ಕಷ್ಟದಲ್ಲಿ ಕೈ ಹಿಡಿಯುವುದೇ ನಿಜ ಸ್ನೇಹ

Upayuktha
0


ಸಂತೋಷದ ಸಮಯದಲ್ಲಿ ನಮ್ಮ ಸುತ್ತ ಹಲವರು ಇರುತ್ತಾರೆ. ಆದರೆ ಕಷ್ಟ ಬಂದಾಗ ನಮ್ಮ ಜೊತೆ ನಿಲ್ಲುವವರು ಕೆಲವರೇ. ಆ ಕೆಲವರಲ್ಲಿ ಮನಸ್ಸು ತುಂಬಿ ನಮ್ಮನ್ನು ಧೈರ್ಯಪಡಿಸಿ, ಕೈಹಿಡಿದು ಮುಂದೆ ನಡೆಸುವವಳೇ ನಿಜವಾದ ಸ್ನೇಹಿತೆ. ಅದಕ್ಕೇ “ಕಷ್ಟದಲ್ಲಿ ಕೈಹಿಡಿಯುವದೇ ನಿಜ ಸ್ನೇಹ” ಎಂದು ಹೇಳುತ್ತಾರೆ.


ಜೀವನದಲ್ಲಿ ಸಮಸ್ಯೆಗಳು ಬಂದಾಗ ಕೆಲವರು ದೂರ ಸರಿಯಬಹುದು. ಆದರೆ ನಿಜ ಸ್ನೇಹಿತೆ ಮಾತ್ರ ನಮ್ಮ ನೋವನ್ನು ತನ್ನ ನೋವಿನಂತೆ ಭಾವಿಸುತ್ತಾಳೆ. ಅವಳು ದೊಡ್ಡ ಸಹಾಯ ಮಾಡದೇ ಇದ್ದರೂ, ಧೈರ್ಯದ ಮಾತು ಹೇಳಿ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ. ಕೆಲವೊಮ್ಮೆ ಒಂದು ಸಣ್ಣ ಮಾತು, ಒಂದು ನಗು ಅಥವಾ ಒಂದು ಸಾಂತ್ವನವೇ ದೊಡ್ಡ ಬಲವಾಗುತ್ತದೆ.


ನಿಜವಾದ ಸ್ನೇಹದಲ್ಲಿ ಸ್ವಾರ್ಥವಿಲ್ಲ. ಅದು ನಂಬಿಕೆ ಮತ್ತು ಪ್ರಾಮಾಣಿಕತೆಯ ಮೇಲೆ ನಿಂತಿರುತ್ತದೆ. ತಪ್ಪು ಮಾಡಿದಾಗ ತಿದ್ದಿ ಹೇಳುವವಳು, ಕಷ್ಟದಲ್ಲಿ ಜೊತೆ ನಿಲ್ಲುವವಳು, ಯಶಸ್ಸಿನಲ್ಲಿ ಸಂತೋಷಪಡುವವಳು — ಅವಳೇ ನಿಜ ಸ್ನೇಹಿತೆ.


ಸ್ನೇಹಿತೆ ಎಂದರೆ ಕೇವಲ ಜೊತೆಗಿರುವವಳು ಅಲ್ಲ; ನಮ್ಮ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳುವವಳು. ನಾವು ಮಾತಾಡದೇ ಇದ್ದರೂ ನಮ್ಮ ನೋವನ್ನು ಗುರುತಿಸುವವಳು. ಕತ್ತಲೆಯ ಸಮಯದಲ್ಲಿ ಬೆಳಕಾಗಿ ಕಾಣಿಸುವವಳು. ಜೀವನದ ಏರುಪೇರುಗಳಲ್ಲಿ ನಮ್ಮನ್ನು ಬಲವಾಗಿ ನಿಲ್ಲಿಸುವ ಶಕ್ತಿಯೇ ನಿಜವಾದ ಸ್ನೇಹ.


ಆದ್ದರಿಂದ ಸ್ನೇಹವನ್ನು ಗೌರವಿಸಿ, ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಕಷ್ಟದ ಕಾಲದಲ್ಲಿ ಕೈಹಿಡಿಯುವ ಸ್ನೇಹವೇ ಜೀವನದ ನಿಜವಾದ ಸಂಪತ್ತು ಮತ್ತು ಸದಾ ಉಳಿಯುವ ಅಮೂಲ್ಯವಾದ ಬಾಂಧವ್ಯ. 


-ಹರ್ಷಿತಾ ಗೌಡ,
ಪತ್ರಿಕೋದ್ಯಮ ವಿಭಾಗ,
ಎಸ್‌.ಡಿ.ಎಂ. ಕಾಲೇಜ್‌


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top