ಕಾನೂನು ಪಾಲನೆ, ಪಾರದರ್ಶಕ ಪರಿಹಾರ ಪ್ರಕ್ರಿಯೆಗೆ ಬದ್ಧತೆ
ಮಂಗಳೂರು: ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಯೋಜನೆಯಡಿ ನಿಡ್ಡೋಡಿ ಯೋಜನಾ ಸ್ಥಳಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಕುರಿತು ಉಡುಪಿ-ಕಾಸರಗೋಡು ಟ್ರಾನ್ಸ್‌ಮಿಷನ್ ಲಿಮಿಟೆಡ್ (UKTL) ಸ್ಪಷ್ಟನೆ ನೀಡಿದೆ.
ಯೋಜನೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಅನ್ವಯವಾಗುವ ಕಾನೂನುಗಳು, ರಾಜ್ಯ ನಿಯಮಾವಳಿಗಳು, ಸರ್ಕಾರದ ಅಧಿಸೂಚನೆಗಳು ಹಾಗೂ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ನೀಡುವ ನಿರ್ದೇಶನಗಳ ಅನುಸಾರವೇ ಕೈಗೊಳ್ಳಲಾಗುತ್ತಿದೆ ಎಂದು UKTL ತಿಳಿಸಿದೆ.
ಭೂಸ್ವಾಧೀನಕ್ಕೆ ಸಂಬಂಧಿಸಿದ ರೈಟ್ ಆಫ್ ವೇ (Right of Way) ಮತ್ತು ಪರಿಹಾರ ಪಾವತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಅತ್ಯಂತ ಪ್ರಮುಖ ಅಂಶವಾಗಿದ್ದು, ಎಲ್ಲಾ ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಭೂಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ಕೆಲಸ ಆರಂಭಿಸುವ ಮೊದಲು ಶೇಕಡಾ 100ರಷ್ಟು ಪರಿಹಾರವನ್ನು ಪಾವತಿಸುವ ನೀತಿಯನ್ನು UKTL ಅನುಸರಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಕಾನೂನು ಮತ್ತು ನಿಯಮಾವಳಿಗಳ ಪಾಲನೆಗೆ ಬದ್ಧವಾಗಿರುವುದರೊಂದಿಗೆ, ಸ್ಥಳೀಯ ಸಮುದಾಯದೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವುದಕ್ಕೂ ಸಂಸ್ಥೆ ಹೆಚ್ಚಿನ ಮಹತ್ವ ನೀಡುತ್ತಿದೆ. ಆಡಳಿತಾತ್ಮಕ ಹಾಗೂ ಅಧಿಕೃತ ಮಾರ್ಗಗಳ ಮೂಲಕ ಶಾಂತ ಹಾಗೂ ರಚನಾತ್ಮಕ ಸಂವಾದಕ್ಕೆ UKTL ಸದಾ ಸಿದ್ಧವಿದೆ ಎಂದು ಪ್ರಕಟಣೆ ತಿಳಿಸಿದೆ.
ಸ್ಥಳೀಯ ಜನರ ಆತಂಕಗಳನ್ನು ಕಾನೂನು ಚೌಕಟ್ಟಿನೊಳಗೆ ಸಮರ್ಪಕವಾಗಿ ಪರಿಹರಿಸುತ್ತಾ, ಉಡುಪಿ- ಕಾಸರಗೋಡು ವಿದ್ಯುತ್ ಪ್ರಸರಣ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದೇ ಸಂಸ್ಥೆಯ ಗುರಿಯಾಗಿದೆ ಎಂದು UKTL ಪ್ರತಿನಿಧಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


