ಕಾಸರಗೋಡು: ಕೃಷಿ ಕ್ಷೇತ್ರದಲ್ಲಿ ದಶಕಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ‘ನಗೆಬಂಧು’ ಸುಶೀಲಾ ಭಟ್ ಪಾತನಡ್ಕ ಅವರಿಗೆ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಪ್ರಶಸ್ತಿಯನ್ನು ಫೆಬ್ರವರಿ 22ರಂದು ಕಾಸರಗೋಡಿನಲ್ಲಿ ಪ್ರದಾನ ಮಾಡಲಾಗುವುದು.
ಸುಶೀಲಾ ಭಟ್ ಅವರು ಸುಮಾರು 1970ರ ದಶಕದಲ್ಲಿಯೇ ನವಭಾರತ ಪತ್ರಿಕೆಯ ಮೂಲಕ ‘ನಗೆಬಂಧು’ ಎಂಬ ಬಿರುದಿಗೆ ಪಾತ್ರರಾಗಿದ್ದರು. ಅವರು ಕೊಟೂರು ಸಮೀಪದ ಪಾತನಡ್ಕದ ಶಂಕರನಾರಾಯಣ ಭಟ್ ಅವರ ಪತ್ನಿ.
ಹಲಸು, ಮಾವು ಹಾಗೂ ಬಾಳೆ ಸ್ಯಾವಿಗೆ ಕುರಿತಂತೆ ಹಲವು ಪುಸ್ತಕಗಳನ್ನು ರಚಿಸಿ ಪ್ರಕಟಿಸಿರುವ ಅವರು, ಮೊದಲ ಬಾರಿಗೆ ಬಾಳೆಕಾಯಿಯ ಸ್ಯಾವಿಗೆ ತಯಾರಿಕೆಯ ತಂತ್ರಜ್ಞಾನವನ್ನು ಸಾರ್ವಜನಿಕವಾಗಿ ಪರಿಚಯಿಸಿದವರಾಗಿ ಕೃಷಿ ವಲಯದಲ್ಲಿ ವಿಶೇಷ ಗುರುತನ್ನು ಪಡೆದಿದ್ದಾರೆ.
ಆಕಾಶವಾಣಿ ಕಣ್ಣೂರ್, ಕಾಸರಗೋಡು ಕೃಷಿ ಇಲಾಖೆ ಹಾಗೂ ಬಳ್ಳಾರಿಯಲ್ಲಿ ಆಯೋಜಿಸಲಾದ ಕೃಷಿ ಕಾರ್ಯಾಗಾರಗಳಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಮ್ಮ ಅನುಭವ ಮತ್ತು ಜ್ಞಾನವನ್ನು ರೈತರಿಗೆ ಹಂಚಿಕೊಂಡಿದ್ದಾರೆ. ಅಪಾರ ಸೇವೆ ಸಲ್ಲಿಸಿದ್ದರೂ ಹೆಚ್ಚು ಪ್ರಚಾರಕ್ಕೆ ಬಾರದ “ಎಲೆಮರೆಯ ಕಾಯಿ”ಯಾಗಿ ಅವರು ಗುರುತಿಸಿಕೊಂಡಿದ್ದಾರೆ.
ಮೂಲತಃ ಅಳಿಕೆ ಗ್ರಾಮದ ನೆಗಳಗುಳಿಯ ತಿಮ್ಮಣ್ಣ ಭಟ್ಟರ ಪುತ್ರಿಯಾಗಿರುವ ಅವರು, ಖ್ಯಾತ ವೈದ್ಯ ಡಾ. ಸುರೇಶ್ ನೆಗಳಗುಳಿ ಅವರ ಹಿರಿಯ ಸೋದರಿಯಾಗಿದ್ದಾರೆ.
ಫೆಬ್ರವರಿ 22ರಂದು ನಡೆಯಲಿರುವ ಸಮಾರಂಭದಲ್ಲಿ ಸುಶೀಲಾ ಭಟ್ ಅವರಿಗೆ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಸಂಘಟಕ ವಾಮನರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


