|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಮಾಯಣ ಹಕ್ಕಿನೋಟ ಕೃತಿ ಏ.18ರಂದು ಬಿಡುಗಡೆ

ರಾಮಾಯಣ ಹಕ್ಕಿನೋಟ ಕೃತಿ ಏ.18ರಂದು ಬಿಡುಗಡೆ



ಮಂಗಳೂರು: ಇಂದಿನ ಯುವಜನತೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಶ್ರೀಮದ್ವಾಲ್ಮೀಕಿರಾಮಾಯಣದ ಕತೆಯನ್ನು(ಭಾರತ ದರ್ಶನ ಪ್ರಕಾಶನದ ಆಧಾರದಲ್ಲಿ) ತಿಳಿಸಲು ಉದ್ದೇಶಿಸಿ ಸಮೂಹಮಾಧ್ಯಮಗಳಲ್ಲಿ ದೈನಿಕ ಧಾರಾವಾಹಿಯಾಗಿ ಮೂಡಿಬಂದ 'ರಾಮಾಯಣ ಹಕ್ಕಿನೋಟ' (ಲೇಖಕ:ಉಂಡೆಮನೆ ವಿಶ್ವೇಶ್ವರ ಭಟ್ಟ, ನಿವೃತ್ತ ಪ್ರಾಂಶುಪಾಲ ಬೆಳ್ತಂಗಡಿ)ಕೃತಿಯನ್ನು ಇದೇ ತಿಂಗಳಿನ 18ರಂದು ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಲೋಕಾರ್ಪಣೆ ಮಾಡಲಿದ್ದಾರೆ.


ಆಂಗ್ಲ ಮಾಧ್ಯಮ ಪ್ರಭಾವವಿರುವ ಈ ಸಂದರ್ಭದಲ್ಲಿ ಅವರಿಗೂ ಸಹಕಾರಿಯಾಗಬೇಕೆಂದು ಇದರ ಆಂಗ್ಲ ಭಾಷಾನುವಾದ (A Bird's Eye View of Raamaayana ಲೇಖಕಿ: ಶ್ರೀಮತಿ ರಶ್ಮೀ ಕೃಪಾಲು ಸುವರ್ಣ, ಆಂಗ್ಲಭಾಷಾ ಉಪನ್ಯಾಸಕಿ, ಮಂಗಳೂರು) ವನ್ನೂ ಇದೇ ಪುಸ್ತಕದಲ್ಲಿ ಜೊತೆಜೊತೆಯಲ್ಲಿ ಅಳವಡಿಸಲಾಗಿದೆ. ಖ್ಯಾತ ರಾಮಾಯಣ ಕುಂಚಕವಿ ನೀರ್ನಳ್ಳಿ ಗಣಪತಿಯವರು ಆಕರ್ಷಕ ಮುಖಚಿತ್ರ-ಕಾಂಡಗಳ ವರ್ಣಚಿತ್ರಗಳನ್ನು ರಚಿಸಿದ್ದಾರೆ. ಮುನ್ನುಡಿ ಬರೆದಿರುವ ಖ್ಯಾತ ವಿದ್ವಾನ್ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಕೃತಿಪರಿಚಯ ಮಾಡಲಿದ್ದಾರೆ.


370 ಪುಟಗಳಲ್ಲಿ ಕನ್ನಡ, ಆಂಗ್ಲ ಎರಡೂ ಭಾಷೆಗಳಲ್ಲಿ  ರಾಮಾಯಣ ಕತೆಯನ್ನು ಯಥಾವತ್ತಾಗಿ ಸಂಗ್ರಹಿಸಿ ಕೊಟ್ಟಿರುವ ಈ ಕೃತಿಯು ಅಧ್ಯಯನ ಯೋಗ್ಯವಾಗಲಿದೆಯೆಂದು ಲೇಖಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು ಆಸಕ್ತರ ಸಹಕಾರ ಪ್ರೋತ್ಸಾಹಗಳನ್ನು ಕೋರಿರುತ್ತಾರೆ.


₹500 ಮೂಲಬೆಲೆಯ ಈ ಪುಸ್ತಕವು 20-4-24 ರ ತನಕ ₹425 ರಲ್ಲಿ ದೊರಕಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post