ಬೆಂಗಳೂರು: ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆಯಾದ ವಿಕಾಸ ಸಂಘಟನೆಯು 8 ವರ್ಷಗಳನ್ನು ಪೂರೈಸಿ 9ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಸಂಭ್ರಮದ ಅಂಗವಾಗಿ ಡಿಜಿಟಲ್ ಮೀಡಿಯಾ ತರಬೇತಿ ಕಾರ್ಯಾಗಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ದಿನಾಂಕ 01-03-2026ರ ಭಾನುವಾರದಂದು ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿರುವ ಗಾಯತ್ರಿ ಭವನದ ಮೂರನೇ ಮಹಡಿಯಲ್ಲಿ ನಡೆಯಲಿದೆ. ಬೆಳಿಗ್ಗೆ 8:30ಕ್ಕೆ ಉಪಹಾರದೊಂದಿಗೆ ಕಾರ್ಯಕ್ರಮ ಆರಂಭವಾಗಿ, 9:30ಕ್ಕೆ ಸಭಾ ಕಾರ್ಯಕ್ರಮ ಚಾಲನೆಗೊಳ್ಳಲಿದೆ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಸಗೋಡು ಜಯಸಿಂಹ ಅವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ವಿಕಾಸ ಸಂಘಟನೆಯ ಗೌರವ ಅಧ್ಯಕ್ಷರಾದ ಬಿ. ಎಲ್. ಹನುಮಂತ ರಾವ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್. ಲಕ್ಷ್ಮೀಕಾಂತ, ಬಿ. ಎನ್. ಮಹೇಶ್ ಕುಮಾರ್ ಹಾಗೂ ಡಾ. ಪಂಡಿತ ಪ್ರಸನ್ನಾಚಾರ್ಯ ಕಟ್ಟಿ ಅವರು ಭಾಗವಹಿಸಲಿದ್ದಾರೆ.
ಕಾರ್ಯಾಗಾರದಲ್ಲಿ ರಾಜಕೀಯ ತರಬೇತಿ, ಮಾಧ್ಯಮ ನಿರ್ವಹಣೆ ಮತ್ತು ಸಾಮಾಜಿಕ ಜಾಲತಾಣಗಳ ತಾಂತ್ರಿಕತೆ ಬಗ್ಗೆ ಮಾಹಿತಿ ನೀಡಲಾಗುವುದು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಶಾಂತ್ ಹೆಬ್ಬಾರ್, ಡಾ. ಆಶಾ ಕೃಷ್ಣಸ್ವಾಮಿ, ಶ್ರೀ ಚೈತನ್ಯ ಬೇಲಿ ಮತ್ತು ಕಿರಣ್ ಹೆಬ್ಬಾಳೆ ಅವರು ತರಬೇತಿ ನೀಡಲಿದ್ದಾರೆ.
ಇದೇ ವೇದಿಕೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ಜೊತೆಗೆ ಕೆ.ಯು. ಡಬ್ಲ್ಯು.ಜೆ ಸದಸ್ಯರಾದ ಶ್ಯಾಮ್ ಎಸ್., ಶ್ರೀಮತಿ ಪರಿಮಳ ಎಚ್. ಎಸ್. ಹಾಗೂ ಶ್ರೀಮತಿ ಗೋದಾವರಿ ಡಿ. ಎಸ್. ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಹಿರಿಯ ಮಾಧ್ಯಮ ಮಿತ್ರರಾದ ಎನ್. ರಾಮರಾವ್, ಜೆ. ನಾಗರಾಜ್, ಜ್ಯೋತಿಶ್ವರ ಹಾಗೂ ವೆಂಕಟೇಶ್ ದ್ವಾರಕಾನಾಥ್ ಅವರಿಗೆ ಸನ್ಮಾನ ಜರುಗಲಿದೆ.
ವಿಕಾಸ ಸಂಘಟನೆಯು ರಾಜ್ಯಾದ್ಯಂತ ಸದಸ್ಯರನ್ನು ಹೊಂದಿದ್ದು, ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವುದು ಅಗತ್ಯವಾಗಿದೆ. ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಅಧ್ಯಕ್ಷರಾದ ಶ್ರೀನಾಥ್ ಜೋಶಿ ಹಾಗೂ ಪ್ರಧಾನ ಕಾರ್ಯದರ್ಶಿ ಹನುಮೇಶ್ ಯಾವಗಲ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


