ಇತಿಹಾಸದಲ್ಲಿ ಛತ್ರಪತಿ ಶಿವಾಜಿಯ ಆಡಳಿತ ಅಚ್ಚಳಿಯದೆ ಉಳಿದಿದೆ: ಬಳ್ಳಾರಿ ಮೇಯರ್

Upayuktha
0


ಬಳ್ಳಾರಿ: ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯ ಮೌಲ್ಯ ಮತ್ತು ಮರಾಠ ಪರಂಪರೆಯನ್ನು ತಮ್ಮ ಆಡಳಿತ ಕೌಶಲ್ಯದಿಂದ ಇತಿಹಾಸದಲ್ಲಿ ಅಚ್ಚಳಿಯಾಗಿ ಉಳಿಯುವಂತೆ ಮಾಡಿದವರು ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಹೇಳಿದರು. 


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಶಿವಾಜಿ ಮಹಾರಾಜರು ತನ್ನ ಮರಾಠ ಸೈನ್ಯದ ಮೂಲಕ ಗೆರಿಲ್ಲಾ ಹೋರಾಟದ ತಂತ್ರಗಳನ್ನು ಪರಿಚಯಿಸಿದ ಮೊದಲ ವ್ಯಕ್ತಿ. ಮೊಘಲರ ವಿರುದ್ಧ ಹಲವಾರು ಯುದ್ಧಗಳನ್ನು ಗೆದ್ದ ಅವರ ಶೌರ್ಯ ಮತ್ತು ತಂತ್ರಗಳಿಗೆ ಹೆಸರುವಾಸಿಯಾಗಿದ್ದರು ಎಂದು ತಿಳಿಸಿದರು.


ಕರ್ನಾಟಕ ಮರಾಠ ಛತ್ರಪತಿ ಶಿವಾಜಿ ಮಹಾರಾಜ್ ಸೇನೆಯ ಯುವ ರಾಜ್ಯಾಧ್ಯಕ್ಷ ವಿನೋದ್ ಎಂ.ಚವ್ಹಾಣ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಬಾಲ್ಯ, ಶೌರ್ಯ, ಕ್ಷಾತ್ರ ತೇಜಸ್ಸು, ಸ್ವಾಭಿಮಾನ, ಸ್ವರಾಜ್ಯದ ಪರಿಕಲ್ಪನೆ,ರಾಷ್ಟ್ರಭಿಮಾನ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ನೆರದಿದ್ದ ಸಮಾಜದ ಯುವಕರಿಗೆ ಕರೆ ನೀಡಿದರು.


ಇದೇ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಜರ ಆಡಳಿತ, ನಾಯಕತ್ವ ಮತ್ತು ಮರಾಠ ಯೋಧರ ತ್ಯಾಗ ಬಲಿದಾನ ಹೀಗೆ ಮಹಾರಾಜರ ವೀರ ಸಾಹಸಗಾಥೆಯನ್ನು ತೆರೆದಿಟ್ಟರು.


ಕಾರ್ಯಕ್ರಮದಲ್ಲಿ ಮಾಜಿ ಯೋಧರಿಗೆ ಗೌರವ ಸನ್ಮಾನ ಮಾಡಲಾಯಿತು. ಇತ್ತೀಚಿಗೆ ಮೈಸೂರು ವಿವಿ ಯಿಂದ 16 ಚಿನ್ನದ ಪದಕ ಪಡೆದ ಪೂಜಾ ನಲವಡೆ ಅವರಿಗೆ ಗೌರವ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.


ಮರಾಠ ಸ್ಪೋರ್ಟ್ಸ್ ಕ್ಲಬ್ ಬಳ್ಳಾರಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಕಪ್ -2025 ರ ವಿನ್ನರ್ಸ್ ಮರಾಠಾ ಯೋಧಸ್ ಘಿI ಬಳ್ಳಾರಿ ತಂಡಕ್ಕೆ ಪ್ರಶಸ್ತಿ ವಿತರಿಸಲಾಯಿತು. ರನ್ನರ್ಸ್ ಆದ ಶಿವನೇರಿ ಘಿI ತಂಡಕ್ಕೂ ಬಹುಮಾನ ವಿತರಿಸಲಾಯಿತು.


ಅದ್ದೂರಿ ಮೆರವಣಿಗೆ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಅಂದು ಬೆಳಿಗ್ಗೆ ನಗರದ ಪಾಂಡುರಂಗಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.ಸಂಜೆ 4 ಗಂಟೆಗೆ ಭವ್ಯ ಮೆರವಣಿಗೆಯು ನಗರದ  ಪ್ರಮುಖ ರಸ್ತೆಗಳಲ್ಲಿ ಕಲಾತಂಡಗಳ ಝೇಂಕಾರದೊಂದಿಗೆ ಅದ್ದೂರಿಯಾಗಿ ನಡೆಯಿತು.


ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ಹಿಂದೂ ಧಾರ್ಮಿಕ ಧತ್ತಿ ಇಲಾಖೆಯ ಅಧಿಕಾರಿ ಪ್ರಕಾಶ್ ರಾವ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವಾಜಿರಾವ್.ಎಂ ಸೇರಿದಂತೆ ಮರಾಠ ಸಮಾಜದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top