ಜೀವನದರಿವು- ಬಾಳಿಗೆ ಬೆಳಕು

Upayuktha
1 minute read
0


ದುಕೆಂದರೇನು ಎಂಬ ಪ್ರಶ್ನೆಗೆ ಉತ್ತರ ಯಾರಿಂದಲೂ ನೀಡಲಾಗುವುದು. ಕೆಲವೊಬ್ಬರಿಗೆ ಬದುಕೆಂಬುವುದು ಹಣ ಮಾಡುವುದು, ಕೆಲವೊಬ್ಬರಿಗೆ ನೆಮ್ಮದಿ, ಕೆಲವೊಬ್ಬರಿಗೆ ಕಷ್ಟ, ಕೆಲವೊಬ್ಬರಿಗೆ ಇನ್ನೊಬ್ಬರ ಬದುಕಿನಲ್ಲಿ ಮೋಸಮಾಡಿ ತಮಾಷೆ ನೋಡುವುದು. ಜೀವನದಲ್ಲಿ ಯಾರಿಗೆ ಯಾರು ಕೂಡ ಶಾಶ್ವತವಲ್ಲ, ನಮ್ಮೊಂದಿಗಿದ್ದು ಬೆನ್ನಿಗೆ ಚೂರಿ ಹಾಕುವವರೇ ಜಾಸ್ತಿ ಈ ಕಲಿಯುಗದಲ್ಲಿ. ಬದುಕಲ್ಲಿ ನಾವೂ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ನೂರು ಸಲ ಯೋಚನೆ ಮಾಡಬೇಕು. ನಮ್ಮ ನಿರ್ಧಾರ ಇನ್ನೊಬ್ಬರ ಜೀವನಕ್ಕೆ ತೊಂದರೆಯಾಗಬಾರದು.


'ಮಾತು ಬೆಳ್ಳಿ ಮೌನ ಬಂಗಾರ'  ಎಂಬ ಗಾದೆ ಮಾತಿನಂತೆ ಮಾತಿನ ಮೌಲ್ಯವನ್ನು ಅರಿತುಕೊಳ್ಳಬೇಕು, ಇನ್ನೊಬ್ಬರ ಬಗ್ಗೆ ಮಾತನಾಡುವ ಮುನ್ನ ನಮ್ಮ ಬಗ್ಗೆ ನಾವೂ ತಿಳಿದುಕೊಂಡಿರಬೇಕು. ಈಗಿನ ಸಂಬಂಧ ದೂರವಾಗುವುದೇ ಮೂರನೇ ವ್ಯಕ್ತಿಯಿಂದ, ನಾವೂ ನಮ್ಮವರ ಮೇಲೆ ನಂಬಿಕೆಯಿಡಬೇಕು ಹೊರತು ಮೂರನೇ ವ್ಯಕ್ತಿಯ ಮೇಲೆಯಲ್ಲ. ಪ್ರತಿಯೊಂದು ಸಂಬಂಧದ ಬೆಲೆಯನ್ನು ಮೊದಲು ಅರಿಯಬೇಕು ಹಾಗೂ ಯಾವುದೇ ಸಂಬಂಧವನ್ನು ಹಾಳು ಮಾಡಬಾರದು ಮನುಜ ಈ ಜಗದಲ್ಲಿ ಒಬ್ಬರ ಬಳಿ ಹಣ, ಶ್ರೀಮಂತಿಕೆಯಿದೆಯೆಂದು ಪಡಬೇಡ ಮತ್ಸರ, ನೀ ಕಷ್ಟಪಟ್ಟು ದುಡಿದರೆ ನೀನು ಸಂಪಾದಿಸಬಹುದು ಅಪಾರ.


ಬದುಕು ಬಹಳ ಸುಂದರ, ನೀ ಏನನ್ನು ಅಪೇಕ್ಷಿಸದಿರು ಯಾರಿಂದ. ನಂಬಿಕೆಗೆ ಮುಖ್ಯವಾದದ್ದು ಸತ್ಯಾಂಶ, ಸುಳ್ಳನ್ನು ಹೇಳಿ ಏನನ್ನೂ ಸಾಧಿಸುವೆ. ಸುಳ್ಳಿನ ಮುಖವಾಡ ಒಂದಲ್ಲ ಒಂದು ದಿನ ಗೊತ್ತಾದರೆ ಸಂಬಂಧವು ಉಳಿಯದು ತುಂಬಾ ಸಮಯ. ಕಷ್ಟ ಬಂತೆಂದು ಸಾಯುವ ನಿರ್ಧಾರ ಸರಿಯಲ್ಲ, ಕಷ್ಟವನ್ನು ಎದುರಿಸಿದಾಗಲೇ ಜೀವನದಲ್ಲಿ ಗೆಲ್ಲಲು ಸಾಧ್ಯ. ನಿನ್ನ ನಂಬುವ ಜೀವಕ್ಕೆ ಸಮಯ ನೀಡು, ಹಣವೇ ಜೀವನವಾಗಬಾರದು. ಸಮಯವೆಂಬುವುದು ಜೀವನದ ಚಕ್ರ, ಪ್ರತಿಯೊಬ್ಬರ ನಿಜರೂಪವನ್ನು ಸಮಯವೇ ತಿಳಿಸುತ್ತದೆ. ಜೀವನದ ಪ್ರತಿ ಪುಟವು ಅದ್ಭುತವಾದದ್ದು ಕಷ್ಟ-ನೋವು ಅನುಭವಿಸಿದಾಗಲೇ ಸುಖ-ನೆಮ್ಮದಿಯನ್ನು ಕಾಣಲು ಸಾಧ್ಯ.


- ಸುಚಿರಾ ಪಿ ಶೆಟ್ಟಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top