ಮಂಗಳೂರು ವಾಸಿ ಹಳೇ ಮೈಸೂರು ವಿಪ್ರಕೂಟ
ಮಂಗಳೂರು: ನಮ್ಮವರು ವಿಪ್ರಕೂಟ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಕುಟುಂಬದೊಂದಿಗೆ ಜೊತೆಗೂಡಿ, ಶ್ರೀ ಶಿಕಾರಿಪುರ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ವಿಷ್ಣುಸಹಸ್ರನಾಮ ಪಠಣದೊಂದಿಗೆ, ಪುಷ್ಪಾರ್ಚನೆ ಸಹಿತ ಯುಗಾದಿಯ ಮಹಾಪೂಜೆಯನ್ನು ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸಭಾಂಗಣದಲ್ಲಿ ಭಾನುವಾರ (ಮಾ.22) ದಂದು ಶ್ರದ್ಧಾ, ಭಕ್ತಿ ಪೂರ್ವಕದಿಂದ ಆಚರಿಸಿದರು.
ಮಹಾಪೂಜೆಯ ನಂತರ ಶ್ರೀ ಶಿಕಾರಿಪುರ ಕೃಷ್ಣಮೂರ್ತಿ ಅವರು ಪಂಚಾಂಗ ಶ್ರವಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮತ್ತು ಪಂಚಾಂಗ ನೋಡುವ ಮತ್ತು ಓದುವ ಕ್ರಮವನ್ನು ಸವಿವರವಾಗಿ ತಿಳಿಸಿಕೊಟ್ಟರು.
ಕುಮಾರಿ ಶ್ರೀ ಗೌರಿ ಯುಗಾದಿಯ ಸಂದೇಶವನ್ನು ವಿವರವಾಗಿ ತಿಳಿಸಿದರು.
ಯುಗಾದಿ ಸಂಭ್ರಮವೂ ಇನ್ನು ಉತ್ತಮವಾಗಿ ಮೂಡಿಬರಲು ಕುಮಾರಿ ಸ್ಪಂದನಾ ವೆಂಕಟೇಶ್ ಪ್ರಸಾದ್ ರಿಂದ ಗಾಯನ ಮತ್ತು ಕುಮಾರಿಯರಾದ ಶ್ರೀಲಕ್ಷ್ಮಿ, ಶ್ರೀಗೌರಿ, ಮತ್ತು ಧಾತ್ರಿ ಮಾಧವ ರವರಿಂದ ಭಗವದ್ಗೀತೆ ಅಧ್ಯಾಯ 16 ರನ್ನು ಪಠಿಸಿ ಹೆಚ್ಚಿನ ಮೆರುಗನ್ನು ತಂದರು.
ಶ್ರೀಶಾ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಕುಟುಂಬಕ್ಕೆ ಒಂದರಂತೆ ಪಂಚಾಂಗವನ್ನು ಉಚಿತವಾಗಿ ಸೊಸೈಟಿಯ ಅಧ್ಯಕ್ಷರು ಮತ್ತು ನಮ್ಮವರು ಸಂಘದ ಉಪಾಧ್ಯಕ್ಷರಾದ ಶ್ರೀ ಗುರುರಾಜ್ ಎಂ ಎಸ್ ರವರು ಎಲ್ಲರಿಗೂ ವಿತರಿಸಿದರು.
ಸಂಘದ ಅಧ್ಯಕ್ಷರಾದ ಶ್ರೀ ಸಂಜಯ್ ಕಾರಂತ್ ರವರು ಎಲ್ಲರನ್ನೂ ಸ್ವಾಗತಿಸಿ, ಮುಂದೆ ಸಂಘದಿಂದ ನಡೆಸುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಸಂಘದ ಖಜಾಂಚಿಯಾದ ಶ್ರೀ ವೆಂಕಟೇಶ್ ಪ್ರಸಾದ್ ನಿರೂಪಿಸಿದರು. ಕಾರ್ಯದರ್ಶಿ ಎಂ ಎಸ್ ಮಾಧವ ಶಿವಮೊಗ್ಗ ಎಲ್ಲರಿಗೂ ವಂದನೆ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಸಂಜನಾ ಮೂರ್ತಿ, ಸಹ ಕಾರ್ಯದರ್ಶಿಗಳಾದ ಶ್ರೀಮತಿ ನೇತ್ರಾ ಕುಮಾರ್, ಶ್ರೀ ಅನಿಲ್ ಶಾಸ್ತ್ರಿ, ಶ್ರೀ ಶ್ರೀಧರ ಹಾಗೂ ಹಿರಿಯ ಸದಸ್ಯರಾದ ಶ್ರೀ ಡಾII ಶ್ರೀನಿವಾಸ್, ಡಾ. ಮುರಳೀಧರ್ ರವರು ಉಪಸ್ಥಿತರಿದ್ದರು.
ನಮ್ಮ ಯುಗಾದಿ ಸಂಭ್ರಮದಲ್ಲಿ ಸ್ತೋತ್ರ ಪಠಣ, ಹಾಡು, ಭಜನೆ, ಧ್ಯಾನ ಮಾಡಿ ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯ ಕರುಣಿಸಿಲಿ ಎಂದೂ ವಿಶೇಷವಾಗಿ ಪಾರ್ಥಿಸಿ ಯುಗಾದಿಯ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.


