ಮಂಗಳೂರು: ಕೆಎಂಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಮತ್ತು ಆಯುಷ್ ಫೆಡರೇಶನ್ ಆಫ್ ಇಂಡಿಯಾ ದಕ್ಷಿಣ ಕನ್ನಡ, ಮಂಗಳೂರು ಮತ್ತು ದಕ್ಷಿಣ ಕನ್ನಡದ ಇತರ ತಾಲ್ಲೂಕುಗಳ ಸಹಯೋಗದೊಂದಿಗೆ (ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾದಿನದಂದು) ಸಿಎಂಇ ಮತ್ತು ಸನ್ಮಾನ ಕಾರ್ಯಕ್ರಮವು ಆಸ್ಪತ್ರೆಯ ಸಮ್ಮೇಳನ ಸಭಾಭವನದಲ್ಲಿ ಭಾನುವಾರ (ಮಾರ್ಚ್ 8) ಸಂಜೆ 4:00 ಗಂಟೆಗೆ ನಡೆಯಿತು.
ಮೊದಲಿಗೆ ಡಾ ಸಂಜನಾ ಅವರಿಂದ ಪ್ರಾರ್ಥನೆ ನಡೆಯಿತು. ಡಾ ಕೃಷ್ಣ ಗೋಖಲೆ ಅಧ್ಯಕ್ಷತೆಯಲ್ಲಿ ದೀಪ ಬೆಳಗಿ ನಡೆದ ಈಸಮಾರಂಭದಲ್ಲಿ ಕೆಎಂಸಿಯ ಹೆಸರಾಂತ ವೈದ್ಯರಾದ ಡಾ. ಶಿವರಾಜ್ ಪಡಿಯಾರ್ (ಪ್ರೊಫೆಸರ್ ಆಫ್ ರೂಮಟಾಲಜಿ & ಕ್ಲಿನಿಕಲ್ ಇಮ್ಯುನೊಲಾಜಿ) ಸಂಧಿವಾತದ ಬಗ್ಗೆ ಡಾ. ಸಚಿನ್ ಕೃಷ್ಣ ರಾಜ್ ಕೆ ಸಹಾಯಕ ಪ್ರಾಧ್ಯಾಪಕರು ಎಂಡೋಕ್ರೈನಾಲಜಿ ವಿಭಾಗ ಮಹಿಳೆಯರ ಥೈರಾಯಿಡ್ ಸಮಸ್ಯೆ ಬಗ್ಗೆ ಹಾಗೂ ಡಾ. ವಾಣಿ (ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ಪ್ರಾಧ್ಯಾಪಕರು, ಕರ್ನಾಟಕ ಆಯುರ್ವೇದ ವೈದ್ಯಕೀಯ ವಿಭಾಗ) ಗರ್ಭಾಶಯದ ಹಿಗ್ಗುವಿಕೆ ಬಗ್ಗೆ ಇವರಿಂದ ವೈದ್ಯಕೀಯ ಉಪನ್ಯಾಸಗಳು ನಡೆದುವು.
ಇದೇ ವೇಳೆ ಮಹಿಳಾ ದಿನಾಚರಣೆಯ ಅಂಗವಾಗಿ ಗಾಥಾ ಎಂ. ಉಪಾಧ್ಯ (ಪ್ರೊಫೆಸರ್ ಮತ್ತು ಮಾಜಿ HOD, ಚರ್ಮರೋಗ ವಿಭಾಗ, ಕೆಎಂಸಿ ಮಂಗಳೂರು) ಮತ್ತು ಡಾ. ರೋಹಿಣಿ ಭಾರದ್ವಾಜ್ (ಮಾಜಿ HOD, ಆರ್‌ಎಸ್‌ಬಿಕೆ ವಿಭಾಗ, ಕೆವಿಜಿ ಆಯುರ್ವೇದ ವೈದ್ಯಕೀಯ ಕಾಲೇಜು, ಸುಳ್ಯ) ಇವರನ್ನು ಹಣ್ಣು ಹಾರ ಫಲಕ ಸಹಿತ ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಡಾ ಸುರೇಶ ನೆಗಳಗುಳಿ ಹಾಗೂ ಉಡುಪಿ ಘಟಕದ ಡಾ ನಾರಾಯಣ ಟಿ ಅಂಚನ್ ಉಪಸ್ಥಿತರಿದ್ದರು. ಎಎಫ್‌ಐ, ಮಂಗಳೂರು ಅಧ್ಯಕ್ಷರಾದ ಡಾ ಜ್ಯೋತಿ ಕಾರ್ನಿಕ್ ಎಲ್ಲರಿಗೂ ಸ್ವಾಗತ ಕೋರಿದರು. ಕಾರ್ಯದರ್ಶಿ ಟಿಪ್ಪಣಿ ಸಹಿತವಾಗಿ ಡಾ. ಧನಂಜಯ್ ಭಟ್, ಧನ್ಯವಾದ ಸಮರ್ಪಿಸಿದರು. ಕೆಎಂಸಿಯ ಸಮಾಲೋಚಕ ಕಾರ್ತಿಕ್ ಸಂಪೂರ್ಣ ನಿರ್ವಹಣೆ ಮಾಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

