ಇದು ನಮ್ಮ ಜೀವನಕ್ಕೆ, ಅಷ್ಟೇ ಏಕೆ ಎಲ್ಲರ ಜೀವನಕ್ಕೂ ಅನ್ವಯಿಸುತ್ತದೆ. ಈಗಿನ ಯುಗವನ್ನು ಆಧುನಿಕ ತಂತ್ರಜ್ಞಾನದ ಯುಗವೆಂದೇ ಕರೆಯಬಹುದು. ಇಲ್ಲಿ ಬೆಳಗಾಗುವುದರೊಳಗೆ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಸಾಕ್ಷಿಯನ್ನು ಕಾಣಬಹುದು. ಈಗಿನ ಡಿಜಿಟಲ್ ತಂತ್ರಜ್ಞಾನದಿಂದ ಇಡೀ ಜಗತ್ತೇ ಒಂದು ಹಳ್ಳಿಯಾಗಿ ಮಾರ್ಪಟ್ಟಿದೆ. ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ನಾವು ಅಪ್ಡೇಟ್ ಆಗದಿದ್ದರೆ ನಮ್ಮನ್ನು ಓಬೀರಾಯನ ಕಾಲದವರೆಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.
ಇದನ್ನು ನಮ್ಮ ಸಾಮಾಜಿಕ ಜೀವನಕ್ಕೂ ಅನ್ವಯಿಸಬಹುದು. ಅಪ್ಪ ನೆಟ್ಟ ಆಲದ ಮರವೆಂದು ಅದಕ್ಕೆ ಜೋತು ಬಿದ್ದಂತೆ ಗೊಡ್ಡು, ಸಾಮಾಜಿಕ ಮೌಢ್ಯ ಮತ್ತು ಕಂದಾಚಾರಗಳಿಗೆ ಜೋತು ಬೀಳದೆ ಪ್ರಗತಿಶೀಲ ಭಾವನೆಗಳನ್ನು ಅಳವಡಿಸಿಕೊಂಡರೆ ನಮ್ಮ ಜೀವನವು ಸುಂದರವಾಗುವುದರಲ್ಲಿ ಸಂಶಯವಿಲ್ಲ. ಆಧುನಿಕ ಸೌಲಭ್ಯಗಳನ್ನು ಅನುಭವಿಸುವಲ್ಲಿ ಓಡುವ ನಾವು ಅದೇ ವೇಗವನ್ನು ಮಾನವೀಯತೆಯನ್ನು ಅಳವಡಿಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತೇವೆ.
"ಜೀವನವೆಂದರೆ ಪಾರ್ಕಿಂಗ್ ಸ್ಟೇಷನ್ ಅಲ್ಲ, ಅದು ರೇಸಿಂಗ್ ಟ್ರ್ಯಾಕ್" ಎಂಬುದನ್ನು ಅರಿತುಕೊಂಡರೆ ನಾವು ಅಪ್ಡೇಟ್ attitude ಬೆಳೆಸಿಕೊಳ್ಳಲು ಸಾಧ್ಯ. ಇಂಟರ್ನೆಟ್ ಉಪಯೋಗಿಸಿ ಅಪ್ಡೇಟ್ ಅಷ್ಟೇ ಆದರೆ ಸಾಲದು, ನಮ್ಮ ನೈತಿಕ ಮೌಲ್ಯಗಳನ್ನು ಅಳವಡಿಸಿ ತೋರಿಸೋಣ.
ಆಗ ಮಾತ್ರ ನಮ್ಮ signature autograph ಆಗಲು ಸಾಧ್ಯ. ಈ ದಿಕ್ಕಿನಲ್ಲಿ ಯತ್ನಿಸಿ ಸಾಗೋಣ.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ