ಸೋಮೇಶ್ವರ ಶಿವರಾತ್ರಿ ಕವಿಗೋಷ್ಠಿ

Upayuktha
0


ಸೋಮೇಶ್ವರ, ಫೆ. 16: ಕವಿಯ ಅನುಭವದ ಅಂಶಗಳನ್ನು ಹೊತ್ತುಕೊಂಡು ಕವಿತೆಗಳು ರೂಪುಗೊಳ್ಳುತ್ತವೆ ಎಂದು ಹಿರಿಯ ಕವಿ ರೇಮಂಡ್ ಡಿ.ಕುನ್ಹಾ ತಾಕೊಡೆ ಹೇಳಿದರು.


ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಜರಗಿದ ಆಯ್ದ ಹಿರಿಯ ಕವಿಗಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಅವರು ಜಾನಪದ, ಸ್ವಾತಂತ್ರ್ಯ ಹೋರಾಟ ಹಾಗೂ ಸಾಮಾಜಿಕ ಬದ್ಧತೆಯ ವಿಷಯಗಳು ಕವಿತೆಗಳಿಗೆ ಪ್ರೇರಣೆಯಾಗುತ್ತವೆ ಎಂದರು.


ಅರ್ಚಕ ಶ್ರೀಶ ದೀಪ ಬೆಳಗಿಸಿದರು. ಸೋಮೇಶ್ವರ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ನಾಯ್ಕರು ಸಮಾಜದ ಮುಖಂಡ ಹರಿಶ್ಚಂದ್ರ ಗಟ್ಟಿ ಉಪಸ್ಥಿತರಿದ್ದರು. ಕವಿಗೋಷ್ಠಿ ಸಂಯೋಜಕ ಎಂ.ಎಸ್ ವೆಂಕಟೇಶ ಗಟ್ಟಿ ಸ್ವಾಗತಿಸಿದರು.


ಡಾ| ಸುರೇಶ್ ನೆಗಳಗುಳಿ ಕವಿಗೋಷ್ಠಿಗೆ ಚಾಲನೆ ನೀಡುತ್ತಾ ಶಿವರಾತ್ರಿಯ ಮಹತ್ವ ಸಾರುವ ಭಕ್ತಿಗೀತೆ ಹಾಗೂ ಗಝಲ್ ಓದಿದರು. ಕವಿಗಳಾದ ವಿಜಯಲಕ್ಷ್ಮೀ ಕಟೀಲು, ಅನಾರ್ಕಲಿ ಸಲೀಂ, ಸುಮಂಗಲ ದಿನೇಶ್, ಗಣೇಶ್ ಪ್ರಸಾದ್‌ ಜಿ, ಹರಿ ಪ್ರಸಾದ್‌ ಶೆಟ್ಟಿಗಾರ್, ವೆಂಕಟೇಶ ಗಟ್ಟಿ ರಶ್ಮಿಸನಿಲ್, ರೇಮಂಡ್. ಡಿ.ಕೂನಾ ತಾಕೊಡೆ ಕವನ ವಾಚನ ಮಾಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top