ಶ್ರೀ ಗುರು ಗೋವಿಂದ ಶ್ರೀ ಪ್ರಶಸ್ತಿಗೆ ಮಹೇಶ್ ಬೀದರಕರ ಆಯ್ಕೆ

Upayuktha
0


ಕಲಬುರಗಿ: ಕರುನಾಡಿನ ದಶದಿಕ್ಕುಗಳಲ್ಲಿ ಅದ್ವೈತ ವೇದಾಂತದ ಸಂದೇಶವನ್ನು ಪ್ರಚಾರಗೈದ ಮಹಾನ್ ಸಂತ ಶಿಶುನಾಳ ಶರೀಫರ ಗುರುಗಳಾದ ಗುರು ಗೋವಿಂದ ಭಟ್ಟರ ಸಮಾಧಿ ಸ್ಥಳವು ಹಾವೇರಿ ಜಿಲ್ಲೆಯಲ್ಲಿದೆ. ಈ ಪವಿತ್ರ ಸ್ಥಳದಲ್ಲಿ ಪ್ರತಿವರ್ಷ ಗುರುಗಳ ಸಮಾರಾಧನೆ ಶ್ರದ್ಧಾಭಕ್ತಿಯಿಂದ ನಡೆಯುತ್ತದೆ.


ಈ ಸಮಾರಾಧನೆಯ ಅಂಗವಾಗಿ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಒಬ್ಬ ಅರ್ಹ ವ್ಯಕ್ತಿಗೆ ‘ಶ್ರೀ ಗುರು ಗೋವಿಂದ ಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ.


ಈ ವರ್ಷದ ಶ್ರೀ ಗುರು ಗೋವಿಂದ ಶ್ರೀ ಪ್ರಶಸ್ತಿಗೆ ಆರ್‌ಎಸ್‌ಎಸ್ ಉತ್ತರ ಸಹ ಪ್ರಾಂತ ಗೋಸೇವಾ ಪ್ರಮುಖರು ಹಾಗೂ ಮಾಧ್ವ ಗೋಶಾಲೆಯ ಉಸ್ತುವಾರಿ ಆಗಿರುವ ಮಹೇಶ್ ಬೀದರಕರ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಈ ಗೌರವವು ತನ್ನ ಪೂರ್ವಜನ್ಮದ ಪುಣ್ಯ ಮತ್ತು ಸೌಭಾಗ್ಯವಾಗಿದ್ದು, ಇದು ಕೇವಲ ಪ್ರಶಸ್ತಿಯಲ್ಲ, ಸಂತ ಶಿಶುನಾಳ ಶರೀಫರ ಹಾಗೂ ಗುರು ಗೋವಿಂದ ಭಟ್ಟರ ಆಶೀರ್ವಾದ ಲಭಿಸಿದಂತಾಗಿದೆ ಎಂದು ತಿಳಿಸಿದ್ದಾರೆ.


********

ಗುರು ಗೋವಿಂದ ಭಟ್ಟರ 156ನೇ ಜಯಂತ್ಯುತ್ಸವ: ಮೂರು ದಿನಗಳ ಭಕ್ತಿಪೂರ್ಣ ಕಾರ್ಯಕ್ರಮಗಳು



ಕಳಸ: ಗುರುವಂದನೆ, ಸೇವೆ ಮತ್ತು ಸ್ಮರಣೆಯ ಸಂದೇಶದೊಂದಿಗೆ ಶ್ರೀ ಗುರು ಗೋವಿಂದ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಗುರು ಗೋವಿಂದಭಟ್ಟರ 156ನೇ ಜಯಂತ್ಯುತ್ಸವ ಹಾಗೂ 29ನೇ ವಾರ್ಷಿಕೋತ್ಸವವನ್ನು ಮಾರ್ಚ್ 5ರಿಂದ 7ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.


ಮಾರ್ಚ್ 5ರಂದು (ಗುರುವಾರ) ಬೆಳಗಿನ ಜಾವ 5ರಿಂದ 7.30ರವರೆಗೆ ಕಾಕಡ ಆರತಿ ಹಾಗೂ ಸ್ನಾನ ಸೇವೆ ನಡೆಯಲಿದೆ. ಬೆಳಿಗ್ಗೆ 8ರಿಂದ 11ರವರೆಗೆ ಲಘು ರುದ್ರಾಭಿಷೇಕ ಮತ್ತು ಪೂರ್ಣಾಹುತಿ ಸೇವೆಗಳು ನೆರವೇರಲಿದ್ದು, ಮಧ್ಯಾಹ್ನ 12.30ಕ್ಕೆ ಅಲಂಕಾರ ಪೂಜೆ ಮತ್ತು ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ 8ಕ್ಕೆ ಮಂಟಪೋತ್ಸವ ಹಾಗೂ ಧಾರ್ಮಿಕ ಸೇವೆಗಳು ನಡೆಯಲಿವೆ.


ಮಾರ್ಚ್ 6ರಂದು (ಶುಕ್ರವಾರ) ಕೂಡ ಬೆಳಿಗ್ಗೆ ಕಾಕಡ ಆರತಿ ಮತ್ತು ವಿಶೇಷ ಪೂಜೆಗಳು ನಡೆಯಲಿವೆ. ಬೆಳಿಗ್ಗೆ 8ರಿಂದ 10ರವರೆಗೆ ಲಘು ರುದ್ರಾಭಿಷೇಕ, ಸಪ್ತಶತೀ ಪಾರಾಯಣ ಹಾಗೂ ಕುಂಕುಮಾರ್ಚನೆ ಸೇರಿದಂತೆ ವಿಶೇಷ ಧಾರ್ಮಿಕ ಸೇವೆಗಳು ನಡೆಯಲಿವೆ. ಬೆಳಿಗ್ಗೆ 10.30ಕ್ಕೆ ಸಾಮೂಹಿಕ ಸತ್ಸಂಗ ಮತ್ತು ಭಜನಾ ಕಾರ್ಯಕ್ರಮ ನಡೆಯಲಿದೆ.


ಇದೇ ದಿನ ಮಧ್ಯಾಹ್ನ 12 ಗಂಟೆಗೆ “ಶ್ರೀ ಗುರು ಗೋವಿಂದ ಶ್ರೀ” ಪ್ರತಿಷ್ಠಾ ಪ್ರದಾನ ಸಮಾರಂಭ ನಡೆಯಲಿದ್ದು, ಶ್ರೀ ಮಹೇಶ ಬೀದರಕರ (ಗೋ ಸೇವಕರು, ಕಲಬುರ್ಗಿ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಂದರ್ಭದಲ್ಲಿ ಗದಗದ ಜಗದ್ಗುರು ಶಿವಾನಂದ ಬೃಹನ್ಮಠದ ಪೀಠಾಧಿಪತಿಗಳಾದ  ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.


ಮಧ್ಯಾಹ್ನ 1.30ಕ್ಕೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6ಕ್ಕೆ ರಥೋತ್ಸವ, ಸಂಜೆ 7ರಿಂದ 9.30ರವರೆಗೆ ಭಜನಾ ಹಾಗೂ ಮಂಟಪೋತ್ಸವ/ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ.


ಮಾರ್ಚ್ 7ರಂದು (ಶನಿವಾರ) ಬೆಳಿಗ್ಗೆ 5ರಿಂದ 7.30ರವರೆಗೆ ಕಾಕಡ ಆರತಿ ಹಾಗೂ ಸ್ನಾನ ಸೇವೆ, ಬೆಳಿಗ್ಗೆ 8ಕ್ಕೆ ವಿಶೇಷ ರುದ್ರಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪ್ರಸಾದ ವಿತರಣೆ ಮೂಲಕ ಉತ್ಸವಕ್ಕೆ ಸಮಾರೋಪವಾಗಲಿದೆ.


ಈ ಪವಿತ್ರ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗುರು ಗೋವಿಂದ ಭಟ್ಟರ ಅನುಗ್ರಹಕ್ಕೆ ಪಾತ್ರರಾಗುವಂತೆ ಟ್ರಸ್ಟ್ ಆಡಳಿತ ಮಂಡಳಿ ಮನವಿ ಮಾಡಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top