|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀರಾಮ ಕಥಾ ಲೇಖನ ಅಭಿಯಾನ- 124: ಆನಂದ ರಾಮಾಯಣ

ಶ್ರೀರಾಮ ಕಥಾ ಲೇಖನ ಅಭಿಯಾನ- 124: ಆನಂದ ರಾಮಾಯಣ



-ಶ್ರೀರಂಗ ಪುರಾಣಿಕ, ವಿಜಯಪುರ 


ವೇದಗಳು, ಉಪನಿಷತ್ ಗಳು ಹಾಗೂ ಭಗವದ್ಗೀತೆ ಜೊತೆಗೆ ಹಿಂದುಗಳ ಮತ್ತೆರಡು ಪ್ರಮುಖ ಧಾರ್ಮಿಕ ಗ್ರಂಥಗಳು ರಾಮಾಯಣ ಮತ್ತು ಮಹಾಭಾರತ. ಇವು ಕೇವಲ ಧಾರ್ಮಿಕ ಗ್ರಂಥಗಳು ಮಾತ್ರವಲ್ಲ ಭಾರತದ ಜೀವನಾಡಿ, ಭಾರತವನ್ನು ಏಕತೆಯ ಮಾಡಿರುವ ರಾಷ್ಟ್ರೀಯ ಗ್ರಂಥಗಳು ಆಗಿವೆ. ಭಾರತದ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ರಾಮಾಯಣ ಮಹಾಭಾರತದ ಪೌರಾಣಿಕ ಕಥೆಗಳು, ಅದಕ್ಕೆ ಸಂಬAಧಿಸಿದ ಮಂದಿರಗಳು, ಹೆಸರುಗಳ ಉಲ್ಲೇಕ ಕಾಣಬಹುದು. ರಾಮಾಯಣ ಮಹಾಭಾರತಕ್ಕಿಂತಲೂ ಅತ್ಯಂತ ಹಳೆಯ ಗ್ರಂಥವಾಗಿದೆ. ರಾಮ ವಿಷ್ಣವಿನ ಏಳನೇ ಅವತಾರವಾದರೆ, ಕೃಷ್ಣಾವತಾರ ಎಂಟನೆಯದು. ರಾಜ್ಯಶಾಸ್ತ್ರ ದೃಷ್ಠಿಯಿಂದ ನೋಡಿದಾಗ ಒಬ್ಬ ಅರಸ ಅಥವಾ ಆಡಳಿತಗಾರ ಯಾವರೀತಿಯಾಗಿ ಇರಬೇಕು ಎನ್ನುವುದು ರಾಮಾವತಾರದಲ್ಲಿ ತೋರುತ್ತದೆ.


ಹೆಸರು ಹೇಳುವಂತೆ ರಾಮಾಯಣ ಅಯೋಧ್ಯೆಯ ರಾಜ ಪ್ರಭು ಶ್ರೀರಾಮನ ಕಥಾಸಾರ. ಮಹರ್ಷಿ ವಾಲ್ಮೀಕಿಗಳು  ಈ ರಾಮನ ಕಥಾಯಾನವನ್ನು ಬರೆದವರು. ದಂತ ಕಥೆ ಪ್ರಕಾರ ಆಂಜನೇಯ ಸ್ವಾಮಿಯು ರಾಮಾಯಣವನ್ನು ಬರೆದಿದ್ದಾಗಿ; ವಾಲ್ಮೀಕಿ ಮಹರ್ಷಿಗಳು ತಾವು ಬರೆದ  ರಾಮಾಯಣವನ್ನು ಆಂಜನೇಯ ಸ್ವಾಮಿ ತೋರಿಸಲು, ಆಂಜನೇಯ ಸ್ವಾಮಿ  ತಾನು ಬರೆದ ರಾಮಾಯಣವನ್ನು ಸಮುದ್ರಕ್ಕೆ ಹಾಕಿದರೆಂದು ಹೇಳಲಾಗುತ್ತದೆ. ಮಹರ್ಷಿ ವಾಲ್ಮೀಕಿಗಳು ರಾಮಾಯಣ ಬರೆದು ಹೆಸರು ಏನಿಡಲು ಚಿಂತಿಸಿ ಕಡೆಗೆ ಸೀತಾಯಣವೆಂದು ಹೆಸರಿಟ್ಟರಂತೆ. ತಮ್ಮ ಆಶ್ರಮದಲ್ಲಿದ್ದ ಸೀತೆ ಹೇಳಲಾಗಿ ಸೀತೆಯು ರಾಮನ ಹೆಸರಿಡಲು ಸೂಚಿಸಿದಾಗ ಮಹರ್ಷಿಗಳು ರಾಮಾಯಣ ಎಂದು ಹೆಸರಿಸಿಸುತ್ತಾರೆ. 


ವಾಲ್ಮೀಕಿ  ಮಹರ್ಷಿಗಳ ಮೂಲ ಸಂಸ್ಕೃತ ರಾಮಾಯಣ ೨೪೦೦೦ ಶ್ಲೋಕಗಳನ್ನು ೭ ಕಾಂಡಗಳನ್ನು ಒಳಗೊಂಡಿದೆ. ಕಡೆಯ ಉತ್ತರಕಾಂಡವನ್ನು ವಾಲ್ಮೀಕಿ ಮಹರ್ಷಿಗಳ ರಚನೆಯಲ್ಲ ತದನಂತರ ಅದನ್ನು ಸೇರಿಸಲಾಗಿದೆ ಎಂಬ ವಾದವೂ ಇದೆ. ಭಾರತದಲ್ಲಿ ಅಸಂಖ್ಯಾತ ರಾಮಾಯಣಗಳು ಪ್ರಚಲಿತದಲ್ಲಿವೆ. ಕವಿ ಕುಮಾರವ್ಯಾಸ ಗದುಗಿನ ಭಾರತದಲ್ಲಿ ರಾಮಾಯಣ ಬಹಳಷ್ಟು ಜನರು ಬರೆದಿದ್ದಾರೆ ಕೃಷ್ಣ ಕಥೆ ಬರೆಯುವುದಾಗಿ ಹೇಳಿದ್ದಾನೆ. ಅಂದರೆ ಪ್ರಾಚೀನ ಕಾಲದಿಂದಲು ಬಹಳಷ್ಟು ಕವಿಗಳು ರಾಮಾಯಣವನ್ನು ಬರೆದಿರುವುದು ನಮಗೆ ತೋರುತ್ತದೆ.


ಕನ್ನಡದಲ್ಲಿ ನಾಗಚಂದ್ರ ಪಂಪರಾಮಾಯಣ (ಜೈನ ರಾಮಾಯಣ) ಕುಮರಾ ವಾಲ್ಮೀಕಿ (ನರಹರಿಯ) ತೊರವೆ ರಾಮಾಯಣ, ಚಂಪೂ ರಾಮಾಯಣ, ಕುಮದೆಂದು ರಾಮಾಯಣ,  ಕುವೆಂಪು ಅವರ ಶ್ರೀರಾಮಾಯಣ ದರ್ಶನಂ, ಎಸ್ ಎಲ್ ಭೈರಪ್ಪನವರ ಉತ್ತರ ಕಾಂಡ ಎಲ್ಲವೂ ರಾಮಾಯಣದ ಕಥಾವಸ್ತವಿಟ್ಟುಕೊಂಡು ಬಂದAತಹ ಕನ್ನಡ ಕೃತಿಗಳು. 


ಮೊದಲಿಗೆ ಕನ್ನಡ ರಾಮಾಯಣಗಳ ಪರಿಚಯಮಾಡಿಕೊಂಡು ನಂತರ ಆನಂದ ರಾಮಾಯಣದತ್ತ ಹೋಗೋಣ.


ಕನ್ನಡದ  ಮೊದಲ ರಾಮಾಯಣ ಜೈನ ಕವಿ ನಾಗಚಂದ್ರ ಹನ್ನೊಂದನೆಯ ಶತಮಾನದಲ್ಲಿ ರಚನೆ ಮಾಡಿದರೆ, ಇದಾದ ಐನೂರು ವರ್ಷಗಳ ನಂತರ  ಹದಿನೇಳನೆಯ ಶತಮಾನದಲ್ಲಿ ಕುಮಾರವಾಲ್ಮೀಕಿಯು 'ತೊರವೆ ರಾಮಾಯಣ' ರಚನೆ ಮಾಡುತ್ತಾನೆ. ಇದು ಕನ್ನಡ ಎರಡನೇ ರಾಮಾಯಣ ಅಥವಾ ಇದನ್ನು ವೈದಿಕ ರಾಮಾಯಣ ಎಂತಲೂ ಕರೆಯುತ್ತಾರೆ. 


ಕವಿ ನಾಗಚಂದ್ರ -ಹನ್ನೊಂದನೇ ಶತಮಾನದ ಹಳೆಗನ್ನಡ ಕವಿ ನಾಗಚಂದ್ರನು ಕಲ್ಯಾಣ ಚಾಳುಕ್ಯ ಅರಸನಾದ ಆರನೆಯ ವಿಕ್ರಮಾದಿತ್ಯನ ಮಗನಾದ ಮಲ್ಲಿಕಾರ್ಜುನನ ಆಸ್ಥಾನ ಕವಿಯಾಗಿದ್ದನೆಂದು ಖ್ಯಾತ ಇತಿಹಾಸಕಾರರು ಮತ್ತು ಶಾಸನ ತಜ್ಞರಾದ ಸೀತಾರಾಮ ಜಹಗೀರದಾರ  ಹೇಳುತ್ತಾರೆ. ಯುವರಾಜ ಮಲ್ಲಿಕಾರ್ಜುನನು ತರ್ದವಾಡಿ ನಾಡು ಆಡಳಿತ ನೋಡಿಕೊಳ್ಳುತ್ತಿದ್ದು ವಿಜಯಪುರ ಆತನ ರಾಜಧಾನಿಯಾಗಿತ್ತೆಂದು, ವಿಜಯಪುರ ನಲ್ಲಿ ತನ್ನ ದಂಡನಾಯಕ ದೇವರ ನ್ಯಾಕಿಮಯ್ಯನಿಂದ ಯುವರಾಜ  ಮಲ್ಲಿಕಾರ್ಜುನನು  ಸ್ವಯಂ ಭೂ ಸಿದ್ದೇಶ್ವರ ದೇವಸ್ಥಾನ ನಿರ್ಮಿಸಿಸಿದನೆಂದು  ಶಾಸನಗಳಿಂದ  ತಿಳಿದುಬರುತ್ತದೆ. ನಾಗಚಂದ್ರ ತನ್ನ ಕಾವ್ಯದಲ್ಲಿ ಹೇಳಿರುವಂತೆ ವಿಜಯಪುರಕ್ಕೆ ಮೆರುಗು ನೀಡುವಂತಹ ಮಲ್ಲಿನಾಥ ಬಸದಿ ನಿರ್ಮಿಸಿದನೆಂದು ಹಲವು ಇತಿಹಾಸಕಾರರು ಹೇಳುತ್ತಾರೆ.


ಕವಿ ನಾಗಚಂದ್ರನು  ಚಂಪೂಕಾವ್ಯದಲ್ಲಿ ರಚಿಸಿದ 'ರಾಮಚಂದ್ರ ಚರಿತ ಪುರಾಣ' ಅಥವಾ 'ಪಂಪರಾಮಾಯಣ' ಕೃತಿ ಕನ್ನಡ ಮೊದಲ ರಾಮಾಯಣಗಿದೆ. ಕವಿ ನಾಗಚಂದ್ರ ಜೈನ ಧರ್ಮದ ಕಟ್ಟಾ ಅನುಯಾಯಿ ಆಗಿದ್ದನು. 'ಭಾರತೀಕರ್ಣಪೂರ', 'ಕವಿತಾ ಮನೋಹರ' , 'ಸಾಹಿತ್ಯ ವಿದ್ಯಾಧರ', 'ಜನಸ್ಥಾನ ರತ್ನಪ್ರದೀಪ' ಮೊದಲಾದ ಬಿರುದುಗಳು ಈತನಿಗಿದ್ದವು. ಒಂಬತ್ತು ಹತ್ತನೇ ಶತಮಾನದಲ್ಲಿ ಆಗಿಹೋದ ಆದಿಕವಿ ಪಂಪನ ಆರಾಧಕನಾಗಿದ್ದ ನಾಗಚಂದ್ರ ತನ್ನನ್ನು 'ಅಭಿನವಪಂಪನೆAದು' ಕರೆದುಕೊಂಡಿದ್ದಾನೆ. ಇತನ ಕೃತಿಗಳು ಎರಡು- 'ರಾಮಚಂದ್ರ ಚರಿತ್ರ ಪುರಾಣ' ಮತ್ತು ಜೈನ ಧರ್ಮದ ಹತ್ತೊಂಬತ್ತನೆಯ ತೀರ್ಥಂಕರರಾದ ಮಲ್ಲಿನಾಥರ ಕುರಿತು ಬರೆದ 'ಮಲ್ಲಿನಾಥ ಪುರಾಣ'.


“ರಾಮಚಂದ್ರ ಚರಿತ ಪುರಾಣ'- ಹಳೆಗನ್ನಡ ಕವಿ ನಾಗಚಂದ್ರನ 'ರಾಮಚಂದ್ರನ ಚರಿತ ಪುರಾಣ' ವಾಲ್ಮೀಕಿ ಮೂಲ ರಾಮಾಯಣಯಕ್ಕ ಬಹಳವೇ ವ್ಯತ್ಯಾಸವಿದೆ. ಇಲ್ಲಿ ಬರುವ ಪಾತ್ರಗಳೆಲ್ಲ ಜೈನರಾಗಿ ನಾಗಚಂದ್ರನು ಚಿತ್ರಿಸಿದ್ದಾನೆ. ಆದ್ದರಿಂದ ಇದನ್ನು ಜೈನ ರಾಮಾಯಣ ಎಂದೂ ಕರೆಯಲಾಗುತ್ತದೆ. ಹದಿನಾರು ಆಶ್ವಾಗಳು ಇವೆ.


ರಾವಣ ಸದ್ಗುಣ ಸಂಪನ್ನನಾದರೂ ವಿಧಿಯ ಕೈವಾಡದಿಂದ ಅಲ್ಪದೌರ್ಬಲ್ಯ ವಶವಾಗಿ ಪತನ ಹೊಂದುತ್ತಾನೆ. ಸೀತೆಯನ್ನು ಅಪಹರಣ ಮಾಡಿದರೂ ಕೊನೆಗೆ ಪಶ್ಚಾತ್ತಾಪ ಪಡುತ್ತಾನೆ. ಹಾಗೆ ರಾಮಲಕ್ಷ್ಮಣರಿಗೆ ಸೀತೆಯನ್ನು ಒಪ್ಪಿಸಲು ರಾವಣ ಯದ್ಧದಲ್ಲಿ ಅವರನ್ನು ಸೆರೆಹಿಡಿಯಲು ಹೋದಾಗ ಲಕ್ಷ್ಮಣನಿಂದ ಹತನಾಗುತ್ತಾನೆ. ಇದನ್ನು ಕವಿ ರಾವಣನ ಮೇಲೆ ಅನುಕಂಪ ಹುಟ್ಟಿಸುವಂತೆ ಚಿತ್ರಿಸಿದ್ದಾನೆ. ವಾಲ್ಮೀಕಿ ರಾಮಾಯಣದಲ್ಲಿ ರಾವಣ ರಾಮನಿಂದ ಹತನಾದರೆ ನಾಗಚಂದ್ರನ ರಾಮಚರಿತ ಪುರಾಣದಲ್ಲಿ ಲಕ್ಷ್ಮಣನಿಂದ ಹತನಾಗುತ್ತಾನೆ. ದಶರಥನಿಗೆ ನಾಲ್ಕು ರಾಣಿಯರು, ರಾಮಲಕ್ಷ್ಮಣರು ಏಕಪತ್ನೀವ್ರತಸ್ಥರಲ್ಲ, ಹನುಮಂತನು ಇಲ್ಲಿ ವಿವಾಹಿತ. ವಾಲ್ಮೀಕಿ ರಾಮಾಯಣ ಬರುವ ಮಾರೀಶ, ಮಂಥರೆ ಸೇತುಬಂಧದ ಪ್ರಸಂಗಗಳು, ನಾಗಚಂದ್ರ ರಾಮಚಂದ್ರ ಚರಿತ ಪುರಾಣದಲ್ಲಿ ಇರುವುದಿಲ್ಲ.



ನರಹರಿ ಅರ್ಥಾತ್ ಕುಮಾರ ವಾಲ್ಮೀಕಿ -ಸರಿಸುಮಾರು 1920 ರಲ್ಲಿ ಮೈಸೂರು ಭಾಗದಲ್ಲಿ ರಾಮಾಯಣದವೊಂದು ಹಸ್ತಪ್ರತಿ ಸಿಗುತ್ತದೆ. ಅದರಲ್ಲಿ ತೊರವೆ ಹೆಸರು, ತೊರವೆ ನರಸಿಂಹ ದೇವರ ಹೆಸರು, ನರಿಹರಿ ಮತ್ತು ತನ್ನನ್ನು ಕುಮಾರವಾಲ್ಮೀಕಿ  ಎಂದು ಕವಿ ಕರೆದುಕೊಂಡಿದ್ದು ಗಮನಿಸಿ, ಈ ರಾಮಾಯಣವನ್ನು ಬರೆದ ಕವಿ ವಿಜಯಪುರದ ತೊರವೆಯ ಕವಿ ನರಹರಿ ಎಂದು ಗುರುತಿಸಿ ಇದಕ್ಕೆ ತೊರವೆ ರಾಮಾಯಣವೆಂದು ಹೆಸರಿಸಲಾಯಿತು.  


ಕುಮಾರ ವಾಲ್ಮೀಕಿ ಹಳೆಗನ್ನಡ ಕವಿ. ನಿಖರವಾಗಿ ಕವಿ ನರಹರಿಯ ಕಾಲಮಾನ ಸ್ಪಷ್ಟವಿಲ್ಲ. ನರಹರಿಯು ಕುಮಾರವ್ಯಾಸನ ಸ್ಮರಿಸುವುದರಿಂದ ಹಾಗೂ ಕನಕದಾಸರು ನರಹರಿಯನ್ನು ಉಲ್ಲೇಖಿಸುವುದರಿಂದ ಕುಮಾರವ್ಯಾಸ ಹಾಗೂ ಕನಕದಾಸರ ಮಧ್ಯದ ಕಾಲಮಾನದವನು ಎಂದು ಸ್ಪಷ್ಟವಾಗುತ್ತದೆ. ನರಹರಿ ಕುಮಾರವ್ಯಾಸನಂತೆ ತನ್ನನ್ನು ಕುಮಾರ ವಾಲ್ಮೀಕಿ ಎಂದು ಕರೆದುಕೊಂಡಿದ್ದಾನೆ. ಇತನ ಕೃತಿಯ ಹೆಸರು "ತೊರವೆ ರಾಮಾಯಣ". ಇದು ಕನ್ನಡ ಮೊದಲ ವೈದಿಕ ರಾಮಾಯಣವೆಂದೇ ಪ್ರಖ್ಯಾತವಾಗಿದೆ. ಇತನ ಇನ್ನೊಂದು ಕೃತಿ 'ಐರಾವಣ ಕಾಳಗ'.


ಕವಿ ನರಹರಿಯ ಬಗ್ಗೆ ಮತ್ತೊಂದು ಐತಿಹ್ಯ ಎಂದರೆ ಪುರಂದರದಾಸರ ಮಗಳ ಗಂಡ ಅರ್ಥಾತ್ ಅಳಿನೆಂದು ಹೇಳಲಾಗುತ್ತದೆ. ಮತ್ತು ತೊರವೆ ಗ್ರಾಮದ ಕುಲಕರ್ಣಿ ಮನೆತನದವನೆಂದು ಹೇಳಲಾಗುತ್ತದೆ. ಇಂದಿಗೂ  ನರಹರಿ ಯಾರೆಂದು ನಿಖರವಾಗಿ ತಿಳಿದಿಲ್ಲ. ಕೃತಿಯಲ್ಲಿಯೂ ಕವಿ ತನ್ನ ಬಗ್ಗೆ ಏನನ್ನೂ ಹೇಳಿಕೊಂಡಿಲ್ಲ. ತನ್ನ ಕೃತಿಗೂ ನಾಮಕರಣ ಮಾಡಿಲ್ಲ, ಆದರೆ ತೊರಯ ಹೆಸರು, ತೊರವೆಯ ನರಸಿಂಹ ದೇವರ ಹೆಸರು ಇರುವುದರಿಂದ ಇದು ರಾಮಾಯಣದ ಕಥಾವಸ್ತು ಇರುವದರಿಂದ ಇದನ್ನು 'ತೊರವೆ ರಾಮಾಯಣ' ಎಂದು ಕರೆಯಲಾಯಿತು.



ತೊರವೆ ವಿಜಯಪುರ ನಗರ ಹೊರವಲಯದ ಹಳ್ಳಿಯಾಗಿತ್ತು ಈಗ ವಿಜಯಪುರದ ಅವಿಭಾಜ್ಯ ಭಾಗವೇ ಆಗಿಹೋಗಿದೆ. ಇಲ್ಲಿಯ ಐತಿಹಾಸಿಕ ದೇವಾಲಯವಾದ ತೊರವೆ ನರಸಿಂಹ ದೇವರ ಸನ್ನಿಧಿಯಲ್ಲಿ ನರಹರಿ ಅರ್ಥಾತ್ ಕುಮಾರ ವಾಲ್ಮೀಕಿ ತೊರವೆ ರಾಮಾಯಣ ಬರೆದನೆಂಬುವುದು ಪ್ರತೀತಿ. ತೊರವೆ ರಾಮಾಯಣ ಗ್ರಂಥದಲ್ಲಿ ನರಹರಿಯು ತೊರವೆ ನರಸಿಂಹ ದೇವರನ್ನು, ಶ್ರೀಮಧ್ವಾಚಾರ್ಯರನ್ನು  ಸ್ಮರಿಸಿದ್ದನ್ನು ಕಾಣಬಹುದಾಗಿದೆ.


ತೊರವೆ ರಾಮಾಯಣ- ಕುಮಾರವ್ಯಾಸನಂತೆ ಕುಮಾರವಾಲ್ಮೀಕಿಯು ಭಾವಿನಿ ಷಟ್ಪದಿಯಲ್ಲಿ ತೊರವೆ ರಾಮಾಯಣವನ್ನು ರಚನೆ ಮಾಡಿದ್ದಾನೆ. ಸಂಸ್ಕೃತ ಲಿಪಿ, ಹಳೆಗನ್ನಡ ಭಾಷೆಯಲ್ಲಿ ತಾಳೆಗರಿಯ ಮೇಲೆ 'ತೊರವೆ ರಾಮಾಯಣ' ರಚನೆಯಾಗಿದೆ. ಈ ಕೃತಿಗೆ ನಿರ್ಧಿಷ್ಟ ಹೆಸರನ್ನು ಕವಿ ಸೂಚಿಸಿಲ್ಲ ಇದು ತೊರವೆ ಗ್ರಾಮದಲ್ಲಿ ರಚನೆಯಾಗಿದ್ದರಿಂದ ಇದನ್ನು ತೊರವೆ ರಾಮಾಯಣ ಎಂದು ಕರೆಯಲಾಗಿತು. 


ಈ ಕೃತಿಯಲ್ಲಿ ರಾಮನೇ ಮುಖ್ಯ ಕಥಾ ವಸ್ತು. ಆರು  ಕಾಂಡಗಳು ಉಳ್ಳ ಈ ಪುಸ್ತಕ  ಐದು ಕಾಂಡಗಳ ಒಂದು ತೂಕವಾದರೇ ಯುದ್ದಕಾಂಡವೇ ಮತ್ತೊಂದು ತೂಕ. ನರಹರಿಯ ಕಾವ್ಯಶಕ್ತಿಯು 'ಯುದ್ಧ ಕಾಂಡದಲ್ಲಿ' ಅಡಕವಾಗಿದೆ ಎಂದು ಅನೇಕರು ಹೇಳುತ್ತಾರೆ.  ಈ ತೊರವೆ ರಾಮಾಯಣ ಗಮಕ ಕಲೆಗೆ ಹೇಳಿಮಾಡಿದ ಕೃತಿ ಎಂದು ಅನೇಕರ ಅಂಬೋಣ. ರಾಷ್ಟ್ರಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಲಕ್ಷ್ಮಣನ ಹೆಂಡತಿ ಊರ್ಮಿಳೆ ದೃಷ್ಟಿಯಿಂದ ರಾಮಾಯಣ ಕಥೆ ಹೇಳಲಾದರೆ, ಎಸ್.ಎಲ್ ಭೈರಪ್ಪನವರ “ಉತ್ತರಕಾಂಡ” ಸೀತೆಯ ದೃಷ್ಟಿಯಿಂದ ಹೇಳಲಾದ  ರಾಮಾಯಣದ ಕಥೆಯಾಗಿದೆ.


ರಾಮಾಯಣದ ಶಕ್ತಿ ಎಂತಹದ್ದು ಎಂದು ತಿಳಿಯಬೇಕಾದರೆ ತುಳಸಿದಾಸರ ರಾಮಚರಿತ ಮಾಸದ ಕುರಿತು ಒಂದೆರಡು ಮಾತು ಹೇಳಬೇಕು. ತುಳಿಸೀದಾಸರ ಕಾಲಮಾನ ಹೈದಿನೈದು ಅಥವಾ ಹದಿನಾರನೇ ಶತಮಾನ. ಈ ಕಾಲಘಟ್ಟದಲ್ಲಿ ಮುಸಲ್ಮಾನ ಮತಾಂಧ ಸುಲ್ತಾನರ ಉಪಟಳ ಹೆಚ್ಚಾಗಿತ್ತು. ಬಲವಂತದ ಮತಾಂತರವೂ ಅವ್ಯಹತವಾಗಿತ್ತು. ಈ ಸಮಯದಲ್ಲಿ ತುಳಸೀದಾಸರು ರಾಮಚರಿತ ಮಾಸವನ್ನು ಹಿಂದಿಯಲ್ಲಿ ಸಾಮಾನ್ಯ ಹಿಂದುವಿಗೂ ಹಾಡಲು ಬರುವಂತೆ ಕಾವ್ಯರಚನೆಮಾಡಿ ಪ್ರತಿಯೊಬ್ಬರು ರಾಮಚರಿತಮಾಸವನ್ನು ಕಂಠಪಾಠವಾಗುAತೆ ಮಾಡಿ ರಾಮ ಭಕ್ತಿಯನ್ನು ಮತ್ತಷ್ಟು ಪ್ರಚುರ ಗೊಳಿಸಿದೆರು. ಇದರಿಂದ ಉತ್ತರ ಭಾತರದಲ್ಲಿ ಧಾರ್ಮಿಕ ಕ್ರಾಂತಿಯೇ ನಡೆಯಿತು. ಅದೇ ಕಾಲದಲ್ಲಿ ಬಂದಂತಹ ಮತ್ತೊಂದ ರಾಮನ ಕಥಾಹಂದರವೇ ಆನಂದ ರಾಮಾಯಣ..!


ಸಂಸ್ಕೃತ ಭಾಷೆಯ ಆನಂದ ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳು ಬರದರೆಂಬ ಪ್ರತೀತಿ. ಇದಕ್ಕೆ ಮನೋಹರ ರಾಮಾಯಣ ಅಂತಲೂ ಕರಯಲಾಗುತ್ತದೆ. ಈ ಆನಂದ ರಾಮಾಯಣ ಕೃತಿಯಲ್ಲಿ 109 ಸರ್ಗಗಳು ಒಂಬತ್ತು ಕಾಂಡಗಳು, ಅವುಗಳೆಂದರೆ- ಸಾರಕಾಂಡ, ಯಾತ್ರಾಕಾಂಡ, ಯಾಗಕಾಂಡ, ವಿಲಾಸಕಾಂಡ, ಉಪಜನ್ಮಕಾಂಡ ಅಥವಾ ಜನ್ಮಕಾಂಡ, ವಿವಾಹಕಾಂಡ, ರಾಜ್ಯಕಾಂಡ,  ಮನೋಹರಕಾಂಡ, ಪೂರ್ಣಕಾಂಡ ಮತ್ತು 12,323 ಪದ್ಯಗಳನ್ನು ಒಳಗೊಂಡಿದೆ. ರಾವಣನು ಕೈಲಾಸ ಶಿವನನಿಂದ ಆತ್ಮಲಿಂಗ ಪಡೆದ ಮತ್ತು ವಿಷ್ಣುವಿನ ಕುತಂತ್ರದಿಂದ ಗೋಕರ್ಣದಲ್ಲಿ ಲಿಂಗವನ್ನು ನೆಲಕ್ಕೆ ಇಳಿಸಿದ ಕಥೆ ಸಾದರಕಾಂದ  9ನೇ ಸರ್ಗದಲ್ಲಿ ಕಂಡುಬರುತ್ತದೆ. ರಾಮೇಶ್ವರದಲ್ಲಿ ಲಿಂಗದ ಸ್ಥಾಪನೆಯ ಕಥೆಯನ್ನು  ವಿವರಿಸಲಾಗಿದೆ. ಐರಾವಣ -ಮೈರಾವಣರ  ಕಥೆ, ಕನ್ಯಾಕುಮಾರಿಯ ಕಥೆ ಇನ್ನು ಅನೇಕ ಕಥೆಗಳು ಆನಂದ ರಾಮಾಯಣಲಲ್ಲಿ ಕಾಣಬಹುದು. ವಿದ್ವಾನ್ ಬೇಲದ ಕೆರೆ ಸೂರ್ಯನಾರಾಯಣ ಶಾಸ್ತ್ರಿಗಳು ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಇಚ್ಛೆಯಂತೆ ಸಂಸ್ಕೃತದ ಈ ಮಹಾಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.




-ಶ್ರೀರಂಗ ಪುರಾಣಿಕ, ವಿಜಯಪುರ

ಹವ್ಯಾಸಿ ಲೇಖಕ, ಇತಿಹಾಸ ಸಂಶೋಧಕ 

80732 42153


========

ಲೇಖಕರ ಸಂಕ್ಷಿಪ್ತ ಪರಿಚಯ:

ಈವರೆಗೂ 14 ಪ್ರಕಟಿತ ಪುಸ್ತಕಗಳು ಕಥೆ, ಕವನ, ಹನಿಗವನ, ಹನಿಗಥೆ, ಮಕ್ಕಳ ಕಥೆ, ಕವನ, ನಾಟಕ ಸೇರಿದಂತೆ ಹನ್ನೆರಡು ಪುಸ್ತಕ ಎರಡು ಇತಿಹಾಸ ಸಂಬಂಧಿಸಿದ ಪುಸ್ತಕಗಳು. ವೃತ್ತಿ- ಒಂದು ವರ್ಷ ವಿಜಯಪುರ ಜಿಲ್ಲಾ ವರದಿಗಾರನಾಗಿ ಕರುನಾಡ ಕಂದ ಹಾಗೂ ಯಾದಗಿರಿ ಎಕ್ಸ್ಪ್ರೆಸ್ ನಲ್ಲಿ ಕಾರ್ಯನಿರ್ವಹಣೆ. ಅಖಿಲ ಭಾರತೀಯ ಸಾಹಿತ್ಯ ಪರಿಷತದ್ ನ  ವಿಜಯಪುರನ ನಗರ ಘಟಕದ ಸಂಚಾಲಕನಾಗಿ, ಕಾರ್ಯದರ್ಶಿಯಾಗಿ, ಎರಡು ವರ್ಷಗಳಿಂದ ಜಿಲ್ಲಾ ಸಂಯೋಜಕನಾಗಿ ಸಾಹಿತ್ಯ ಸಂಘಟನೆ ಮಾಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post