ಕನಕವಳಪ್ಪು ಶ್ರೀ ಧರ್ಮಶಾಸ್ತಾ ಕ್ಷೇತ್ರದ ಅಷ್ಟಬಂಧ ಬ್ರಹ್ಮ ಕಲಶೋತ್ಸವ; ಕನ್ನಡದ ಸಾಂಸ್ಕೃತಿಕ ವೈವಿಧ್ಯ

Upayuktha
0


ಕಾಸರಗೋಡು: ಕನ್ನಡದ ಕಂಪು ಕನ್ನಡ ಜಿಲ್ಲೆಯ ತೆಂಕಿನ ಅಂಚಿನ ವರೆಗೆ, ಚಂದ್ರಗಿರಿ ನದಿಯ ತೆಂಕು ಭಾಗದಲ್ಲಿ ಸಹ ತಲುಪುತ್ತಿರುವ ವಿಶಿಷ್ಟ ವಿದ್ಯಮಾನವು ಈ ತಿಂಗಳಲ್ಲಿ ಕಾಸರಗೋಡು ಜಿಲ್ಲೆಯ ತೆಕ್ಕಿಲ್ ಚಟ್ಟಂಚಾಲಿನಲ್ಲಿ ಆವೀರ್ಭೂತಗೊಂಡಿತು.


ಕಾಸರಗೋಡು ಗಡಿನಾಡ ಕನ್ನಡತಿ, ಡಾ. ವಾಣಿಶ್ರೀಯವರ ಸಾರಥ್ಯದ ಕಾಸರಗೋಡಿನ “ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ” ಯ 181 ನೇ ಕನ್ನಡ ಸಾಹಿತ್ಯ ಗಾನ ನೃತ್ಯ ವೈಭವವು ತೆಕ್ಕಿಲ್ ಚಟ್ಟಂಚಾಲಿನ ಕನಕವಳಪ್ಪು ಶ್ರೀ ಧರ್ಮಶಾಸ್ತಾ ಕ್ಷೇತ್ರದ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಸಂದರ್ಭದಲ್ಲಿ ಬಹು ಪ್ರಶಂಸೆಯೊಂದಿಗೆ ನಡೆಯಿತು.  


ಶ್ರೀಮತಿಯರಾದ ಮಲ್ಲದ ಸೌಮ್ಯ, ಮಲ್ಲದ ಐಶ್ವರ್ಯ, ಅಮೃತ್, ಶ್ರೀ ಸೀತಾರಾಮ್, ಕುಮಾರಿ ತೇಜಸ್ವಿನಿ, ಭಾಗ್ಯಲಕ್ಷ್ಮಿ, ಅಮಿತ, ಶ್ರೀಜ, ದಿವಾಕರ ಕಾಸರಗೋಡು ಮೊದಲಾದವರು ವೇದಿಕೆಯಲ್ಲಿ ತಮ್ಮ ಕಲೆಯನ್ನು ಅದ್ಭುತವಾಗಿ ಪ್ರದರ್ಶಿಸಿ ಪ್ರೇಕ್ಷಕರ ಪ್ರಶಂಸೆ ಗಳಿಸಿದರು.


ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆಯಾಗಿರುವ ಶ್ರೀಮತಿ ಡಾ. ವಾಣಿಶ್ರೀಯವರು, ತಮ್ಮ ಕನ್ನಡ ಸಾಹಿತ್ಯದ ಸವಿನುಡಿಗಳೊಂದಿಗೆ ಕಾರ್ಯಕ್ರಮವನ್ನು ಪ್ರಸ್ತುತಗೊಳಿಸಿದರು.


ಶ್ರೀ ಕನಕವಳಪ್ಪು ಶ್ರೀ ಧರ್ಮಶಾಸ್ತಾ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರು, ಡಾ. ವಾಣಿಶ್ರೀ ಯವರನ್ನು ಶ್ರೀ ಧರ್ಮಶಾಸ್ತಾ ದೇವರ ಪ್ರಸಾದ ನೀಡಿ ಗೌರವಿಸಿದರು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಧನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರಾದ ಶಶಿಕಲಾ, ಶ್ಯಾಮಪ್ರಸಾದ್, ನಿಶಾಂತ್ ಮುಂತಾದವರು ಉಪಸ್ಥಿತರಿದ್ದರು.


ಭಕ್ತಿ ಗೀತೆ ಹಾಗೂ ಸುಂದರ ನೃತ್ಯಗಳ ಸುಮಧುರ ಕಾರ್ಯಕ್ರಮವನ್ನು ನೋಡಿ ಆಲಿಸಿದ ಜನರ ಅಭಿನಂದನೆಗಳನ್ನು ವ್ಯಕ್ತಪಡಿಸುತ್ತಾ, ಎಲ್ಲಾ ಕಲಾರತ್ನಗಳಿಗೆ ಗೌರವಧನ ಮತ್ತು ಪುಸ್ತಕವನ್ನು ನೀಡಿ ಸನ್ಮಾನಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top