ಯಕ್ಷಮಂಜರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ ಸಮಾರೋಪ

Upayuktha
0

ಸಂಸ್ಕಾರದ ಮೂಲ ತಾಯಿ: ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ





ಕೊಂಚಾಡಿ: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ), ಕೊಂಚಾಡಿ ವತಿಯಿಂದ, ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಆಶ್ರಯದಲ್ಲಿ ಆಯೋಜಿಸಲಾದ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ “ಯಕ್ಷಮಂಜರಿ” ಯ ಅಷ್ಟಮ ದಿನದ ಸಮಾರೋಪ ಸಮಾರಂಭ ಭಕ್ತಿಭಾವದಿಂದ ನೆರವೇರಿತು.


ಕಾರ್ಯಕ್ರಮವನ್ನು ದೀಪಪ್ರಜ್ವಲನೆಗೈದು ಆಶೀರ್ವಚನ ನೀಡಿದ ಶ್ರೀ ದತ್ತಾಂಜನೇಯ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಅವರು ಮಾತನಾಡಿ, ಪಾಶ್ಚಾತ್ಯ ದೇಶಗಳಲ್ಲಿ ವರ್ಷದಲ್ಲಿ ಒಂದು ದಿನ ಮಹಿಳಾ ದಿನಾಚರಣೆ ನಡೆಯುತ್ತದೆ. ಆದರೆ ಮಾತೃಪ್ರಧಾನ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ಸ್ತ್ರೀಯನ್ನು ದೇವತಾ ಭಾವದಿಂದ ಪ್ರತಿದಿನ ಪೂಜಿಸುವ ಪರಂಪರೆ ಇದೆ ಎಂದು ಹೇಳಿದರು. “ನಮ್ಮ ಸಂಸ್ಕಾರದ ಮೂಲವೇ ತಾಯಿ. ಒಂದು ದೇಶದ ಆಧಾರವೂ ತಾಯಿಯೇ” ಎಂದು ಅವರು ಅಭಿಪ್ರಾಯಪಟ್ಟರು. ಸಂಸ್ಕಾರಯುತ ಜೀವನ ನಡೆಸುತ್ತಾ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಅವರು ಸಂದೇಶ ನೀಡಿದರು.


ಕಾರ್ಯಕ್ರಮಕ್ಕೆ ಕಲಾಪೋಷಕರೂ ಸಾಮಾಜಿಕ ಕಾರ್ಯಕರ್ತರಾದ ಆಶಾ ಪ್ರಭಾಕರ ರಾವ್ ಆರೂರು ಅಧ್ಯಕ್ಷತೆ ವಹಿಸಿದ್ದರು. ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರರಾದ ಶ್ರೀ ರಮಾನಂದ ಭಂಡಾರಿ ಶುಭಾಶಯದ ನುಡಿಗಳನ್ನಾಡಿದರು.


ವೇದಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪೂರ್ಣಿಮ ಯತೀಶ್ ರೈ, ಹಿರಿಯ ಕಲಾವಿದರಾದ ಶ್ರೀಮತಿ ಪ್ರಫುಲ್ಲಾ ನಾಯಕ್, ಮಾಜಿ ಕಾರ್ಪೊರೇಟರ್ ಶ್ರೀಮತಿ ರಂಜಿನಿ ಲೋಕೇಶ್ ಕೋಟ್ಯಾನ್ ಉಪಸ್ಥಿತರಿದ್ದರು.


ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಶ್ರೀಮತಿ ಯೋಗಾಕ್ಷಿ ಗಣೀಶ್ ತಳಕಲ್ ಹಾಗೂ ಭರತನಾಟ್ಯ ಕ್ಷೇತ್ರದ ಸಾಧನೆಗಾಗಿ ಡಾ. ಸೌಮ್ಯ ಸುಧೀಂದ್ರ ರಾವ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ರವಿ ಅಲೆವೂರಾಯ, ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರ ಬಾಲಕೃಷ್ಣ ಕೊಟ್ಟಾರಿ, ಕಾವಿ ಸುಬ್ರಮಣ್ಯ ದೇವಸ್ಥಾನದ ಪ್ರಭಾಕರ ರೈ, ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ, ಆನಂದ ಶೆಟ್ಟಿ, ಸದಾನಂದ ದೇವಾಡಿಗ, ಪುರುಷೋತ್ತಮ ಪೂಜಾರಿ, ನಾಗೇಶ ಕೋಟ್ಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಮಧುಸೂದನ ಅಲೆವೂರಾಯ, ಅಧ್ಯಕ್ಷೆ ಗೀತಾಲಕ್ಷ್ಮೀಶ ಹಾಗೂ ಪದಾಧಿಕಾರಿಗಳಾದ ಮೋಹಿನಿ ಗೋಪಾಲ, ಅವನೀಶ್ ಭಟ್, ಶಿವಪ್ರಸಾದ್ ಕೊಕ್ಕಡ, ಹರೀಶ್ ಪಾಟಾಳಿ, ಅರುಣ್ ಕುಮಾರ್, ಗಣೇಶ್ ಬಿ.ಜಿ., ಯೋಗೀಶ್ ದೇವಾಡಿಗ, ಸೀಮಾ ಅರುಣ್, ಪ್ರಜ್ಞಾ ವಸಂತ, ಅನುರಾಧ ಯೋಗೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನೂರಾರು ಕಲಾಭಿಮಾನಿಗಳು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.


ನಂತರ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಮಹಿಳಾ ಕಲಾವಿದರಿಂದ “ಗಿರಿಜಾ ಕಲ್ಯಾಣ” ತಾಳಮದ್ದಳೆ ಕಾರ್ಯಕ್ರಮ ಆಕರ್ಷಕವಾಗಿ ಪ್ರದರ್ಶನಗೊಂಡಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top