(2019ರ ತಿದ್ದುಪಡಿ ಸಹಿತ)
‘ಮಾಹಿತಿ ಹಕ್ಕು ಅಧಿನಿಯಮ–2005 : ಒಂದು ವಿಶ್ಲೇಷಣೆ’ ಎಂಬ ಈ ಕೃತಿ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಸ್ಪಷ್ಟ, ಸಮಗ್ರ ಹಾಗೂ ಪ್ರಾಯೋಗಿಕ ಅರಿವು ಮೂಡಿಸುವ ಮಹತ್ವದ ಗ್ರಂಥವಾಗಿದೆ. ಸಾರ್ವಜನಿಕರಲ್ಲಿ ಕಾನೂನು ಜಾಗೃತಿ ಬೆಳೆಸಿ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಬಲಪಡಿಸುವ ಉದ್ದೇಶದಿಂದ ಈ ಕೃತಿಯನ್ನು ರಚಿಸಲಾಗಿದೆ.
ಈ ಗ್ರಂಥದ ಕರ್ತೃಗಳು ಕರ್ನಾಟಕ ಮಾಹಿತಿ ಆಯೋಗದ ವಿಶ್ರಾಂತ ಮಾನ್ಯ ಮಾಹಿತಿ ಆಯುಕ್ತರಾದ ಡಾ. ಶೇಖರ ಡಿ. ಸಜ್ಜನರವರು. ಮೂಲತಃ ವೈದ್ಯರಾಗಿದ್ದರೂ, ಸಾರ್ವಜನಿಕ ಸೇವೆ ಹಾಗೂ ಕಾನೂನು ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ ಅವರು, ಮಾಹಿತಿ ಹಕ್ಕು ಅಧಿನಿಯಮವನ್ನು ಆಳವಾಗಿ ಅಧ್ಯಯನ ಮಾಡಿ, ತಮ್ಮ ಅನುಭವದ ಬೆಳಕಿನಲ್ಲಿ ಈ ಕೃತಿಯನ್ನು ರೂಪಿಸಿದ್ದಾರೆ.
ಈ ಪುಸ್ತಕದಲ್ಲಿ “ಮಾಹಿತಿ ಎಂದರೇನು?” ಎಂಬ ಮೂಲಭೂತ ಅಂಶದಿಂದ ಆರಂಭಿಸಿ, ಕಾಯ್ದೆಯ ಉದ್ದೇಶ, ವ್ಯಾಪ್ತಿ, ನಾಗರಿಕರು ಮಾಹಿತಿ ಪಡೆಯುವ ವಿಧಾನ, ಸಾರ್ವಜನಿಕ ಅಧಿಕಾರಿಗಳ ಕರ್ತವ್ಯಗಳು, ವಿನಾಯಿತಿಯ ಸಂದರ್ಭಗಳು ಹಾಗೂ ಕಡತಗಳ ಸಂರಕ್ಷಣೆ ಕುರಿತು ಸರಳ ಮತ್ತು ಸ್ಪಷ್ಟ ವಿವರಣೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳು, ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ಮಹತ್ವದ ತೀರ್ಪುಗಳ ಸಾರಾಂಶಗಳನ್ನು ಒಳಗೊಂಡಿರುವುದು ಈ ಕೃತಿಯ ವಿಶೇಷತೆ.
ಕಾಯ್ದೆಯ ಸಂಪೂರ್ಣ ಪಠ್ಯವನ್ನು ಇಂಗ್ಲಿಷ್ ಜೊತೆಗೆ ಕನ್ನಡದಲ್ಲಿಯೂ ನೀಡಿರುವುದರಿಂದ, ಇಂಗ್ಲಿಷ್ ಭಾಷಾ ಜ್ಞಾನ ಕಡಿಮೆ ಇರುವವರಿಗೆ ಸಹ ಇದು ಅತ್ಯಂತ ಉಪಯುಕ್ತವಾಗಿದೆ. ಮಾಹಿತಿ ಹಕ್ಕು ಅಧಿನಿಯಮ–2005ಕ್ಕೆ 2019ರಲ್ಲಿ ಜಾರಿಯಾದ ತಿದ್ದುಪಡಿಗಳನ್ನೂ ಈ ಆವೃತ್ತಿಯಲ್ಲಿ ಸಮಗ್ರವಾಗಿ ಸೇರಿಸಲಾಗಿದೆ.
ಸಾಮಾನ್ಯ ನಾಗರಿಕರು, ವಿದ್ಯಾರ್ಥಿಗಳು, ಕಾನೂನು ಅಧ್ಯಯನಾರ್ಥಿಗಳು, ನ್ಯಾಯವಾದಿಗಳು, ಆಡಳಿತಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಇದು ವಿಶ್ವಾಸಾರ್ಹ ಮಾರ್ಗದರ್ಶಕ ಗ್ರಂಥವಾಗಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಬಲ ನೀಡುವ ಜ್ಞಾನಸಂಪತ್ತಾಗಿಯೂ ಕಾಣಿಸುತ್ತದೆ.
ಒಟ್ಟಾರೆ, ಮಾಹಿತಿ ಹಕ್ಕು ಕಾಯ್ದೆಯನ್ನು ಸರಿಯಾಗಿ ಅರ್ಥೈಸಿ ಸದ್ಬಳಕೆ ಮಾಡಿಕೊಳ್ಳಲು ಬಯಸುವ ಪ್ರತಿಯೊಬ್ಬರಿಗೂ ಈ ಕೃತಿ ಅತ್ಯಂತ ಉಪಯುಕ್ತವಾದ, ಸಮಯೋಚಿತ ಮತ್ತು ಜನಸ್ನೇಹಿ ಪುಸ್ತಕವೆಂದು ಹೇಳಬಹುದು.
- ಪ್ರೊ.ಶಕುಂತಲಾ ಚನ್ನಪ್ಪ. ಸಿಂಧೂರ.
ಸಂಶೋಧಕರು, ವಿಶ್ರಾಂತ ಪ್ರಾಧ್ಯಾಪಕರು. ಗದಗ.
9980711435.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


