ಬೆಂಗಳೂರು: ಬೆಂಗಳೂರಿನಲ್ಲಿ ತಮ್ಮ 38ನೇ ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶನಿವಾರ ಮಹಾಲಕ್ಷ್ಮೀ ಲೇ ಔಟ್ ನಲ್ಲಿರುವ ಹಿಂದು ಸಾದರ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನದಲ್ಲಿ ಭಾರತೀಯ ಯೋಧರ ಗೌರವಾರ್ಥ ನಡೆದ ಬೃಹತ್ ಸಮಾರಂಭದಲ್ಲಿ ವೃತ್ತಿ ನಿರತ ಮತ್ತು ನಿವೃತ್ತಿ ಪಡೆದ ಒಟ್ಟು 25 ಮಂದಿ ಯೋಧರನ್ನು ಸಂಮಾನಿಸಿ ಸಂದೇಶ ನೀಡಿದರು.
ಶ್ರೀ ಪೇಜಾವರ ಮಠ, ಸ್ಥಳೀಯ ಮಹಾಲಕ್ಷ್ಮೀ ಎಜುಕೇಶನ್ ಸೊಸೈಟಿ ಮತ್ತು ಬ್ರಾಹ್ಮಣ ಸಂಘಗಳ ಸಹಯೋಗದಲ್ಲಿ ಶಾಸಕ ಗೋಪಾಲಯ್ಯನವರ ನೇತೃತ್ವದಲ್ಲಿ ಹಿರಿಯ ನ್ಯಾಯವಾದಿ ಅಶೋಕ ಹಾರ್ನಳ್ಳಿ, ಜಂಟಿ ಸಂಸ್ಥೆಗಳ ಪದಾಧಿಕಾರಿಗಳು ಗಣ್ಯರು, ದೊಡ್ಡ ಸಂಖ್ಯೆಯ ನಾಗರಿಕರು ಭಾಗವಹಿಸಿದ್ದ ನಡೆದ ಸಮಾರಂಭದಲ್ಲಿ ಶ್ರೀ ಸಂಸ್ಥಾನ ಹರಿಹರಪುರ ಮಠದ ಶ್ರೀ ಸಚ್ಚಿದಾನಂದ ಸ್ವಯಂ ಪ್ರಕಾಶ ಸ್ವಾಮೀಜಿಯವರೂ ಸಾನ್ನಿಧ್ಯವಹಿಸಿ ಸಂದೇಶ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ