ಯಕ್ಷಮಂಜರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ: ಸಪ್ತಮ ದಿನ
ಕೊಂಚಾಡಿ: ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ಆಶ್ರಯದಲ್ಲಿ ಯಕ್ಷ ಸ್ನೇಹ ಕಲಾಪ್ರತಿಷ್ಠಾನ (ರಿ) ಕೊಂಚಾಡಿ ಇವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ ಯಕ್ಷಮಂಜರಿಯ ಸಪ್ತಮ ದಿನದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದ ವೇದಮೂರ್ತಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅರ್ಚಕರಾದ ಕೃಷ್ಣ ಅಡಿಗರು ಲೋಕದಲ್ಲಿ ಸಂಪೂರ್ಣ ನವರಸ ಭರಿತವಾದ ಏಕೈಕ ಕಲೆ ಅದು ಯಕ್ಷಗಾನ. ಅಷ್ಟು ಮಾತ್ರವಲ್ಲ ಇದರ ಚೆಂಡೆ ಮದ್ದಲೆಗಳ ಶಬ್ಧಗಳ ತರಂಗಾಂತರಗಳಿಗೆ ಹಾಗೂ ಭಾಗವತರ ಭಾಗವತಿಗೆ ಸಂಕೀರ್ತನೆಗಳಿಗೆ ಋಣಾತ್ಮಕ ಶಕ್ತಿಗಳನ್ನು ನಿವಾರಿಸುವ ಶಕ್ತಿ ಇದೆ ಎಂದರು.
ಆಶೀರ್ವಚನ ನೀಡಿದ ಕಟೀಲು ಶ್ರೀ ವೆಂಕಟರಮಣ ಅಸ್ರಣ್ಣರು ನಮ್ಮ ಭಾಷೆ ಉಳಿಯಬೇಕಾದರೆ ಯಕ್ಷಗಾನ ತಾಳೆಮದ್ದಳೆಗಳು ಪ್ರಧಾನಾ ಭೂಮಿಕೆಯನ್ನು ವಹಿಸುತ್ತವೆ ಅಲ್ಲದೆ ಪುರಾಣ ಕಥೆಗಳಲ್ಲಿ ಬರುವ ಪಾತ್ರಗಳನ್ನು ಆದರ್ಶವನ್ನಾಗಿರಿಸಿಕೊಂಡರೆ ಒಬ್ಬ ವ್ಯಕ್ತಿ ಧರ್ಮ ಮಾರ್ಗದಲ್ಲಿ ನಡೆಯಲು ದಾರಿದೀಪವಾಗುತ್ತವೆ. ಆದ ಕಾರಣ ಮಕ್ಕಳು ಮಹಿಳೆಯರು ಇಂತಹವುಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ ಸಹಾಯಕ ಪೋಲೀಸ್ ಆಯುಕ್ತರಾದ ಶ್ರೀಮತಿ ಗೀತಾ ಕುಲಕರ್ಣಿ ಇವರು ಸೈಬರ್ ಕ್ರೈಮ್ ನಿಂದ ಆಗುವ ಅನಾಹುತಗಳ ಬಗ್ಗೆ ಹಾಗೂ ಅವುಗಳನ್ನು ತಡೆಯುವ ಬಗ್ಗೆ ತಿಳಿ ಹೇಳಿ ಜಾಗೃತಿ ಮೂಡಿಸಿದರು ವೇದಿಕೆಯಲ್ಲಿ ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರರಾದ ಡಾ. ಜಗದೀಶ ಶೆಟ್ಟಿ, ಉದಯವಾಣಿಯ ಉಪಾಧ್ಯಕ್ಷರಾದ ಆನಂದ ಕೆ., ಮಾಜಿ ಕಾರ್ಪೋರೇಟರ್ ರಾಜೇಶ ಕೆ. ಹಿರಿಯರಾದ ರಾಘವ ಕೊಂಚಾಡಿ, ಆನಂದ ಶೆಟ್ಟಿ ಸರಯೂ ಮಹಿಳಾ ವೃಂದ ಕೋಡಿಕಲ್ ಇದರ ಸಂಚಾಲಕಿ ವಿಜಯಲಕ್ಷ್ಮೀ ನಿಡ್ವಣ್ಣಾಯ ಉಪಸ್ಥಿತರಿದ್ದರು.
ಈ ಸಂಧರ್ಭ ಯಕ್ಷ ಸ್ನೇಹ ಕಲಾಪ್ರತಿಷ್ಠಾನದ ಗೌರವಾಧ್ಯಕ್ಷರಾದ ಮಧುಸೂದನ ಅಲೆವೂರಾಯ ಆಧ್ಯಕ್ಷೆ ಗೀತಾಲಕ್ಷ್ಮೀಶ, ಪ್ರತಿಷ್ಠಾನದ ಪದಾಧಿಕಾರಿಗಳಾದ ಮೋಹಿನಿ ಗೋಪಾಲ, ಅವನೀಶ ಭಟ್, ಶಿವಪ್ರಸಾದ್ ಕೊಕ್ಕಡ, ಹರೀಶ ಪಾಟಾಳಿ, ಅರುಣ್ ಕುಮಾರ್, ಗಣೇಶ ಬಿ.ಜಿ., ಯೋಗೀಶ ದೇವಾಡಿಗ, ಸೀಮಾ ಅರುಣ್, ಪ್ರಜ್ಞಾ ವಸಂತ, ಅನುರಾಧ ಯೋಗೀಶ, ಆದ್ಯಾ, ಲಕ್ಷ್ಯಾ, ಕೃತಿ, ಹೃತ್ವಿ, ಲಕ್ಷಾ, ವೃಷಭೇಂದ್ರ, ಲವಿನಾ ಹಾಗೂ ನೂರಾರು ಕಲಾಭಿಮಾನಿಗಳು ಉಪಸ್ಥಿತರಿದ್ದರು. ನಂತರ ಸರಯೂ ಮಹಿಳಾ ವೃಂದ ಕೋಡಿಕಲ್ ಇದರ ಕಲಾವಿದರಿಂದ ಏಕಾದಶೀ ಶ್ರೀದೇವಿ ಮಹಾತ್ಮೆ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

