ಸತೀಶ ಕೆ.ಎಂ ಅವರಿಗೆ ಲೆಫ್ಟಿನೆಂಟ್ ಪದವಿ

Upayuktha
0



ಮಂಗಳೂರು: ಸತೀಶ ಕೆ.ಎಂ ಇವರು ಭಾರತ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಬರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ ಸಿ ಸಿ) - ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಕಾಂಪ್ಟಿ, ನಾಗಪುರ್, ಮಹಾರಾಷ್ಟ್ರ ಇಲ್ಲಿ ದಿನಾಂಕ 29-07-2024 ರಿಂದ 09-11-2024 ವರೆಗೆ ಫ್ರೀ ಕಮಿಷನ್ ಕೋರ್ಸ್ (ಎಸ್ ಡಿ 173) ಅನ್ನು ಪೂರೈಸಿರುತ್ತಾರೆ. ಎನ್‌ಸಿಸಿ ನಿಯಮ 1948 ಉಪವಿಧಿ 21 (5) ರ ಅಡಿಯಲ್ಲಿ ಸತೀಶ ಕೆ.ಎಂ ಇವರು ದಿನಾಂಕ 14-10-2024 ರಂದು ಲೆಫ್ಟಿನೆಂಟ್ ಪದವಿಯನ್ನು ಪಡೆದಿರುತ್ತಾರೆ.


ಇವರು ಪ್ರಸ್ತುತ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ (ಕೆಪಿಟಿ), ಮಂಗಳೂರು ಇಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ವಿಭಾಗಾಧಿಕಾರಿ ಹಾಗೂ ಹಿರಿಯ ಶ್ರೇಣಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 12 ವರ್ಷಗಳ ಸೇವಾ ಅನುಭವದ ಜೊತೆಯಲ್ಲಿ ಕಾಲೇಜಿನ ಎನ್‌ಸಿಸಿ ಘಟಕದ ಅಸೋಸಿಯೇಟ್ ಎನ್‌ಸಿಸಿ ಆಫೀಸರ್ (ANO) ಆಗಿ ಕರ್ತವ್ಯವನ್ನು ಸಲ್ಲಿಸುತ್ತಿದ್ದಾರೆ. 


ಇವರು ಕಾಸರಗೋಡು ತಾಲೂಕು ನೀರ್ಚಾಲು ಗ್ರಾಮದ ಕುಂಟಿಕಾನ ಮಠ ಕೆ.ಎಂ ಶಾಮ ಭಟ್ಟ ಮತ್ತು ಸರಸ್ವತಿ ದಂಪತಿಗಳ ಸುಪುತ್ರನಾಗಿದ್ದು ಇವರ ಪತ್ನಿ- ಶ್ರೀಮತಿ ಅಕ್ಷಯ ಎಂ ಎಸ್, ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕುಮಾರಿ ಶ್ರದ್ಧಾ ಸರಸ್ವತಿ ಕೆ ಎಂ ಮತ್ತು ಕುಮಾರಿ ಶಾರ್ವರಿ ಕೆ ಎಂ ಇವರ ಪುತ್ರಿಯರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top