ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪರ್ಯಾಯ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಹಾಗೂ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀ ಪಾದರ ಸಂಕಲ್ಪದಂತೆ ದಿನಾಂಕ 01-08-2025ರಿಂದ 48 ದಿನಗಳ ಕಾಲ ನಡೆಯುವ ಶ್ರೀಕೃಷ್ಣ ಮಂಡಲೋತ್ಸವ ಕಾರ್ಯಕ್ರಮದ ಪ್ರಥಮ ದಿನ, ಅಗಸ್ಟ್ 01 ಶುಕ್ರವಾರ ರಂದು ಬೆಳಿಗ್ಗೆ 6.00 ಗಂಟೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರಮಪೂಜ್ಯ ಸ್ವಾಮೀಜಿಯವರಿಂದ ಶ್ರೀಕೃಷ್ಣ ಮಂತ್ರೋಪದೇಶದೊಂದಿಗೆ ಕಾರ್ಯಕ್ರಮ ಚಾಲನೆಗೊಳ್ಳಲಿದೆ.
ಅಂದಿನ ಕಾರ್ಯಕ್ರಮದ ವಿವರ ಇಂತಿದೆ (ಮುಂಜಾನೆ 6.00ರಿಂದ 7.00):
* ಮಂಡಲೋತ್ಸವದ ಪ್ರಯುಕ್ತ ವಿವಿಧ ಯೋಗ ಸಂಸ್ಥೆಗಳ ಯೋಗಾರ್ತಿಗಳಿಂದ 48 ಸೂರ್ಯನಮಸ್ಕಾರ.
* ಪರಮಪೂಜ್ಯ ಸ್ವಾಮೀಜಿಯವರಿಂದ ಸರ್ವರಿಗೆ ಸ್ವಾಮಿ ಶ್ರೀಕೃಷ್ಣಾಯ ನಮ: ಮಂತ್ರೋಪದೇಶ.
* ನೆರೆದಿರುವ ಭಕ್ತಾದಿಗಳಿಂದ 108 ಬಾರಿ ಶ್ರೀಕೃಷ್ಣ ಮಂತ್ರ ಪಠಣ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ