪರಿಶ್ರಮವನ್ನು ಫಲಿತಾಂಶದಲ್ಲಿ ತೋರಿಸಿದ್ದಾರೆ. ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಹೆತ್ತವರ ಸಹಕಾರ ಪ್ರೋತ್ಸಾಹದಿಂದ ಉತ್ತಮ ಫಲಿತಾಂಶ ಬಂದಿದೆ ಎಂದರು.


ಈ ಸಂದರ್ಭ ಕೆನರಾ ಪಿಯು ಕಾಲೇಜಿನ ಸಂಚಾಲಕ ಟಿ. ಗೋಪಾಲಕೃಷ್ಣ ಶೆಣೈ ಮಾತನಾಡಿ, ಉತ್ತೀರ್ಣತೆಗೆ  ಶಾಲೆಯ ಶಿಕ್ಷಕರ ಪರಿಶ್ರಮ ಬಹಳಷ್ಟಿದ್ದು, 600ಕ್ಕಿಂತ ಹೆಚ್ಚು ಅಂಕಗಳಿಸಲು ವಿದ್ಯಾರ್ಥಿಗಳ ಪರಿಶ್ರಮ ಹೆಚ್ಚಿದೆ. ಕೆನರಾ ಪಿಯು ಕಾಲೇಜಿನಲ್ಲಿ ಜಿಲ್ಲೆಯ ಟಾಪರ್‌ಗೆ ಉಚಿತ ಪಿಯು ಶಿಕ್ಷಣ ಹಾಗೂ 610 ಹಾಗೂ 600 ಕ್ಕಿಂತ ಜಾಸ್ತಿ ಅಂಕ ಬಂದವರಿಗೆ ಕಾಲೇಜು ಶುಲ್ಕದಲ್ಲಿ ರಿಯಾಯಿತಿಯನ್ನು ನೀಡಲಿದ್ದೇವೆ ಎಂದರು.


ಈ ಸಂದರ್ಭ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲಾ ಫಸ್ಟ್ ಟಾಪರ್ ಬಿ.ಶ್ರೀನಿಧಿ ಶೆಣೈ ಜತೆಗೆ 600ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಜತೆಗೆ ಅವರ ಹೆತ್ತವರನ್ನು ಗೌರವಿಸಲಾಯಿತು. ಈ ಬಳಿಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಮ್ಮ ಸಾಧನೆಯ ಕುರಿತು ಮಾತನಾಡಿದರು.


ಕೆನರಾ ವಿಕಾಸ್ ಪಿಯು ಕಾಲೇಜಿನ ಸಂಚಾಲಕ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ಹೈಸ್ಕೂಲ್ ಉರ್ವದ ಸಂಚಾಲಕ ಯೋಗೇಶ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ವಿದ್ಯಾಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾರಿಕಾ ವಂದಿಸಿದರು.


ಕನ್ನಡ ಮಾಧ್ಯಮದಲ್ಲಿ 623/625 ಅಂಕಗಳನ್ನು ಪಡೆದ ಶ್ರೀನಿಧಿ ಶೆಣೈ, 600 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಎಂಟು ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top