ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನ ಮಾರ್ಗದರ್ಶಕಿ ಸುಲೋಚನಾ ಶ್ಯಾಮ್ ಭಟ್‌ ನಿಧನ

Chandrashekhara Kulamarva
0



ಪುತ್ತೂರು: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನ ಮಾರ್ಗದರ್ಶಕರಾದ ಶ್ರೀಮತಿ ಸುಲೋಚನಾ ಶ್ಯಾಮ್ ಭಟ್ ಮುಳಿಯ ಅವರು ಇಂದು ಸಂಜೆ (ಆ.28) ನಿಧನರಾದರು. ಇವರು ಸರಾಫ್‌ ಮುಳಿಯ ಶ್ಯಾಮ್ ಭಟ್ ಅವರ ಪತ್ನಿ ಹಾಗೂ ಮುಳಿಯ ಸಂಸ್ಥೆಗಳನ್ನು ಈಗ ಮುನ್ನಡೆಸುತ್ತಿರುವ ಕೇಶವಪ್ರಸಾದ್ ಮುಳಿಯ ಹಾಗೂ ಕೃಷ್ಣ ನಾರಾಯಣ ಮುಳಿಯ ಅವರ ತಾಯಿಯವರು.


ಅವರಿಗೆ 71 ವರ್ಷ ವಯಸ್ಸಾಗಿತ್ತು. ಅಲ್ಪಕಾಲದ ಅಸೌಖ್ಯದಿಂದ ಇಂದು ಸಂಜೆ ನಿಧನರಾದರು. ನಾಳೆ ಬೆಳಗ್ಗೆ 8:30ರ ವರೆಗೆ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.


ಅವರು ಇಬ್ಬರು ಪುತ್ರರು, ಸೊಸೆಯಂದಿರು, ಒಬ್ಬ ಪುತ್ರಿ, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.


ಮೃತರ ಗೌರವಾರ್ಥ ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಎಲ್ಲ ಶಾಖೆಗಳು ನಾಳೆ (ಶುಕ್ರವಾರ) ಕಾರ್ಯಾಚರಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top