ಮಂಗಳೂರು: ಟ್ರಸ್ಟ್ ಮ್ಯೂಚುಯಲ್ ಫಂಡ್ ಸಣ್ಣ ಬಂಡವಾಳದ ಷೇರುಗಳಿಗೆ ಹೂಡಿಕೆ ಮಾಡುವ ಟ್ರಸ್ಟ್ ಎಂ.ಎಫ್. ಸ್ಮಾಲ್ ಕ್ಯಾಪ್ ಫಂಡ್ ಎಂಬ ಓಪನ್-ಎಂಡೆಡ್ ಈಕ್ವಿಟಿ ಸ್ಕೀಂ ಬಿಡುಗಡೆ ಮಾಡಿದೆ. ಈ ಹೊಸ ಫಂಡ್ ನಿಫ್ಟಿ ಸ್ಮಾಲ್ ಕ್ಯಾಪ್ 250 ಟ್ರೈ ಇಂಡೆಕ್ಸ್ ಮಾನದಂಡ ಹೊಂದಿದ್ದು ಹೂಡಿಕೆದಾರರಿಗೆ ಹೆಚ್ಚಿನ ಪ್ರಗತಿಯ ವಲಯಗಳು ಮತ್ತು ಉದಯೋನ್ಮುಖ ವಿಷಯಗಳಲ್ಲಿ ಆಕರ್ಷಕ ಅವಕಾಶ ಕಲ್ಪಿಸುತ್ತದೆ. ಈ ಸ್ಕೀಂ ಪ್ರಾಥಮಿಕ ಗುರಿಯು ಸಣ್ಣ ಬಂಡವಾಳದ ಕಂಪನಿಗಳಲ್ಲಿ ಈಕ್ವಿಟಿ ಸಂಬಂಧಿತ ಸೆಕ್ಯುರಿಟೀಸ್‌ನಲ್ಲಿ ದೀರ್ಘಾವಧಿ ಬಂಡವಾಳ ಬೆಳವಣಿಗೆ ಉಂಟು ಮಾಡುವುದಾಗಿದೆ.
ಈ ಬಿಡುಗಡೆಯು ಹೂಡಿಕೆದಾರರಿಗೆ ಪ್ರಾರಂಭಿಕ ಪ್ರಗತಿಯ ಹಂತದಲ್ಲಿ ಕಂಪನಿಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುತ್ತಿದ್ದು ದೀರ್ಘಾವಧಿಯ ಸಂಪತ್ತು ಸೃಷ್ಟಿಯ ಸಾಮರ್ಥ್ಯ ಹೊಂದಿರುತ್ತದೆ. ಟ್ರಸ್ಟ್ ಎಂಎಫ್ ಸ್ಮಾಲ್ ಕ್ಯಾಪ್ ಫಂಡ್ ಎನ್.ಎಫ್.ಒ. ಬಿಡುಗಡೆಯು ಟ್ರಸ್ಟ್ಎಂಎಫ್ ನಿಂದ ಎರಡನೆಯ ಈಕ್ವಿಟಿಯಾಗಿದೆ. ಬಿಡುಗಡೆಯು ಸಣ್ಣ ಬಂಡವಾಳದ ಕಂಪನಿಗಳು ವಿಸ್ತರಿಸಿದ ಪ್ರಗತಿಯನ್ನು ಹೊಂದುತ್ತಿರುವ ಸೂಕ್ತ ಸಮಯದಲ್ಲಿ ಬಂದಿದ್ದು ಅದು ದೀರ್ಘಾವಧಿ ಮೌಲ್ಯ ಸೃಷ್ಟಿಸುವಲ್ಲಿ ಆಕರ್ಷಕ ಅವಕಾಶಗಳನ್ನು ನೀಡುತ್ತದೆ ಎಂದು ಟ್ರಸ್ಟ್ ಎಂಎಫ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಸಂದೀಪ್ ಬಾಗ್ಲಾ ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ