ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವಾರ್ಷಿಕ ಉತ್ಸವದಲ್ಲಿ ಸಾಹಿತ್ಯ ಗಾನ, ನೃತ್ಯ ವೈಭವ

Upayuktha
0

 



ಕಾಸರಗೋಡು: ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ 2026ನೇ ಸಾಲಿನ ವಾರ್ಷಿಕ ಉತ್ಸವವು ಇತ್ತೀಚೆಗೆ ವಿಜೃಂಭಣೆಯಿಂದ ಜರಗಿತು. ಉತ್ಸವದ ಅಂಗವಾಗಿ ಕಾಸರಗೋಡು ಕನ್ನಡತಿ ಎಂದೇ ಖ್ಯಾತರಾದ ಡಾ. ವಾಣಿಶ್ರೀ ಅವರ ಸಾರಥ್ಯದ “ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ” ವತಿಯಿಂದ ಸಾಹಿತ್ಯ, ನೃತ್ಯ ಮತ್ತು ಗಾನಾಮೃತ ಕಾರ್ಯಕ್ರಮ ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಅವರು ಕನ್ನಡ ಸಾಹಿತ್ಯವನ್ನು ಸೊಗಸಾಗಿ ಸಾದರಪಡಿಸಿದರು. ತನುಷ, ಮಾನ್ವಿ, ಮೋಕ್ಷ ಹಾಗೂ ಮುಕ್ತಿ ಅವರ ಯೋಗನೃತ್ಯಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಸೀತಾರಾಮ್ ಹಾಗೂ ಅಮೃತ ಅವರ ಭಕ್ತಿಗಾನವೂ ಕಲಾರಸಿಕರನ್ನು ಆಕರ್ಷಿಸಿತು.


ಆತ್ಮಿಕ, ಜಾಹ್ನವಿ, ಹರ್ಷಿಷ್, ಯಶಸ್ವಿನಿ, ಗ್ರೀಷ್ಮ, ಮುಕ್ತಿ ಬಿ.ಆರ್., ಮೋಕ್ಷ ಬಿ.ಆರ್., ಐಶ್ವರ್ಯ ಮಲ್ಲ, ಅಮೃತ ಮಲ್ಲ, ತೇಜಸ್ವಿನಿ, ಸೌಮ್ಯ, ರಿಷಂತ್, ಅದ್ಯಾ ಮೊದಲಾದ ಮಕ್ಕಳು ಹಾಗೂ ಯುವ ಕಲಾವಿದರು ತಮ್ಮ ಪ್ರತಿಭೆಯನ್ನು ಮೆರೆದರು.


20 ಕ್ಕಿಂತ ಹೆಚ್ಚು ವಿಧಗಳ ನೃತ್ಯಗಳು ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡವು. ಮೂರು ವಿಶೇಷ ಯೋಗನೃತ್ಯಗಳು, ಯುವತಿಯರ ಸಮೂಹ ಜನಪದ ನೃತ್ಯ, ಮಹಿಳೆಯರ ಅಭಿನಯ ನೃತ್ಯ ಹಾಗೂ ಮಕ್ಕಳ ಸಮೂಹ ಭಕ್ತಿ ನೃತ್ಯ ಗಮನ ಸೆಳೆದವು.


ಡಾ. ವಾಣಿಶ್ರೀ ಅವರ “ಒಲಿದು ಬಾರಮ್ಮ” ನೃತ್ಯ ಪ್ರದರ್ಶನವು ಪ್ರೇಕ್ಷಕರಲ್ಲಿ ಕನ್ನಡಾಭಿಮಾನವನ್ನು ಮತ್ತಷ್ಟು ಪ್ರಚೋದನೆಗೊಳಿಸಿತು.


“ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ”ಯ 186ನೇ ಕಾರ್ಯಕ್ರಮವಾಗಿದ್ದ ಈ ಸಂಭ್ರಮವನ್ನು ಡಾ. ವಾಣಿಶ್ರೀ ಅವರು ನಿರ್ದೇಶಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸ್ಮರಣಿಕೆ ಹಾಗೂ ಗೌರವಧನ ನೀಡಿ ಸನ್ಮಾನಿಸಲಾಯಿತು. ಡಾ. ವಾಣಿಶ್ರೀ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ವಿದ್ಯಾಧರ ಮಲ್ಲ, ಉಮೇಶ್ ಪಟ್ಟಾಜೆ, ಸೌಮ್ಯ ಮಲ್ಲ, ರೋಹಿತ್ ಮಲ್ಲ, ಅಚ್ಯುತ ಭಟ್, ಶಶಿಕಲಾ, ರೇಖಾ ಸುದರ್ಶನ್ ವೆಂಕಟೇಶ್ವರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Post a Comment

0 Comments
Post a Comment (0)
To Top