ಮಸ್ಕತ್‌ನಲ್ಲಿ ತೀರ್ಥ ಕಟೀಲ್ ಶಿಷ್ಯೆಯರ ರಂಗ ಪ್ರವೇಶ

Chandrashekhara Kualamarva
0


ಕಳೆದ 12 ವರ್ಷಗಳಿಂದ ಶ್ರೀ ಕ್ಷೇತ್ರ ಕಟೀಲನ್ನು ಕೇಂದ್ರವಾಗಿರಿಸಿಕೊಂಡು ನೃತ್ಯ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಪ್ರದರ್ಶನ ನೀಡುವಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿ, ರಾಜ್ಯ ಹಾಗೂ ಅಂತರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಸಂಸ್ಥೆ ಭ್ರಾಮರಿ ನೃತ್ಯ ಅಕಾಡೆಮಿ. ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದುಕೊಂಡಿರುವ ಶ್ರೀಮತಿ ತೀರ್ಥ ಕಟೀಲು ತನ್ನ ರಂಗಪ್ರವೇಶವನ್ನು ಗ್ರಾಮೀಣ ಪ್ರದೇಶವಾದ ಶ್ರೀ ಕ್ಷೇತ್ರ ಕಟೀಲಿನಲ್ಲಿ ನೆರವೇರಿಸಿಕೊಂಡರು.


ಶ್ರೀಮತಿ ತೀರ್ಥ ಕಟೀಲ್ ಇವರ ಗುರುದ್ವಯರು ಕರ್ನಾಟಕ "ಕಲಾಶ್ರೀ" ಪುರಸ್ಕೃತರಾದ ಶ್ರೀಮತಿ ಗೀತಾ ಸರಳಾಯ ಹಾಗೂ ಇವರ ಸುಪುತ್ರಿ "ನೃತ್ಯ ಮಯೂರಿ" ಪುರಸ್ಕೃತರಾದ ವಿದುಷಿ ರಶ್ಮಿ ಸರಳಾಯ. 


15 ವರ್ಷಗಳ ಸತತ ಅಭ್ಯಾಸದಿಂದ ಇದೀಗ ಮಸ್ಕತ್‌ನಲ್ಲಿ ನೆಲೆಸಿರುವ ತೀರ್ಥ ಕಟೀಲ್ ತನ್ನ 5 ಶಿಷ್ಯೆಯರ ರಂಗಪ್ರವೇಶವನ್ನು ಮೊದಲು ಬಾರಿಗೆ ಮಸ್ಕತ್‌ನಲ್ಲಿ ಆಯೋಜಿಸಿದ್ದಾರೆ. ಇವರಿಗೆ ಬೆನ್ನೆಲುಬಾಗಿ ಪತಿ ಕಾರ್ತಿಕ್ ಕುಂದರ್ ಹಾಗೂ ತೀರ್ಥಳ ಗುರುಗಳು ಸಹಕಾರ ನೀಡುತ್ತಿದ್ದಾರೆ. 


ಆ.23ರಂದು ಶುಕ್ರವಾರ ಸಂಜೆ 5 ಗಂಟೆಗೆ ಸರಿಯಾಗಿ ಕಾಲೇಜ್ ಆಫ್ ಬ್ಯಾಂಕಿoಗ್ ಆ್ಯಂಡ್ ಫೈನಾನ್ಶಿಯಲ್ ಸರ್ವಿಸಸ್ ಹಾಲ್ (CBFS) ಬೌಶರ್, ಮಸ್ಕತ್ ಇಲ್ಲಿ ನೆರವೇರಲಿದೆ. 


ಈ ದಿನ ವಿಶೇಷವಾಗಿ ಮೂರು ಕಲಾವಿದರು ವೇದಿಕೆಯನ್ನು ಸಮೂಹವಾಗಿ ಹಂಚಿಕೊಳ್ಳಲಿದ್ದಾರೆ.


1) ಕು. ಅಪೂರ್ವ ನಾಗರಾಜು, ಡಾ. ನಾಗರಾಜು ಜಿ.ಬಿ. ಮತ್ತು ರಮ್ಯ ಬಿ. ಇವರ ಸುಪುತ್ರಿ, 10ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಇಂಡಿಯನ್ ಸ್ಕೂಲ್ ಆಲ್ ವಾಡಿ ಆಲ್ ಕಬೀರ್ ಮಸ್ಕತ್ ಇಲ್ಲಿಯ ವಿದ್ಯಾರ್ಥಿನಿ.


2) ಕು. ಪ್ರೇರಣ ದಿವಾಕರ್ ಶೆಟ್ಟಿ, ಶ್ರೀಯುತ ದಿವಾಕರ್ ಶೆಟ್ಟಿ ಹಾಗೂ ವಿಜಯ ದಿವಾಕರ್ ಶೆಟ್ಟಿ ಇವರ ಸುಪುತ್ರಿ, ಗ್ರೇಡ್ IIರಲ್ಲಿ ಕಲಿಯುತ್ತಿರುವ ಈಕೆ ಇಂಡಿಯನ್ ಸ್ಕೂಲ್ ಬೌಷರ್ ಇಲ್ಲಿಯ ವಿದ್ಯಾರ್ಥಿನಿ.


3) ಕು. ಪಾರ್ಣಿಕ ಪ್ರದೀಪ್ ಶೆಟ್ಟಿ, ಶ್ರೀಯುತ ಪ್ರದೀಪ್ ಶೆಟ್ಟಿ ಹಾಗೂ ಅಮಿತಾ ಪ್ರದೀಪ್ ಶೆಟ್ಟಿ ಇವರ ಸುಪುತ್ರಿ. ಈಕೆಯೂ ಕೂಡಾ ಮಸ್ಕತ್‌ನ ಇಂಡಿಯನ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿನಿ.


ಇದೀಗ ಶ್ರೀಮತಿ ತೀರ್ಥ ಕಟೀಲು ಇವರ ಶಿಷ್ಯೆಯರು ತಮ್ಮ ಚೊಚ್ಚಲ ರಂಗಪ್ರವೇಶದ ಸಂಭ್ರಮದಲ್ಲಿದ್ದು, ಭಾರತೀಯ ಸಂಸ್ಕೃತಿಯನ್ನು ಮಸ್ಕತ್‌ನಲ್ಲಿ ಬಿಂಬಿಸುವುದರ ಮೂಲಕ ಸಜ್ಜಾಗಿದ್ದಾರೆ.


Post a Comment

0 Comments
Post a Comment (0)
To Top