ಯಕ್ಷಗಾನ ಕಲೆಯನ್ನು ಆರಾಧಿಸುವ ವರ್ಗ ವೃದ್ಧಿಸಿದೆ: ಅನಸೂಯಾ ರೈ

Upayuktha
0


ಮಂಗಳೂರು: "ಯಕ್ಷಗಾನವು ವಿವಿಧ ಮಾಧ್ಯಮಗಳಿಂದ ವಿಶ್ವದ ಎಲ್ಲೆಡೆಯ ಕಲಾರಸಿಕರನ್ನು ತನ್ನಡೆಗೆ ಸೆಳೆಯುತ್ತದೆ. ದೃಶ್ಯ-ಶ್ರಾವ್ಯ ಕಲೆಯಾದ ಈ ಶ್ರೀಮಂತ ಕಲೆಯನ್ನು ಆರಾಧಿಸುವ ಒಂದು ವರ್ಗವೇ ಬೆಳೆಯುತ್ತಿದೆ. ಶಾಲಾ ಕಾಲೇಜುಗಳಲ್ಲಿ ಕೂಡಾ ಅದನ್ನು ವಿದ್ಯಾರ್ಥಿಗಳಿಗೆ ಕಲಿಸುವ ವ್ಯವಸ್ಥೆ ಈಗಿದೆ. ಇನ್ನು ಅದನ್ನು ಕಲಿಯುವ ಯುವ ಜನಾಂಗವೂ ಅಧಿಕವಾಗಿದೆ. ಗಂಡು- ಹೆಣ್ಣುಗಳೆಂಬ ಪ್ರಬೇಧವಿಲ್ಲದೇ ಇಂದು ಯಕ್ಷಗಾನ ಎಲ್ಲರಿಗೂ ಬೇಕಾಗಿರುವ ಅಂತೆಯೇ ಜೀವನ ಮೌಲ್ಯಗಳನ್ನು ವಿವರಿಸುವ ಕಲೆಯೂ ಹೌದು" ಎಂದು ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಪದವಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅನಸೂಯಾ ರೈಯವರು ಹೇಳಿದರು.


ಅವರು (ಬಂಟ್ಸ್ ಹಾಸ್ಟೆಲಿನ ರಾಮಕೃಷ್ಣ ಕಾಲೇಜಿನಲ್ಲಿ ಯಕ್ಷ ಶರತ್ ತಂಡದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಧನರಾಜ್, ಉಪಪ್ರಾಂಶುಪಾಲೆ ಶೀಮತಿ ಪ್ರತಿಮಾ ಶೆಟ್ಟಿ, ಪದವಿಪೂರ್ವ ಕಾಲೇಜಿನ ಶ್ರೀಯತಿ ಯಶೋದಾ ಶೆಟ್ಟಿ, ಪ್ರೌಢಶಾಲಾ ಪ್ರಾಂಶುಪಾಲೆ ಪ್ರೆಸಿಲ್ಲಾ ಮೇಡಂ ಉಪಸ್ಥಿತರಿದ್ದರು.


ಶ್ರೀರಾಮಕೃಷ್ಣ ವಿದ್ಯಾಸಂಸ್ಥೆಗಳ ಕರೆಸ್ಪಾಂಡೆಂಟ್ ಡಾ. ಸಂಜೀವ ರೈಗಳ ಮಾರ್ಗದರ್ಶನವಿತ್ತು. ರವಿ, ವರ್ಕಾಡಿ ನಿರೂಪಿಸಿದರು. ಖ್ಯಾತ ಭಾಗವತ ಅಡೂರು ಜಯರಾಮ ರವರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆ ನಡೆಸಿದರು.


ಎ. ಮಧುಸೂದನ ರವರು ಧನ್ಯವಾದವಿತ್ತರು. ನಿಹಾಲ್ ಪೂಜಾರಿ ಸ್ಮರಣಿಕೆಗಳನ್ನತ್ತು ಅತಿಥಿಗಳನ್ನು ಗೌರವಿಸಿದರು. ಬಳಿಕ ಯಕ್ಷ ಶರತ್ ತಂಡದಿಂದ ಜಾಂಬವತಿ ಕಲ್ಯಾಣ ಪ್ರಸಂಗ ಪ್ರದರ್ಶನಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top