ಜಮಖಂಡಿ: ಸತ್ಸಂಗದಲ್ಲಿ ತೊಡಗಿ, ಸಜ್ಜನರ ಮಧ್ಯೆಯಿದ್ದು, ಕಾಯಕದಲ್ಲಿ ನಿರತರಾಗಿ ಸತ್ಯದ ಕಡೆಗೆ ಅಪೇಕ್ಷೆ ಹೊಂದಿದರೆ ಪ್ರಪಂಚ ಅಥವಾ ಪಾರಮಾರ್ಥದಲ್ಲಿದ್ದರೂ ಒಂದೇ. ಪ್ರಪಂಚ ಮತ್ತು ಪಾರಮಾರ್ಥ ಒಂದೇ ನಾಣ್ಯದ ಎರಡು ಮುಖಗಳು ಎಂದು ಮುಧೋಳ ತಾಲ್ಲೂಕಿನ ರೂಗಿ ಗ್ರಾಮದ ಅಡವಿ ಆಶ್ರಮದ ನಿತ್ಯಾನಂದ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ ನಾಲ್ಕನೇ ಭಾನುವಾರ ಹಮ್ಮಿಕೊಳ್ಳುವ ಮಾಸಿಕ ಕಾರ್ಯಕ್ರಮ ‘ಶ್ರೀಗುರುದೇವ ಸತ್ಸಂಗ’ದ ಸಾನ್ನಿಧ್ಯ ವಹಿಸಿ ‘ಪ್ರಪಂಚದೊAದಿಗೆ ಪಾರಮಾರ್ಥ’ ವಿಷಯ ಕುರಿತು ಫೆ.22ರ ಸಂಜೆ ಅವರು ಆಶೀರ್ವಚನ ನೀಡಿದರು.
ಮೊದಲು ನಿನ್ನನ್ನು ನೀನು ತಿಳಿದುಕೊಳ್ಳಬೇಕು. ಮೊದಲು ನಿನ್ನನ್ನು ನೀನು ತಿದ್ದಿಕೊಂಡರೆ ಜಗತ್ತಿನ ಒಬ್ಬ ಮೂರ್ಖನನ್ನು ತಿದ್ದಿದ ಪುಣ್ಯ ಬರುತ್ತದೆ. ಅದಕ್ಕಾಗಿ ಬೆಳಿಗ್ಗೆ ಏಳುವಾಗ ಭಗವಂತನನ್ನು ಸ್ಮರಿಸಬೇಕು. ಅಧ್ಯಾತ್ಮದ ಮಾರ್ಗ ತೋರಿದ ಗುರುವಿಗೆ ರಾತ್ರಿ ಮಲಗುವಾಗ ನಮಸ್ಕಾರ ಹೇಳಬೇಕು ಎಂದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಅಧ್ಯಾತ್ಮದ ಕೊರತೆಯಿಂದಾಗಿ ಕುಟುಂಬಗಳು ಛಿದ್ರವಾಗುತ್ತಿವೆ. ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ. ಆದ್ದರಿಂದ ಪ್ರಪಂಚದಲ್ಲಿರುವ ಪ್ರತಿ ಸತಿ-ಪತಿಗಳಲ್ಲಿ ಒಬ್ಬರಿಗಾದರೂ ಅಧ್ಯಾತ್ಮದ ಜ್ಞಾನವಿರಬೇಕು ಎಂದು ಆಶೀರ್ವಚನ ನೀಡಿದರು.
ನಮ್ಮನ್ನು ನಾವು ತಿಳಿದುಕೊಳ್ಳದೆ ದುಃಖಿತರಾಗಿದ್ದೇವೆ. ನಾನೇ ಆತ್ಮ ಸ್ವರೂಪ ಎಂಬ ಜ್ಞಾನದ ಅರಿವಾದರೆ ಸಮಾಧಾನ ಶಾಂತಿ ನೆಲೆಸುತ್ತದೆ. ಅದಕ್ಕಾಗಿ ದೇವರಲ್ಲಿ ಭಕ್ತಿ, ತಂದೆ-ತಾಯಿ, ಅತ್ತೆ-ಮಾವ, ಬಂಧು-ಬಾಂಧವರಲ್ಲಿ ನಂಬಿಕೆ ವಿಶ್ವಾಸ ಇಡಬೇಕು ಎಂದರು.
ನಿಂಬಾಳ ಗುರುದೇವಾಶ್ರಮದ ಗಣೇಶಲಿಂಗ ಮಹಾಸ್ವಾಮಿಗಳು, ಹುಲ್ಯಾಳ ನಿಜಗುಣಶಾಸ್ತ್ರಿ ಮಮದಾಪುರ ಆಶೀರ್ವಚನ ನೀಡಿದರು. ಯಲ್ಲಪ್ಪ ಶಿವಾಪುರ ಮಾತನಾಡಿದರು. ಋಷಿಕೇಶದ ಸ್ವರ್ಗಾಶ್ರಮದ ಗಂಗಾನಂದ ಮಹಾರಾಜರು, ಸಿದ್ದಾಪುರ ಅಡವಿಸಿದ್ಧೇಶ್ವರ ಮಠದ ಮಾತೋಶ್ರೀ ಅಕ್ಕಮಹಾದೇವಿ ಸಾನ್ನಿಧ್ಯ ವಹಿಸಿದ್ದರು.
ನಿರ್ಮಾಣ ಹಂತದಲ್ಲಿರುವ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರಕ್ಕೆ ರೂ.1 ಲಕ್ಷ ಹಾಗೂ ಸತ್ಸಂಗದ ಮಹಾಪ್ರಸಾದದ ದಾಸೋಹ ಸೇವೆಗೈದ ವಿಮಲಾ ಕುಬಕಡ್ಡಿ, ಸಂಗಮೇಶ ಕುಬಕಡ್ಡಿ ದಂಪತಿಯನ್ನು ಶ್ರೀಗುರುದೇವಾಶ್ರಮದ ಪರವಾಗಿ ಸನ್ಮಾನಿಸಲಾಯಿತು.
ಗುರುಬಸಗೌಡ ಪಾಟೀಲ, ಶಿವಾಜಿ ಜಾಧವ, ಪರಮೇಶ್ವರ ತೇಲಿ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


