ಶ್ರೀ ಸತ್ಯಾತ್ಮ ವಾಣಿ-23: ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ

Upayuktha
0



ಹಾನುಭಾವರಾದ ಕಲಿಯುಗ ಕಲ್ಪವೃಕ್ಷ ಕಾಮಧೇನುಗಳಾದ ರಾಘವೇಂದ್ರ ಸ್ವಾಮಿಗಳ ಸ್ಮರಣೆಯನ್ನು ದಿನ ನಿತ್ಯ ಮಾಡಬೇಕು ವಿಶೇಷ ಸನ್ನಿಧಾನ ಆರಾಧನೆಯ ದಿನ ಆದ್ದರಿಂದ ಈ ಮೂರು ದಿನಗಳು ತಪ್ಪದೇ ಮಾಡಬೇಕು. ಇಂದು ಆ ಸೇತು ಹಿಮಾಚಲ ಎಲ್ಲರೂ ಸ್ತೋತ್ರ ಮಾಡಿ ಆಶೀರ್ವಾದ ಪಡೆಯುತ್ತಾರೆ. ಅವರಿಗೆ ನಮಸ್ಕಾರ ಮಾಡುತ್ತಾ ಇದ್ದೇನೆ ಪೂಜ್ಯರಿಗೆ ನಾನು ನಮಸ್ಕಾರ ಮಾಡುತ್ತಿದ್ದೇನೆ, ಎಂದು ಹೇಳಿ ಅವರಿಗೆ ಅನೇಕ ವಿಶೇಷಣಗಳನ್ನು ಕೊಟ್ಟು ಅಪ್ಪಣಾಚಾರ್ಯರು ಕೊಂಡಾಡಿದಂತೆ ಪೂಜ್ಯಾಯ ರಾಘವೇಂದ್ರಾಯ ಅಂದರೆ ಪೂಜ್ಯರಾದ ರಾಘವೇಂದ್ರ ಸ್ವಾಮಿಗಳಿಗೆ ನಮಸ್ಕಾರ ಮಾಡುತ್ತೇನೆ ಎಂದು, ಅವರಿಗೆ ಅನೇಕ ವಿಶೇಷಣಗಳನ್ನು ಕೊಡುತ್ತಾರೆ.


"ಪೂಜ್ಯಾಯ ರಾಘವೇಂದ್ರಾಯ ಸತ್ಯ-ಧರ್ಮ-ರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ದುರ್ವಾದಿ-ಧ್ವಾಂತ-ರವಯೇ ಸಜ್ಜನೇಂದೀವರೇಂದವೇ |

ಶ್ರೀ ರಾಘವೇಂದ್ರಗುರವೇ ನಮಃ ನಮೋ ಅತ್ಯಂತ ದಯಾಲವೇ ||" 



ಇಂತಹ ರಾಘವೇಂದ್ರ ಸ್ವಾಮಿಗಳವರಿಗೆ ನಮಸ್ಕಾರ ಮಾಡುತ್ತೇವೆ ಎಂದು ಹೇಳುತ್ತಾರೆ. ಮಹಾಭಾರತದಲ್ಲಿ ನಾರದ ಮತ್ತು ಶ್ರೀಕೃಷ್ಣ ಪರಮಾತ್ಮನ ಸಂವಾದ ಮಹತ್ವದ್ದು, ಅದರಲ್ಲಿ ಪೂಜ್ಯತೆ ಮತ್ತು ನಮನೀಯತೆಗೆ ಇರಬೇಕಾದ ಗುಣ ಏನು ಎಂದು ತಿಳಿಯಬೇಕು. ಪೂಜ್ಯತೆಯ ಅರ್ಹತೆಯನ್ನು ಪಡೆದವರು ಶ್ರೀಮದಾಚಾರ್ಯರು, ಟೀಕಾಚಾರ್ಯರು, ಶ್ರೀಪಾದರಾಜರಯ, ಶ್ರೀ ವ್ಯಾಸರಾಜರು, ಶ್ರೀ ವಾದಿರಾಜರು, ಶ್ರೀ ರಘೋತ್ತಮ ತೀರ್ಧರು, ಶ್ರೀ ವಿಜಯೀಂದ್ರ ತೀರ್ಥರು, ಶ್ರೀ ರಾಘವೇಂಧ್ರರು, ಶ್ರೀ ಸತ್ಯವ್ರತರು, ಶ್ರೀ ಸತ್ಯಧ್ಯಾನರು ಮೊದಲಾದ ಯತಿವರೇಣ್ಯರು, ಅನೇಕ ದಾಸವರೇಣ್ಯರು ಇದ್ದಾರೆ ಇಂತಹ ಮಹಾನುಭಾವರು ಯೋಗ್ಯತೆ ಬರಲು ಹೇಗೆ ಇದ್ದರು ನಾವುಗಳು  ಜೀವನದಲ್ಲಿ ಹೇಗೆ ಇರಬೇಕು ಎಂಬುದನ್ನು ತಿಳಿಯಬೇಕು. ಮಹಾಭಾರತದಲ್ಲಿ ಪೂಜ್ಯತೆಯ ಅರ್ಹತೆಯನ್ನು ಹೇಳುತ್ತದೆ, ಮತ್ತು ಆ ಯೋಗ್ಯತೆ ಇಲ್ಲದವರು ನಮಸ್ಕಾರ ಮಾಡಿಸಿಕೊಳ್ಳಬಾರದು ಎಂಬ ನೀತಿಯನ್ನುಕೂಡ ಮಹಾಭಾರತ ತಿಳಿಸುತ್ತದೆ. ಯುಧಿಷ್ಠಿರ ಭೀಷ್ಮಾಚಾರ್ಯರಿಗೆ, ಯಾರಿಗೆ ಪೂಜೆಯನ್ನು, ನಮಸ್ಕಾರವನ್ನು ಮಾಡಬೇಕೆಂದು ಕೇಳುತ್ತಾನೆ. ಆಗ ಭೀಷ್ಮಾಚಾರ್ಯರು ಶ್ರೀಕೃಷ್ಣ ಪರಮಾತ್ಮ ನಾರದರ ಸಂವಾದದ ಮೂಲಕ ತಿಳಿ ಎಂದು ಹೇಳಿದ್ದಾರೆ. ಶ್ರೀಕೃಷ್ಣ ಪರಮಾತ್ಮ ಕಪಟನಾಟಕ ಸೂತ್ರಧಾರ ಅವನು ನಾರದನಿಗೆ ಕೇಳಿದ ಪ್ರಶ್ನೆಯನ್ನು ನಾರದರು ಹೇಳಿದ್ದನ್ನು ನಿನಗೆ ಹೇಳುತ್ತೇನೆ ಎಂದು ಭೀಷ್ಮರು ಧರ್ಮರಾಜನಿಗೆ ಹೇಳಿದ ಮಾತು.


ನಾರದರು ದೇವತೆಗಳಿಗೆ ಯಾರು ಚೆನ್ನಾಗಿ ನಮಸ್ಕಾರ ಮಾಡಿದವರಿಗೆ ನಾನು ನಮಸ್ಕಾರ ಮಾಡುತ್ತೇನೆ. ಯಾರು ತಮಗಿಂತ ದೊಡ್ಡವರಿಗೆ ನಮಸ್ಕಾರ ಮಾಡುವ ವಿನಯವನ್ನು ಹೋಂದಿರುತ್ತಾರೆಯೋ ಅವರಿಗೆ ನಮಸ್ಕಾರ ಮಾಡುತ್ತೇನೆ ಎಂದು ಹೇಳುತ್ತಾರೆ. ಪರಮಾತ್ಮ, ಲಕ್ಷ್ಮೀದೇವಿ ಮತ್ತು ದೇವರನ್ನು ತಾರತಮ್ಯದ ಪ್ರಕಾರ ನಮಸ್ಕಾರ  ಮಾಡುತ್ತೇನೆ. ದೇವರಿಗೆ ಮಾತ್ರ ನಮಸ್ಕಾರ ಮಾಡುತ್ತೇನೆ. ಇತರ ದೇವತೆಗಳಿಗೆ ಮಹತ್ವ ಕೊಡದೇ ಇರುವವರಿಗೆ ನಾನು ಬೆಲೆ ಕೊಡುವುದಿಲ್ಲ ಎಂದು ಹೇಳುತ್ತಾರೆ. ಶ್ರೀಮದಾಚಾರ್ಯರು ಕೇವಲ ಪರಮಾತ್ಮನ ಸರ್ವೋತ್ತಮತ್ವವನ್ನು ಮಾತ್ರತಮ್ಮ ಸಿದ್ಧಾಂತದಲ್ಲಿ ಹೇಳದೆ ಇತರ ದೇವತೆಗಳಿಗೂ ತಾರತಮ್ಯದ ಪ್ರಕಾರ ಪೂಜೆ ಭಕ್ತಿಯನ್ನು ಮಾಡಬೇಕು ಎಂದು ಹೇಳಿದ್ದಾರೆ. ಇದನ್ನು ಯೋಚನೆ ಮಾಡಿದರೆ ನಾರದರು ಹೇಳುವಂತೆ ರಾಘವೇಂಧ್ರ ಸ್ವಾಮಿಗಳು ಎಲ್ಲ ಹಿರಿಯರಿಗೂ ನಮಸ್ಕಾರ ಮಾಡುತ್ತಿದ್ದರು. ರಾಯರು ಪೂರ್ವಾಶ್ರಮದಲ್ಲಿ ವೀಣಾ ವೆಂಕಣ್ಣಾಚಾರ್ಯರು ಯಾರದೋ ಮನೆಯಲ್ಲಿ ಗಂಧವನ್ನು ತೇಯುತ್ತಿದ್ದರು. ಅಗ್ನಿ ಸೂಕ್ತವನ್ನು ಹೇಳಿ ಗಂಧ ತೇಯ್ದರೆ ಆ ಗಂಧ ಲೇಪನ ತಾಪವಾಯಿತು.  ರಾಘವೇಂದ್ರ ಸ್ವಾಮಿಗಳ ಮಹತ್ವ ಅಂತದ್ದು, ರಾಘವೇಂದ್ರ ಸ್ವಾಮಿಗ:ಳಲ್ಲಿ ಭಕ್ತಿ ಮತ್ತು ಅನುಸಂಧಾನವಿದ್ದ ಕಾರಣ ಅವರು ಸ್ತುತಿ ಮಾಡಿದ ದೇವರು ಅಲ್ಲಿ ತಾಪ ಕೊಟ್ಟಿದ್ದಾನೆ. ಅಗ್ನಿಯನ್ನು ಚೆನ್ನಾಗಿ ಪೂಜೆ ಮಾಡಿದವರು ಪೂಜ್ಯಾಯ ರಾಘವೇಂದ್ರಾಯ ಎಂದು ಯೋಚಿಸಬಹದು.


ಗಂಧ ಲೇಪನ ಮಾಡಿಕೊಂಡಿದ್ದವರಿಗೆ ತಾಪವು ಆಯಿತಲ್ಲ ಎಂದರೆ ವೇದ ಮಂತ್ರದ ಪಠಣ ಎಷ್ಟು ಶಕ್ತಿಯುತವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ. ನಂತರ ವರುಣ ಸೂಕ್ತ ಹೇಳಿದರೆ ಶಾಂತವಾಯಿತು. ರಾಯರು ವರುಣನ್ನು ಒಲಿಸಿಕೊಂಡವರು ರಾಘವೇಂದ್ರ ಸ್ವಾಮಿಗಳನ್ನು ಪೂಜ್ಯಾಯ ಎಂದು ತಿಳಿಯಬೇಕು. ರಾಘವೇಂದ್ರ ಸ್ವಾಮಿಗಳಿಗೆ, ಪೀಠಾಧೀಪತಿಗಳಾದ ಮೇಲೆ ತಂಜಾವೂರು ರಾಜನು ನವರತ್ನಗಳನ್ನು ಕೊಟ್ಟರೆ ಅದಕ್ಕೆ ಮಹತ್ವನ್ನು ಕೊಡಲಿಲ್ಲ. ಪುರಂದರ ದಾಸರಂತೆ ರತ್ನವನ್ನು ತಿಪ್ಪೆಗೆ ಹಾಕಿ ಬರುತ್ತಾರೆ. ನವಕೋಟಿ ನಾರಾಯಣರು ಅವರೇ ರತ್ನದ ಜ್ಞಾನ ಇದ್ದು ಅವರಿಗೆ ವೈರಾಗ್ಯ. ಹೀಗೆ ರಾಘವೇಂದ್ರಸ್ವಾಮಿಗಳೂ ಕೂಡ ಅದನ್ನು ಬೆಂಕಿಯಲ್ಲಿ ಹಾಕುತ್ತಾರೆ ಎಂದು ತಂಜಾವೂರು ರಾಜನಿಗೆ ಬೇಸರವಾಯಿತು, ಬೆಂಕಿಯಲ್ಲಿ ಬಿದ್ದ ನವರತ್ನಗಳ ಹಾರಕ್ಕೂ ವಿಕಾರವಾಗಿರಲಿಲ್ಲ ಸ್ವಾಮಿಗಳ ಕೈಗೂ ವಿಕಾರವಾಗಿರಲಿಲ್ಲ. ಅಗ್ನಿ ರೂಪದ ಪರಶುಶಾಮ ದೇವರನ್ನು ಪ್ರಾರ್ಥನೆ ಮಾಡಿದ್ದ ಕಾರಣ ಅವರಿಗೆ ಅಗ್ನಿಯಿಂದ ವಿಕಾರವಾಗಲಿಲ್ಲ. ಮಹಾವಿಷ್ಣುವಿನ ಉಪಾಸನೆ ಮಾಡಿದವರು ಎಲ್ಲ ವಸ್ತುಗಳು ಪರಮಾತ್ಮನ ಅಧೀನ ಎಂದು ತಿಳಿಸುತ್ತ ಪರಮಾತ್ಮನ ಸರ್ವೋತ್ತಮತ್ವನ್ನು ತಿಳಿಸಕೊಡುತ್ತಾರೆ.


ಮಹಾಲಕ್ಷ್ಮೀಯ ಉಪಾಸನೆಯನ್ನು ಬಹಳ ಮಾಡಿದ್ದಾರೆ ಎಂದರೆ ಅವರ ಜೀವನ ನೋಡಿದರೆ ಅವರ ಬಡತನದ ವರ್ಣನೆಯನ್ನು ಅವರ ಜೀವನ ಚರಿತ್ರೆಯಲ್ಲಿ ಕೇಳುತ್ತೇವೆ. ಅವರ ವೈರಾಗ್ಯವನ್ನು ತೋರಿಸಲು ಅವರು ಪೂಜ್ಯರು. ರಾಯರು ಸುಧೀಂದ್ರತೀರ್ಥರ ಬಳಿ ರಾತ್ರಿಯಲ್ಲಿ ತಮ್ಮ ವ್ಯಾಖ್ಯಾ ಬರೆಯುವಾಗ ಎಲೆಗಳನ್ನು ಸುಟ್ಟು ಬಂದ ಬೆಳಕಿನಲ್ಲಿ ಬರೆಯುತ್ತಿದ್ದವರು. ಅಂತ ಸ್ವತ್ವದಲ್ಲಿ ಅವರಿಗೆ ವಿಶ್ವಾಸವಿದೆ. ಬಾಹ್ಯವಾದ ಉಪಕರಣಗಳ ಬಗೆಗೆ ಆಸಕ್ತಿ ಇದ್ದಿಲ್ಲ ಎಂದು ಹೇಳುತ್ತಾರೆ.ಮಹಾಲಕ್ಷ್ಮಿಯ ಉಪಾಸನೆಯನ್ನು ಮಾಡಿದ್ದರೂ ಕೂಡ ಅವಳಲ್ಲಿ ಲೌಕಿಕ ಸಂಪತ್ತನ್ನು ಬೇಡಿಲ್ಲ ಭಗವಂತನ ಪೂಜೆಯನ್ನು ಮಾಡುವ ಅನುಗ್ರಹವನ್ನು ಭಕ್ತಿಯನ್ನು ಬೇಡಿದ್ದಾರೆ… ಜ್ಞಾನ ಭಕ್ತಿ ವೈರಾಗ್ಯವನ್ನು ಬೇಡಿದ್ದಾರೆ. ನಮ್ಮಂತಹ ಭಕ್ತರು ಬೇಡಿ ಬಂದವರಿಗಗಾಗಿ ಮಹಾಲಕ್ಷ್ಮಿ ಕಟಾಕ್ಷ ಪಡೆದಿದ್ದಾರೆ. ಅವರು ಭಕ್ತರಿಗಾಗಿ ನಿಸ್ವಾರ್ಥದಿಂಧ ಕೇಳಿದ್ದಕ್ಕಾಗಿ ಅವರು ಪೂಜ್ಯರು. ಮಹಾಭಾರತ ಹೇಳುತ್ತದೆ. ತಪೋಧನರು ಯಾರು ನಿತ್ಯದಲ್ಲಿ ವೇದ ಅಧ್ಯಯನಗಳನ್ನು ಆಸಕ್ತಿಯಿಂದ ಮಾಡಿದವರು ವೈರಾಗ್ಯದಿಂದ ಇದ್ದವರು ಇವೆಲ್ಲವೂ ರಾಯರು ಇಂತಹ ತಫೋಧನರು. ತಪೋಧನ ಇದ್ದಕಾರಣ ಧನಿಕರು ಅವರು ನಿತ್ಯ ಪೂಜನೀಯರು. ವೇದದ ಅಧ್ಯಯನ ಮಾಡಿದ್ರು ತಿಳಿದ್ದಿರು. ಮಾತ್ರವಲ್ಲ, ಅವರು ಅದರ ಬಗೆಗೆ ಬರೆದಿದ್ದಾರೆ, ವೇದಗಳ ಸಾರ ಬರುವ ವೇದಾರ್ಥ ಮಂಜರಿಯನ್ನು ಬರದಿದ್ದಾರೆ. ತಾವು ವೇದಗಳ ಅನುಸಂಧಾನ ಮಾಡಿ ವೇದೋಕ್ತದಂತೆ ನಡೆದಿದ್ದಾರೆ. ವೇದದ ಜ್ಞಾನ ಇರಬೇಕು ಆಗ ಪೂಜ್ಯರು ಆಗುವ ಯೋಗ್ಯತೆ ಬರುತ್ತದೆ. ನಾವು ಮಾಡಿದ ಪುಣ್ಯ ಉಳಿಬೇಕು ಎನ್ನಲು ನಾವು ವೇದೋಕ್ತ ಕರ್ಮಗಳ ಅನುಷ್ಠಾನ ಮಾಡಬೇಕು ಎಂದು ಮಹಾಭಾರತ ಹೇಳುತ್ತದೆ ಅಂತಹ ಪೂಜ್ಯರಾದ ರಾಘವೇಂಧ್ರ ಸ್ವಾಮಿಗಳ ಅನುಗ್ರಹ ನಮ್ಮ ಮೇಲೆ ಅಗಲಿ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top