ರಾಜ್ಯ ಮಟ್ಟದ ಕೆ.ಸಿ.ಇ.ಟಿ. ಪ್ರವೇಶ ಪರೀಕ್ಷೆಯಲ್ಲಿ ನಿಟ್ಟೆ ಕಾಲೇಜು ಸಾಧನೆ

Upayuktha
0


ನಿಟ್ಟೆ: ಇಂಜಿನಿಯರಿಂಗ್‌ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಕೆ.ಸಿ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಡಾ|ಎನ್‌.ಎಸ್‌.ಎ.ಎಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.


ವಿದ್ಯಾರ್ಥಿ ನಮನ್‌ ವಿ.ಶೆಟ್ಟಿ ಇಂಜಿನಿಯರಿಂಗ್‌ ವಿಭಾಗದಲ್ಲಿ 95ನೇ ರ‍್ಯಾಂಕ್‌ ಹಾಗೂ ಬಿ.ಫಾರ್ಮಾದಲ್ಲಿ 330ನೇ ರ‍್ಯಾಂಕ್‌ ಪಡೆದಿದ್ದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.


ಇಂಜಿನಿಯರಿಂಗ್‌ ವಿಭಾಗದಲ್ಲಿ ವಿದ್ಯಾರ್ಥಿಗಳಾದ ನಿಖಿಲ್‌ ನಾಯಕ್‌ 1119 ನೇ ರ‍್ಯಾಂಕ್‌, ಶರನ್‌ ನೊರನ್ಹ 2169 ನೇ ರ‍್ಯಾಂಕ್‌, ಆಕಾಂಕ್ಷಾ ಕೆ ಪೂಜಾರಿ 2395 ನೇ ರ‍್ಯಾಂಕ್‌ ಹಾಗೂ ನಿಶ್ಮಿತ್‌ 3260ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಅಲ್ಲದೆ  ವಿದ್ಯಾರ್ಥಿನಿ ಜೋಯ್ಸಿ ವಿಲಿಟಾ ಮಾರ್ಟೀಸ್‌ ಬಿ.ಎಸ್ಸಿ ಕೃಷಿ ವಿಭಾಗದಲ್ಲಿ 3020 ನೇ ರ‍್ಯಾಂಕ್‌ ಪಡೆದಿದ್ದಾರೆ.


ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿರುವ ಈ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಉಪನ್ಯಾಸಕರು ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top