ಮಂಗಳೂರು: ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಇವರು ಭರತಮುನಿ ಜಯಂತಿಯ ಉತ್ಸವವನ್ನು ಕಾಸರಗೋಡಿನ ಎಡನೀರು ಮಠದ ಭಾರತೀ ಕಲಾ ಸದನ ಇಲ್ಲಿ ಇದೇ ಬರುವ ಭಾನುವಾರ ಮುಂಜಾನೆ ಗಂಟೆ 10 ರಿಂದ ಆಯೋಜಿಸಲಾಗಿದೆ. ಕರಾವಳಿ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷೆ ರಾಜಶ್ರೀ ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು, ಪೂಜ್ಯ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ ಆಶೀರ್ವದಿಸಲಿರುವರು.
ಹಿರಿಯ ಯಕ್ಷಗಾನ ಕಲಾವಿದರು ಸಂಘಟಕರು ಆದ ಕೆರೆಮನೆ ಶಿವಾನಂದ ಹೆಗಡೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಭರತಮುನಿಗೆ ನುಡಿ ನಮನವನ್ನು ವಿದುಷಿ ಮಂಜುಳಾ ಸುಬ್ರಮಣ್ಯ ಮಾಡಲಿರುವರು. ಹಿರಿಯ ನೃತ್ಯ ಗುರು ವಿದುಷಿ ಶಶಿಕಲಾ ಟೀಚರ್ ನೃತ್ಯನಿಕೇತನ ಕಾಸರಗೋಡು ಇವರಿಗೆ ಗುರುನಮನವನ್ನು ಸಲ್ಲಿಸಲಾಗುವುದು.
ಪುತ್ತೂರಿನ ವೈಷ್ಣವಿ ನಾಟ್ಯಾಲಯ, ನಾಟ್ಯರಂಗ ಎಡನೀರು, ಶಿವಾಂಜಲಿ ಕಲಾ ಕೇಂದ್ರ ಪೆರ್ಲ, ಸವಿಜೀವನಂ ನೃತ್ಯ ಕಲಾಕ್ಷೇತ್ರ ಕೊಂಡೆವೂರು, ಪದಯಾನ ಪದ್ಯಾಣ ಇಲ್ಲಿನ ವಿದ್ಯಾರ್ಥಿಗಳಿಂದ, ನಾಟ್ಯಾರ್ಚನೆ ಸಮೂಹ ನೃತ್ಯ ಪ್ರದರ್ಶನ ಕಾರ್ಯಕ್ರಮ ಹಾಗೂ ಅಪರಾಹ್ನ ಭರತನಾಟ್ಯ ಪ್ರಸ್ತುತ ಶ್ರೀ ವಿನೋದ ವಿದೇಶಿ ಗೌರಿ ಸಾಗರ್ ಬೆಂಗಳೂರು ಇವರು ಪ್ರಸ್ತುತಪಡಿಸಲಿರುವರು. ಕಣ್ಣನ್ ಪಾಟಾಳಿ ಸ್ಮಾರಕ ಕಥಕಳಿ ಟ್ರಸ್ಟ್, ಬೇಕಲ ಕಾಸರಗೋಡು ಇವರಿಂದ ಕುಚೇಲ ವ್ರತಂ ಎಂಬ ಕಥಕ್ಕಳಿ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ನೃತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


