ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಮತ್ತು ಶ್ರೀ ವ್ಯಾಸಪ್ರಜ್ಞಾ ಪ್ರತಿಷ್ಠಾನ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಇಂದು (ಫೆ.20) ಸಂಜೆ 5:45ಕ್ಕೆ ಸರಿಯಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಿ.ಜಿ. ವಿಜಯಸಿಂಹ ಆಚಾರ್ಯರು ಕನ್ನಡಕ್ಕೆ ಅನುವಾದಿಸಿರುವ ಸಂಸ್ಕೃತದ ಅಪೂರ್ವ ನಾಟಕ, ಜಯಂತಭಟ್ಟನ ಆಗಮಡಂಬರ ಎಂಬ ಕೃತಿಯನ್ನು ಪರ್ಯಾಯ ಶ್ರೀಪಾದದ್ವಯರಾದ ಶ್ರೀಶ್ರೀ ಸುಗುಣೇಂದ್ರ ತೀರ್ಥರು ಮತ್ತು ಶ್ರೀಶ್ರೀ ಸುಶ್ರೀಂದ್ರತೀರ್ಥರು ಶ್ರೀ ಕೃಷ್ಣ ಮುಖ್ಯಪ್ರಾಣರಲ್ಲಿ ಸಮರ್ಪಣೆ ಮಾಡಿ ಬಿಡುಗಡೆಗೊಳಿಸಿದರು.
ತದನಂತರದಲ್ಲಿ ಸಿ. ಜಿ. ವಿಜಯಸಿಂಹ ಆಚಾರ್ಯರಿಂದ ಆಗಮಡಂಬರ ಮತ್ತು ಗೀತೆ ಎಂಬ ವಿಷಯದ ಕುರಿತು ಉಪನ್ಯಾಸ, ಮತ್ತು ಓಂಪ್ರಕಾಶ್ ಭಟ್ಟರಿಂದ ಆಗಮಡಂಬರ ಕೃತಿಯ ಔಚಿತ್ಯ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ