ನಮ್ಮವರು ನಮ್ಮ ಹೆಮ್ಮೆ: ಕೂಟ ಸಮಾಜದ ಕಣ್ಮಣಿ ಗೌರವ ಪುರಸ್ಕಾರ ಸಮಾರಂಭ

Upayuktha
0


ಮಂಗಳೂರು: ಕೂಟ ಮಹಾಜಗತ್ತು ಮಂಗಳೂರು ಅಂಗ ಸಂಸ್ಥೆಯ ವತಿಯಿಂದ 2026ನೇ ಸಾಲಿನ ನಮ್ಮವರು ನಮ್ಮ ಹೆಮ್ಮೆ ಶಿರೋನಾಮೆಯಡಿ ಕೂಟ ಸಮಾಜದ ಕಣ್ಮಣಿ ಗೌರವ ಪುರಸ್ಕಾರ ಸಮಾರಂಭವು ನಗರದ ಪಾಂಡೇಶ್ವರ ಶ್ರೀ ಗುರು ನರಸಿಂಹ ಸಭಾಭವನ ಭಾನುವಾರ ನಡೆಯಿತು.


ನಮ್ಮವರನ್ನು ನಾವು ಗುರುತಿಸಿ, ಗೌರವಿಸುವ ಕೆಲಸವನ್ನು ಮಂಗಳೂರು ಅಂಗ ಸಂಸ್ಥೆಯು ಮಾಡುತ್ತಿರುವುದು ಶ್ಲಾಘನೀಯ. ಇದೇ ರೀತಿಯ ಶ್ಲಾಘನೀಯವಾಗಿ ಕೇಂದ್ರ ಅಧಿವೇಶವನ್ನು ಮಾಡಲಿ. ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ಕೇಂದ್ರ ಸಮಿತಿ ನೀಡಲಿದೆ ಎಂದು ಕೇಂದ್ರ ಸಮಿತಿಯ ಅಧ್ಯಕ್ಷರು ಸತೀಶ್ ಹಂದೆ ಹೇಳಿದರು.


ಕೂಟ ಸಮಾಜದ ಯುವಕರು ಉದ್ಯೋಗಿಗಳಾಗುವ ಬದಲು ಉದ್ಯೋಗದಾತರಾಗಬೇಕು. ಈ ನಿಟ್ಟಿನಲ್ಲಿ ಯುವಕರನ್ನು ಸಂಘಟನೆಯೊಳಗೆ ತಂದು ಅವರಿಗೆ ಹಿರಿಯ ಉದ್ಯಮಿಗಳಿಂದ ಮಾರ್ಗದರ್ಶನ ಮಾತ್ರವಲ್ಲದೆ, ಪರಸ್ಪರ ಸಂಪರ್ಕ ಬೆಳೆಯುವ ಮೂಲಕ ಉದ್ಯಮ ಬೆಳೆಯುವ ವೇದಿಕೆಯನ್ನು ನಾವು ಕಲ್ಪಿಸಬೇಕು ಎಂದು ಉದ್ಯಮಿ ರಘುನಾಥ ಸೋಮಯಾಜಿ ಹೇಳಿದರು.


ವಿಶ್ವದ ನಾನಾ ವೇದಿಕೆಯಿಂದ 125ಕ್ಕೂ ಅಧಿಕ ಗೌರವ, ಸನ್ಮಾನಕ್ಕಿಂತ ನಮ್ಮ ಸಮುದಾಯ ನಮ್ಮವರು ನಮ್ಮ ಹೆಮ್ಮೆ ಕಾರ್ಯಕ್ರಮದಡಿ ಕೂಟ ಸಮಾಜದ ಕಣ್ಮಣಿ ಎಂದು ಗೌರವಿಸಿ ನೀಡಿರುವ ಪುರಸ್ಕಾರವು ಶ್ರೇಷ್ಠವಾಗಿದೆ. ಬದುಕು ಪಾವನವಾಯಿತು ಎಂದು ಪುರಸ್ಕಾರ ಸ್ವೀಕರಿಸಿದ ಕರ್ನಾಟಕ ಬ್ಯಾಂಕ್ ಮಾಜಿ ಆಡಳಿತ ನಿರ್ದೇಶಕ ಡಾ.ಎಂಎಸ್. ಮಹಾಬಲೇಶ್ವರ ಹೇಳಿದರು.


ಮಂಗಳೂರು ಅಂಗಸಂಸ್ಥೆಯ ಅಧ್ಯಕ್ಷರಾದ ಶ್ರೀಧರ ಹೊಳ್ಳ ಮಾತನಾಡಿ, ಕೂಟ ಸಮಾಜದ ಮಂಗಳೂರು ಅಂಗ ಸಂಸ್ಥೆಯ ಯುವ ಘಟಕವನ್ನು ಸ್ಥಾಪಿಸುವ ನಿಟ್ಟಿನಲ್ಲಿ ದತ್ತಾಂಶ ಸಂಗ್ರಹ ನಡೆಯುತ್ತಿದೆ. ಸಂಘಟನೆಯೊಳಗೆ ಸೇರುವುದರಿಂದ ಸಂಪರ್ಕ ಬೆಳೆಸುವ ಮೂಲಕ ಯುವ ಸಮುದಾಯದ ಸಾಂಘಿಕ ಬೆಳವಣಿಗೆ ಸಾಧ್ಯ ಎಂಬುದನ್ನು ತೋರಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.


ಸಮಾಜದ ಸಾಧಕರಾದ ಕನ್ನಡ ತುಳು ಸಾಹಿತ್ಯ, ಜಾನಪದ ಸಂಶೋಧನೆ ಮತ್ತು ದಾಸ ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರೊ. ಎ.ವಿ.ನಾವಡ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ಣಾಟಕ ಬ್ಯಾಂಕ್ ಮಾಜಿ ಎಂ ಡಿ  ಡಾ. ಮಹಾಬಲೇಶ್ವರ ಎಂ ಎಸ್, ಸಹಕಾರ, ಹಾಲು ಉತ್ಪಾದನಾ ಕ್ಷೇತ್ರ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾಕ್ಟರ್ ಬಿ.ವಿ ಸತ್ಯನಾರಾಯಣ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಬಂಟ್ವಾಳ ವೆಂಕಟರಮಣ ಸೋಮಯಾಜಿ, ಉದ್ಯಮ ಕ್ಷೇತ್ರದ ಸಾಧಕರಾದ ಕುಡುಂಬೂರು ರಾಮ್ ಮೋಹನ್ ರಾವ್ ಕನ್ನಡ ಸಾಹಿತ್ಯ, ಸ್ತ್ರೀವಾದ ಚಿಂತನೆ, ಸಂಸ್ಕೃತಿ ವಿಮರ್ಶೆ ಹಾಗೂ ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಗಾಯತ್ರಿ ನಾವಡ ಅವರಿಗೆ 'ಕೂಟ ಸಮಾಜದ ಕಣ್ಮಣಿ' ಪುರಸ್ಕಾರ ನೀಡಲಾಯಿತು.


ಉದ್ಯಮಿ ವಿಶ್ವೇಶ್ವರ ಬದೆವಿದೆ, ಕೇಂದ್ರದ ಉಪಾಧ್ಯಕ್ಷರಾದ ನ್ಯಾಯವಾದಿ ಸದಾಶಿವ ಐತಾಳ್, ಮಂಗಳೂರು ಅಂಗ ಸಂಸ್ಥೆಯ ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ, ಉಪಾಧ್ಯಕ್ಷ ಪ್ರಭಾಕರ ಐತಾಳ್, ಸದಸ್ಯರಾದ ಚಂದ್ರಮೋಹನ್, ರಂಗನಾಥ ಐತಾಳ್, ಗಣೇಶ ಎಮ್ಮೆಕೆರೆ, ಪ್ರಸನ್ನ ಇರುವೈಲು, ವ್ಯವಸ್ಥಾಪಕ ಶಿವರಾಮ ರಾವ್, ಮಹಿಳಾ ಪ್ರತಿನಿಧಿಗಳಾದ ಪ್ರಭಾ ರಾವ್, ಲಲಿತಾ ಉಪಾಧ್ಯಾಯ, ಗೌರಿ ಹೊಳ್ಳ, ಪ್ರವೀಣ್ ಮಯ್ಯ, ಪಂಕಜ ಹಾಗೂ ವಿವಿಧ  ಅಂಗ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ರವಿಚಂದ್ರ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.


ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಪ್ರತಿಮಾ ಶ್ರೀಧರ್ ಶಿಷ್ಯೆ ವಿದುಷಿ ಚಿನ್ಮಯಿ ಬಾಶ್ರೀ, ವಿದುಷಿ ವಿದ್ಯಾಶ್ರೀ ರಾಧಕೃಷ್ಣ ಶಿಷ್ಯೆ ಮೈತ್ರೇಯಿ ನಾವಡ ಶಾರದಾಮಣಿ ಶೇಖರ್ ಶ್ರೀಲತಾ ನಾಗರಾಜ್ ಶಿಷ್ಯರಾದ ವಿದುಷಿ ಕಾವ್ಯಶ್ರೀ, ವಿದುಷಿ ಶಾರ್ವರಿ ವಿ ಮಯ್ಯ, ಭೂಮಿಕಾ ಉಪಾಧ್ಯಾಯ, ರಮ್ಯಾ ತುಂಗಾ ಮೊದಲಾದವರ ನೃತ್ಯ ಪ್ರದರ್ಶನ ಮನೋಜ್ಞವಾಗಿ ಸಂಪನ್ನಗೊಂಡಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top