ಮಂಗಳೂರು: ನಮ್ಮವರು (ಮಂಗಳೂರು ವಾಸಿ ಹಳೇ ಮೈಸೂರು ವಿಪ್ರಕೂಟ), ಶೃಂಗೇರಿ ಶಂಕರ ತತ್ವ ಅಭಿಯಾನಮ್ ಹಾಗೂ ಶ್ರೀ ಸುಬ್ರಹ್ಮಣ್ಯ ಸಭಾ ಸಂಯುಕ್ತ ಆಶ್ರಯದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ನಗರದ ಕರಂಗಲ್ಪಾಡಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸಭಾಂಗಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಗುರುಗಳಾದ ಡಾ. ಶಿಕಾರಿಪುರ ಕೃಷ್ಣಮೂರ್ತಿ ಮತ್ತು ಹಿರಿಯರಾದ ಶ್ರೀ ಕರುಣಾಕರ ಬೆಳ್ಳೆ, ಶ್ರೀ ಶ್ರೀಧರ ಶಾಸ್ತ್ರಿ ಹಾಗೂ ಶ್ರೀ ಉದಯಕುಮಾರ್ ಅವರ ಮಾರ್ಗದರ್ಶನದಲ್ಲಿ ಶ್ರೀರುದ್ರ ಪಠಣದೊಂದಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಸೇರಿದಂತೆ ಮಹಾಶಿವರಾತ್ರಿ ಮಹಾಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದ ಭಾಗವಾಗಿ ಸದಸ್ಯರು ಕ್ರಮಬದ್ಧವಾಗಿ ಬಿಲ್ವಾರ್ಚನೆ ಹಾಗೂ ಅಭಿಷೇಕ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿವಸ್ತೋತ್ರ ಪಠಣ, ಭಜನೆ ಹಾಗೂ ಧ್ಯಾನದ ಮೂಲಕ ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ಮತ್ತು ಆರೋಗ್ಯ ದೊರಕಲಿ ಎಂಬ ಪ್ರಾರ್ಥನೆಯೊಂದಿಗೆ ಶಿವರಾತ್ರಿ ಆಚರಣೆ ಸಾರ್ಥಕವಾಯಿತು.
ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಹಾಗೂ ಸೌಹಾರ್ದಯುತವಾಗಿ ನಡೆಸುವಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರುಗಳ ಸಹಕಾರ ಮಹತ್ವದ ಪಾತ್ರ ವಹಿಸಿತು. ಸಂಘದ ಅಧ್ಯಕ್ಷರಾದ ಶ್ರೀ ಸಂಜಯ್ ಕಾರಂತ್ ಹಾಗೂ ಶ್ರೀಮತಿ ಸುಜಾತ ಕಾರಂತ್ ದಂಪತಿಗಳು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಶ್ರೀ ವೆಂಕಟೇಶ್ ಪ್ರಸಾದ್, ಶ್ರೀಮತಿ ಸಂಜನಾ ಮೂರ್ತಿ, ಶ್ರೀ ಶ್ರೀಧರ (ಶ್ಯಾಮ್), ಶ್ರೀ ಕುಮಾರ್ ಎಂ.ಡಿ., ಶ್ರೀಮತಿ ನೇತ್ರಾ ಕುಮಾರ್ ಹಾಗೂ ಶ್ರೀ ಎಂ.ಎಸ್. ಮಾಧವ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಘೋಷಣೆ:
ಈ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳ ಘೋಷಣೆಯೂ ನಡೆಯಿತು. ಗೌರವ ಅಧ್ಯಕ್ಷರಾಗಿ ಡಾ. ಶಿಕಾರಿಪುರ ಕೃಷ್ಣಮೂರ್ತಿ ಹಾಗೂ ಅಧ್ಯಕ್ಷರಾಗಿ ಶ್ರೀ ಸಂಜಯ್ ಕಾರಂತ್ ಅಧಿಕಾರ ವಹಿಸಿಕೊಂಡರು.
ಉಪಾಧ್ಯಕ್ಷರಾಗಿ ಶ್ರೀ ಎಂ.ಎಸ್. ಗುರುರಾಜ್ ಮತ್ತು ಶ್ರೀಮತಿ ಸಂಜನಾ ಮೂರ್ತಿ, ಖಜಾಂಚಿಯಾಗಿ ಶ್ರೀ ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿಯಾಗಿ ಶ್ರೀ ಎಂ.ಎಸ್. ಮಾಧವ ನೇಮಕಗೊಂಡರು.
ಸಹ ಕಾರ್ಯದರ್ಶಿಗಳಾಗಿ ಶ್ರೀ ಅನಿಲ್ ಶಾಸ್ತ್ರಿ, ಶ್ರೀ ನರಸಿಂಹ ಕುಲಕರ್ಣಿ, ಶ್ರೀ ಶ್ರೀಧರ, ಶ್ರೀಮತಿ ನೇತ್ರಾ ಕುಮಾರ್ ಹಾಗೂ ಶ್ರೀ ಡಾ. ಸುಧೀಂದ್ರ ಅವರುಗಳು ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


