ಅರುಣ ನಕ್ಕಾಗ...

Upayuktha
0


ಹುಡುಗನ ಹೆಸರು ಅರುಣ್. ತೆಲಂಗಾಣದ ಬೊಪ್ಪಳಪಲ್ಲಿಯ ನಾಲಪ್ಪುಚಟುವಲ್ಲಿ ಊರಿನವನು. ಅತ್ಯಂತ ಬಡತನದ ಕುಟುಂಬದ ಅರುಣ್, ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾನೆ. ಚಹಾ ಕುಡಿಯುವಾಗ ಆ ಲಾರಿಯ ಚಾಲಕ ಒಂದು ಜೋಕ್ ಹೇಳುತ್ತಾನೆ. ಅದನ್ನು ಕೇಳಿದ ಅರುಣ್ ಮುಗ್ಧತೆಯಿಂದ ನಗುವಾಗ ಕೈಯಲ್ಲಿದ್ದ ಬಿಸಿ ಚಹಾದ ಗ್ಲಾಸು ಬಿದ್ದು ಹೋಯಿತೇನೋ ಎನ್ನುವಷ್ಟರಲ್ಲಿ ಬಿಸಿ ತಾಳಲಾರದೆ ಮತ್ತೊಂದು ಕೈಯಲ್ಲಿ ಹಿಡಿಯುತ್ತಾನೆ. ಆದರೆ ಅವನ ನಗು ಮಾತ್ರ ಯಾರನ್ನೂ ನಗಿಸುವಂತಿತ್ತು. ಅರುಣನ ಈ ನಗುವನ್ನು ಚಾಲಕ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಜಾಲತಾಣದಲ್ಲಿ ಹಂಚಿಕೊಂಡ ಒಂದೂವರೆ ತಿಂಗಳಲ್ಲಿ 4 ಕೋಟಿ ವೀಕ್ಷಣೆಗಳ ದಾಖಲೆಯಾಗುತ್ತದೆ.


ಕೇವಲ ನಾಕನೆಯ ತರಗತಿಗೆ ಶಾಲೆಯನ್ನು ಬಿಟ್ಟಿದ್ದ ಅರುಣ್ ಈ ವಿಡಿಯೋ ವೈರಲ್ ಆದ ನಂತರ ಚಾಲಕನ ಸಹಾಯ ಮತ್ತು ಬೆಂಬಲದಿಂದ ಅರುಣ್ 10ನೆಯ ತರಗತಿಯಲ್ಲಿ ಉತ್ತೀರ್ಣನಾಗಿದ್ದಾನಂತೆ. ಅರುಣ್ ಈಗ ತೆಲಂಗಾಣದಲ್ಲಿ ಒಬ್ಬ ಸೆಲೆಬ್ರಿಟಿ. ಯೂಟ್ಯೂಬ್ ಚಾನೆಲ್‌ಗಳು ಈತನನ್ನು ಸಂದರ್ಶನ ಮಾಡಿವೆ. ಅರುಣ್ ತಾನೇ ಒಂದು ಇನ್‌ಸ್ಟಾಗ್ರಾಂ ಖಾತೆ ತೆರೆದು ಕಾಮಿಡಿ ವಿಡಿಯೋಗಳನ್ನು ಮಾಡುತ್ತ ಸಾವಿರಾರು ಫಾಲೋವರ್ಸ್ ಸಂಪಾದಿಸಿದ್ದಾನೆ.


ನಗುವಿಗೆ ಜಾತಿ, ಮತ, ಧರ್ಮ, ಪ್ರದೇಶ ಅಥವಾ ಭಾಷೆಯ ಹಂಗಿಲ್ಲ ಎಂಬುದು ಅರುಣನ‌ ನಗುವಲ್ಲಿ ಸಾಬೀತಾಗಿದೆ. ಅವನ ಮುಗ್ಧ ನಗು ಎಂತಹ ಒತ್ತಡದಲ್ಲೂ ಒಂದು ಕ್ಷಣ ನಗು ತರಿಸುವ ಶಕ್ತಿಯನ್ನು ಹೊಂದಿದೆ. ಬಹುಪಾಲು ಕಾಮಿಡಿ ರೀಲ್ಸ್ ಗಳ ಕೊನೆಯಲ್ಲಿ ಅರುಣನ ನಗುವಿನ ಕ್ಲಿಪ್ ಇದ್ದೇ ಇರುತ್ತದೆ. ಸಂದರ್ಶನವೊಂದರಲ್ಲಿ, ನಾನು ನಗುವಾಗ ನಾನೊಬ್ಬ ಬಡ ಲಾರಿ ಕ್ಲೀನರ್ ಎಂಬ ನೆನಪೇ ಇರಲಿಲ್ಲ. ನನ್ನ ನಗು ಈ ಪರಿಯಲ್ಲಿ ಜನರಿಗೆ ಇಷ್ಟವಾಗುತ್ತದೆ ಎಂದು ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ. ಬಡತನದ ನೋವಿನ ನಡುವೆಯೂ ಆ ಒಂದು ಕ್ಷಣದ ನಗು ನನ್ನ ಜೀವನವನ್ನೇ ಬದಲಿಸಿತು” ಎಂದು ಭಾವುಕನಾಗಿ ಹೇಳಿದ್ದಾನೆ.


ಕನ್ನಡ ಚಲನ ಚಿತ್ರರಂಗದ ನರಸಿಂಹ ರಾಜು, ಮುಸುರಿ‌ ಕೃಷ್ಣಮೂರ್ತಿ, ಉಮೇಶ ಅವರಂಥ ಅನೇಕ ಹಾಸ್ಯ‌ನಟರು ಜನಮಾನಸದಲ್ಲಿ ಜೀವಂತವಾಗಿರೋದು ಅವರ ನಗುವಿನಿಂದಲೇ!


- ಟಿ. ದೇವಿದಾಸ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top