ಮಾತಿನ ಪೆಟ್ಟು- ಅಳಿಸಲಾಗದ ಗಾಯ

Upayuktha
0


ನೋವು ಎನ್ನುವುದು ಅತ್ಯಂತ ಕ್ರೂರವಾದದ್ದು. ಕೈಯ ಪೆಟ್ಟು ಮಾಸಬಹುದು ಆದರೆ ಮಾತಿನ ಪೆಟ್ಟು ಎಂದಿಗೂ ಮಾಸುವುದಿಲ್ಲ. ಏಕೆಂದರೆ ಒಂದು ಸಣ್ಣ ಮಾತು ನಮ್ಮ ಜೀವನ ಪೂರ್ತಿ ನೆನಪಿರುತ್ತದೆ. ಕೆಲವೊಂದು ಸಣ್ಣ- ಪುಟ್ಟ ಕೋಪದಿಂದ ಹೇಳುವ ಮಾತು ಒಂದು ಒಳ್ಳೆಯ ಸಂಬಂಧವನ್ನು ದೂರಮಾಡಬಹುದು.


ಕತ್ತಿ ತಾಗಿದ ಗಾಯ ಒಂದೆರಡು ದಿನದಲ್ಲಿ ವಾಸಿಯಾಗುತ್ತದೆ. ಆದರೆ ಕತ್ತಿಗಿಂತಲೂ ಹರಿತವಾದದ್ದು ಮಾತು ಎಂಬ ಕತ್ತಿ. ಆ ಕತ್ತಿ ಒಮ್ಮೆ ಮನಸಿಗೆ ತಾಗಿದರೆ ಆ ಗಾಯ ಮನಸಿನಲ್ಲಿ ಹಾಗೆ ಇರುತ್ತದೆ. ಬಾಯಿಂದ ಬರುವ ಒಂದೊಂದು ಶಬ್ದ ನೂರಾರು ವಿಷಯವನ್ನು, ಸಂಗತಿಯನ್ನು ತಿಳಿಸುತ್ತದೆ. ಅದು ಚಿಕ್ಕ ಪದವಾಗಿದ್ದರೂ ನಮ್ಮ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ.


ಚಿಕ್ಕ ವಯಸ್ಸಿನಲ್ಲಿ ತಂದೆ -ತಾಯಿಯ ಚಿಕ್ಕ ಮಾತು ಆ ಪ್ರಾಯದಲ್ಲಿ ಮಕ್ಕಳ ಮನಸ್ಸಿಗೆ ತೀವ್ರವಾದ ನೋವನ್ನು ಉಂಟು ಮಾಡುತ್ತದೆ. ಆದರೆ ಅವರು ನಮ್ಮ ಒಳ್ಳೆಯದಕ್ಕೆ ಹೇಳುವುದು ಎಂದು ನಮಗೆ ಅರ್ಥ ಆಗುವುದಿಲ್ಲ. ಅರ್ಥ ಆಗುವ ಮೊದಲೇ ನಾವು ಬೆಳೆದು ದೊಡ್ಡವರಾಗಿ ಇರುತ್ತೇವೆ. ಆಗ ಸಮಾಜ ಹೇಳುವ ಅರ್ಥಹೀನ ಮಾತು ಮನಸಿನ ಮೇಲೆ ಅಚ್ಚು ಹಾಕಿದ ಹಾಗೆ ಇರುವುದು. ಕೆಲವೊಂದು ಮಾತು ನಮ್ಮ ಜೀವನದ ವಿಧಾನವನ್ನು ಬದಲಾಯಿಸಬಹುದು. ಇದರಿಂದ ಉತ್ತಮ ಬದುಕು ಕಟ್ಟಬಹುದು ಆದರೆ ಎಲ್ಲಾ ಮಾತು ಒಳ್ಳೆಯ ಮಾತುಗಳಾಗಿರುವುದಿಲ್ಲ. ಚುಚ್ಚುವ ಮುಳ್ಳುಗಳ ಹಾಗೆ ವಿಷ ಭರಿತವಾಗಿರುತ್ತದೆ. 


'ಮಾತು ಬೆಳ್ಳಿ, ಮೌನ ಬಂಗಾರ' ಎಂಬ ಗಾದೆ ಎಷ್ಟು ಸರಿ ಅಲ್ಲವೇ? ಕೆಲವೊಮ್ಮೆ ನಾವು ಆಡುವ ಮಾತು ಕೆಲವರ ಮನಸಿಗೆ ಅದೆಷ್ಟು ನೋವು ಮಾಡಬಹುದು. ಅದು ಒಂದು ಮಾಜದ ಗಾಯ ಮನಸಿನ ಒಳಗೆ ಇರುವುದು. ಮಾತು ಎಂಬುವುದು ಮುತ್ತಿನ ಹಾರದ ಹಾಗೆ ಇರಬೇಕೆ ಹೂರತು ಚುಚ್ಚುವ ಮುಳ್ಳುಗಳ ಹಾಗೆ ಇರಬಾರದು.




- ಮಧುಶ್ರೀ ಸರ್ವೆ

ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು ಪುತ್ತೂರು


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top