ಮಂಗಳೂರು: ಕೀರ್ತಿಶೇಷ ವರ್ಕಾಡಿ ಲಕ್ಷ್ಮೀನಾರಾಯಣ ಅಲೆವೂರಾಯರು ಯಕ್ಷರಂಗದಲ್ಲಿ ಸಂಘಟಕರಾಗಿ, ಅರ್ಥಧಾರಿಯಾಗಿ, ವೇಷಧಾರಿಯಾಗಿ ಮೆರೆದವರು. ಈಗ ಅವರ ಹೆಸರಿನಲ್ಲಿ ಅಲೆವೂರಾಯ ಸಹೋದರರು ಪ್ರತಿಷ್ಠಾನದ ಹೆಸರಿನಲ್ಲಿ ಯಕ್ಷತ್ರಿವೇಣಿಯನ್ನು ನಡೆಸುತ್ತಾ ಬರುತ್ತಿದ್ದಾರೆ. ಈ ಬಾರಿ ಎಂಟನೇ ವರ್ಷಾಚರಣೆಯನ್ನು ಶ್ರೀಕ್ಷೇತ್ರ ಮಂಗಳಾದೇವಿಯಲ್ಲಿ ಫೆಬ್ರವರಿ 22, 23 ಮತ್ತು 24 ರ ಶನಿವಾರ, ಭಾನುವಾರ, ಸೋಮವಾರಗಳಂದು ನಡೆಸಲಿದ್ದಾರೆ.
ಬಡಗುತಿಟ್ಟಿನ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ, ಉಪನ್ಯಾಸಕ ಶ್ರೀ ಸುಜಯೀಂದ್ರ ಹಂದೆ, ಬೆಂಕಿನಾಥೇಶ್ವರ ಮೇಳದ ಸಂಚಾಲಕ ಗುರುಪುರ ಶ್ರೀ ಸುರೇಂದ್ರ ಮಲ್ಲಿ, ಕಟೀಲು ಮೇಳದ ಪ್ರಧಾನ ಮದ್ದಲೆಗಾರರಾದ ಸುಧಾಸ್ ಕಾವೂರು ರವರನ್ನು ಸನ್ಮಾನಿಸಲಿದೆ. ಅನುಕ್ರಮವಾಗಿ ವರಾಹಾವಾತಾರ, ರಾಮಾವತಾರ, ಕೃಷ್ಣಾವತಾರಗಳೆಂಬ ಆಖ್ಯಾನಗಳು ಪ್ರದರ್ಶನಗೊಳ್ಳಲಿವೆ ಎಂದು ಪ್ರತಿಷ್ಠಾನದ ಗೌರವ ಸಂಚಾಲಕರಾದ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ