ನರಿಮೊಗರಿನಲ್ಲಿ ‘ಯಕ್ಷ ಪ್ರಸಾದಿನೀ–2026’: ಮಾ.3ರಂದು ಪೆರ್ಡೂರು ಮೇಳದ ಪೌರಾಣಿಕ ಯಕ್ಷಗಾನ ಪ್ರದರ್ಶನ

Upayuktha
0



ಪುತ್ತೂರು: ಮನೋವಿಕಾಸ ಮತ್ತು ಮನೋದೈಹಿಕ ಆರೋಗ್ಯದ ಉತ್ತೇಜನದ ಉದ್ದೇಶದಿಂದ “ಯಕ್ಷ ಪ್ರಸಾದಿನೀ–2026” ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ನರಿಮೊಗರುವಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಮಾರ್ಚ್ 3, 2026 ಮಂಗಳವಾರ ಸಂಜೆ 6.30 ಗಂಟೆಗೆ, ನರಿಮೊಗರು ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. (ಕಾಣಿಯೂರು–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರಿನ ದರ್ಬೆಯಿಂದ 6.3 ಕಿ.ಮೀ ದೂರ).


ಕಾರ್ಯಕ್ರಮದ ಅಂಗವಾಗಿ, ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು ಇವರಿಂದ ಪೌರಾಣಿಕ ಕಥಾನಕ “ಕಾರ್ತವೀರ್ಯ–ಚಕ್ರಚಂಡಿಕೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಭಾಗವತಿಕೆಯೊಂದಿಗೆ ಖ್ಯಾತ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ವಿದ್ಯುದ್ದೀಪಾಲಂಕೃತ ಭವ್ಯ ರಂಗಮಂಟಪದಲ್ಲಿ ನಡೆಯುವ ಈ ಯಕ್ಷಗಾನ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.


ಕಾರ್ಯಕ್ರಮಕ್ಕೆ ಸ್ಥಳದಾನ ಹಾಗೂ ಸಹಕಾರವನ್ನು ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ನರಿಮೊಗರು ಇದರ ಮುಖ್ಯಗುರುಗಳು ಮತ್ತು ಸಿಬ್ಬಂದಿವರ್ಗ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು, ಶ್ರೀ ಮೃತ್ಯುಂಜಯ ದೇವಸ್ಥಾನ ನರಿಮೊಗರು ಇದರ ಆಡಳಿತಾಧಿಕಾರಿಗಳು, ಅರ್ಚಕರು ಮತ್ತು ಸಿಬ್ಬಂದಿವರ್ಗ, ಹಾಗೂ ನರಿಮೊಗರಿನ ಮರಾಟಿ ಸಮಾಜಸೇವಾ ಸಂಘದ ಪದಾಧಿಕಾರಿಗಳು ನೀಡಿದ್ದಾರೆ.


ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ 97405 45979 ಅಥವಾ 89044 74122 ಸಂಖ್ಯೆಗೆ ಸಂಪರ್ಕಿಸಬಹುದು.


ಪ್ರಸಾದಿನೀ ಆಯುರ್ನಿಕೇತನ ಕುರಿತು:


ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ ನರಿಮೊಗರು, ಪುತ್ತೂರು, ಆಯುರ್ವೇದ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದೆ. ಆಸ್ಪತ್ರೆಯಲ್ಲಿ ಎಂಟು ಹಾಸಿಗೆಗಳ ಒಳರೋಗಿ ವಿಭಾಗವಿದ್ದು, ಕೆ.ಪಿ.ಎಂ.ಇ. ನೋಂದಣಿ ಮತ್ತು ಐ.ಎಸ್.ಓ. ಪ್ರಮಾಣೀಕರಣವನ್ನು ಹೊಂದಿದೆ.


ಪಾರ್ಕಿನ್ಸನ್ಸ್ ಕಾಯಿಲೆ, ಪಕ್ಷವಾತ, ಸಂಧಿವಾತ, ಮೈಗ್ರೇನ್ ತಲೆನೋವು, ಮೂಗಿನ ಪಾಲಿಪ್, ಮೂಲವ್ಯಾಧಿ, ಮಹಿಳೆಯರ ಮುಟ್ಟಿನ ತೊಂದರೆ, ಸೋರಿಯಾಸಿಸ್ ಚರ್ಮರೋಗ, ಕಫದ ಸಮಸ್ಯೆ, ಅಸಿಡಿಟಿ ಹಾಗೂ ಕಣ್ಣಿನ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ರಹಿತ ಯಶಸ್ವಿ ಚಿಕಿತ್ಸೆಯನ್ನು ನೀಡುವ ಮೂಲಕ ಆಸ್ಪತ್ರೆ ಜನಪ್ರಿಯತೆ ಗಳಿಸಿದೆ.


ಮಕ್ಕಳಲ್ಲಿ ರೋಗನಿರೋಧಕ ಶಕ್ತಿ, ಸ್ಮರಣಶಕ್ತಿ ಮತ್ತು ದೈಹಿಕ ಬೆಳವಣಿಗೆ ಹೆಚ್ಚಿಸುವ ಉದ್ದೇಶದಿಂದ ರೂಪುಗೊಂಡಿರುವ ‘ಪ್ರಸಾದಿನೀ ಸ್ವರ್ಣಪ್ರಾಶ’ ಉತ್ಪನ್ನವು, ದೇಶಾದ್ಯಂತ ಜಾಲತಾಣದ ಮೂಲಕ ಗ್ರಾಹಕರನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಉತ್ಪನ್ನವೆಂದು ಹೆಸರು ಮಾಡಿದೆ.


ತ್ರಿಪುರ ಪ್ಯೂರಿಫಿಕೇಷನ್ ಧ್ಯಾನ ವಿಧಾನವನ್ನು ಚಿಕಿತ್ಸೆಯೊಂದಿಗೇ ಅಳವಡಿಸಿಕೊಂಡಿರುವ ಆಸ್ಪತ್ರೆ, ಸಂಗೀತ ಮತ್ತು ನಾಟ್ಯಗಳ ಮನೋದೈಹಿಕ ಆರೋಗ್ಯದ ಮೇಲಿನ ಮಹತ್ವವನ್ನು ಗುರುತಿಸಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ‘ಆರೋಗ್ಯದ ನರನಾಡಿ’, ‘ಆರೋಗ್ಯ ಪ್ರಸಾದಿನೀ’ ಮತ್ತು ‘ಆಯುರ್ವೇದ–ಆಶಾವಾದ’ ಎಂಬ ಗ್ರಂಥಗಳನ್ನು ಪ್ರಕಟಿಸಿದೆ.


ಆಯುರ್ವೇದ ತಜ್ಞ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಂಸ್ಥೆ, ಆರೋಗ್ಯ ಮತ್ತು ಸಂಸ್ಕೃತಿಯ ಸಮನ್ವಯದ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸುತ್ತಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top