ಸ್ಪೂರ್ತಿ ಸೆಲೆ: ಜೀವನವನ್ನು ಜೀವಿಸಿರಿ

Upayuktha
0


ಹಲೋ ಹೇಗಿದ್ದೀರಾ?

ಜೀವನ ನಮಗೆ ದೇವರು ಕೊಟ್ಟ ಕೊಡುಗೆ. ಆದರೆ ನಾವು ಹೇಗೆ ಜೀವನವನ್ನು ನಡೆಸುತ್ತೇವೆ ಎನ್ನುವುದು ನಮಗೆ ಬಿಟ್ಟಿದ್ದು. ನಮ್ಮ ಪುರಾಣಗಳ ಪ್ರಕಾರ ನಮ್ಮ ಅರ್ಧ ಆಯುಷ್ಯ ನಿದ್ದೆಯಲ್ಲಿಯೇ ಕಳೆದು ಹೋಗುತ್ತದೆ. ಉಳಿದ ಅರ್ಧ ಆಯುಷ್ಯ ಹೇಗೆ ಕಳೆಯುತ್ತೇವೆ ಎನ್ನುವುದು ನಮಗೆ ಬಿಟ್ಟಿದ್ದು.

ಬದುಕಿನಲ್ಲಿ ಉದ್ಯೋಗ, ವ್ಯವಹಾರ, ಕೌಟುಂಬಿಕ ಜೀವನ, ಜಂಜಾಟದಲ್ಲಿಯೇ ಕಳೆದು ಹೋಗುತ್ತದೆ. ದೇವರು ಕೊಟ್ಟ ಜೀವನ ಹೇಗೆ ಸವೆಸಿದ್ದೇವೆ ಎನ್ನುವುದೇ ಪ್ರತಿಯೊಬ್ಬರ ಮನಸಾಕ್ಷಿಯ ಪ್ರಶ್ನೆ.


ನಮಗೆ ಗೊತ್ತಿಲ್ಲದಂತೆ ಕುಟುಂಬದ ಹೆಸರಿನಲ್ಲಿ, ರಕ್ತ ಸಂಬಂಧದ ಹೆಸರಿನಲ್ಲಿ ನಮ್ಮ ಜೀವನದಲ್ಲಿ ಪ್ರವೇಶ ಮಾಡಿ ಬಿಟ್ಟಿರುತ್ತಾರೆ. ಇದರ ಹೊರತಾಗಿಯೂ ನಮಗೆ ನಮ್ಮದೇ ಆದ ಜೀವನವಿದೆ ಎನ್ನುವುದನ್ನು ಮರೆತು ಬಿಟ್ಟಿರುತ್ತೇವೆ. ಆದರೆ ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆ ಮುಂತಾದ ನಮ್ಮ ಜವಾಬ್ದಾರಿಗಳನ್ನು ಮುಗಿಸಿದ ಮೇಲಾದರೂ ನಮಗೆ ನಮ್ಮದೇ ಆದ ಜೀವನವಿದೆ ಎನ್ನುವುದನ್ನು ಅರಿತುಕೊಳ್ಳಬೇಕು.


ಆದರೆ ಬಹಳಷ್ಟು ಜನ ತಮ್ಮ ಜವಾಬ್ದಾರಿ ಮುಗಿಸಿದ ಮೇಲೆಯೂ ಹೆಚ್ಚುವರಿ ಜವಾಬ್ದಾರಿ ಹೊತ್ತುಕೊಂಡು ಅದೇ ಜಂಜಾಟದಲ್ಲಿ ಮುಳುಗಿ  ಹೋಗಿರುತ್ತಾರೆ.


ನನಗಿಷ್ಟವಾದ ಪುಸ್ತಕ ಓದುವುದು, ಸಂಗೀತ ಕೇಳುವುದು, ಒಳ್ಳೆಯ ಸ್ಥಳಗಳಿಗೆ ಭೇಟಿ ನೀಡುವುದು, ನಿಸರ್ಗದ ಜೊತೆ ನಂಟನ್ನು ಬೆಳೆಸುವುದು, ಆಧ್ಯಾತ್ಮ ಇವೆಲ್ಲವೂ ನಮ್ಮ ಜೀವನದಲ್ಲಿ ಮುದ ನೀಡುತ್ತವೆ. ಉತ್ತಮ ಜೀವನ ನಡೆಸಿ, ಯಾರಿಗೂ ಭಾರವಾಗದೆ, ಕಾಲನ ಕರೆ ಬಂದಾಗ ಸಂತೃಪ್ತಿಯಿಂದ ತೆರಳಿದರೆ, ಅಲ್ಲಿ ಒಂದು ಅರ್ಥ ಎದ್ದು ಕಾಣುತ್ತದೆ. ಅಲ್ಲವೇ? ಏನಂತೀರಾ?


- ಗಾಯತ್ರಿ ಸುಂಕದ, ಬದಾಮಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top