ಇತ್ತೀಚೆಗೆ ಅಂಗದೌರ್ಬಲ್ಯವನ್ನುಂಟುಮಾಡುವ ಪಕ್ಷಾಘಾತ ರೋಗವು ಅಧಿಕವಾಗಿ ಕಾಡುತ್ತಿರುವುದು ಜನರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತಿದ್ದ ಈ ಕಾಯಿಲೆಯು ಈಗ ಮದ್ಯವಯಸ್ಕರಲ್ಲಿಯೂ ಬಾಧಿಸುತ್ತಿದೆ. ಅತಿಯಾದ ಒತ್ತಡಯುಕ್ತ ಜೀವನಶೈಲಿ, ಶಾರೀರಿಕ ಶ್ರಮದ ಅಭಾವ, ಆಧುನಿಕ ವೈಭೋಗಗಳು ಹಾಗೂ ಚಿಂತೆ ಪಕ್ಷಾಘಾತಕ್ಕೆ ಕಾರಣಗಳೆಂದು ವಿಶ್ಲೇಶಿಸಲಾಗುತ್ತಿದೆ. ವೈರಸ್ ರೋಗಗಳು ಹಾಗೂ ಕೋವಿಡ್ ನಂತರದ ಕಾಲವೂ ಕೂಡಾ ಈ ರೋಗದ ಹೆಚ್ಚುವಿಕೆಗೆ ಕಾರಣಗಳೆಂದೂ ಕೆಲವು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಕಾಯಿಲೆಯು ರೋಗಿಯನ್ನಲ್ಲದೇ ಅವನ ಪರಿವಾರವನ್ನೂ ಶಾರೀರಿಕ, ಮಾನಸಿಕ ಹಾಗೂ ಆರ್ಥಿಕವಾಗಿಯೂ ಜರ್ಜರಿತವನ್ನಾಗಿಸಿ ಇಡೀ ಕುಟುಂಬವನ್ನೇ ಹೈರಾಣಾಗಿಸುವುದು ಬದುಕನ್ನೇ ಹಿಂಡಿ ಹಿಪ್ಪೆಯನ್ನಾಗಿಸುತ್ತದೆ.
ಪಕ್ಷಾಘಾತ ಮೆದುಳಿನ ಆಘಾತದಿಂದ ತ್ವರಿತವಾಗಿ ಉಂಟಾಗುವ ವಿಕೃತಿ. ವೈದ್ಯಕೀಯ ಭಾಷೆಯಲ್ಲಿ ಸ್ಟೊçÃಕ್ ಅಥವಾ ಸೆರೆಬ್ರೋ ವ್ಯಾಸ್ಕ್ಯುಲಾರ್ ಆಕ್ಸಿಡೆಂಟ್ ಎಂದು ಕರೆಯಲ್ಪಡುವ ಈ ಕಾಯಿಲೆಯು ಮೆದುಳಿನ ರಕ್ತ ಪರಿಚಲನೆಯ ದೋಷದಿಂದ ದೇಹದ ಒಂದು ಪಾರ್ಶ್ವದ ಕ್ರಿಯಾಹಾನಿಯುಂಟಾಗುತ್ತದೆ. ವೈದ್ಯಕೀಯ ತುರ್ತು ಅವಶ್ಯಕತೆಯಿರುವ ಈ ಕಾಯಿಲೆಯು ಮನುಷ್ಯನ ಒತ್ತಡದ ಜೀವನದ ಪರಿಸ್ಥಿತಿಯಿಂದ ಇತ್ತೀಚೆಗೆ ಒಂದು ಲಕ್ಷ ಜನಸಂಖ್ಯೆಗೆ 45 ರಿಂದ 150 ಮಂದಿಯ ಸಾವಿಗೆ ಕಾರಣವಾಗಿದೆ. ಭಾರತದಲ್ಲಿ ಇದು ಅತಿ ಹೆಚ್ಚು ಸಾವಿಗೆ ಕಾರಣವಾಗುವ ರೋಗಗಳ ಪಟ್ಟಿಯಲ್ಲಿ 3ನೇಯದ್ದಾಗಿದೆ. ಮೆದುಳಿನ ರಕ್ತನಾಳಗಳಲ್ಲಿ ತಡೆಯುಂಟಾಗುವುದು ಅಥವಾ ಆಂತರಿಕ ರಕ್ತಸ್ರಾವದಿಂದ ನರಗಳ ಜೀವಕೋಶಗಳ ಹಾನಿಯುಂಟಾಗಿ ಸಂವೇದನಾ ನರಗಳ ಅಥವಾ ಕ್ರೀಯಾ ನರಗಳ ವೈಫಲ್ಯ ಉಂಟಾಗಿ ಶರೀರದ ಒಂದು ಭಾಗ ಅಥವಾ ಸಂಪೂರ್ಣ ಶರೀರ ನಿಶ್ಚೇತನಗೊಳ್ಳಬಹುದು.
ಪಕ್ಷಾಘಾತ ಕ್ಲಿಷ್ಟಕರ ಅಂಗವೈಕಲ್ಯವನ್ನುಂಟುಮಾಡುವ ವಾತರೋಗವಾಗಿದ್ದು, ಚಿಕಿತ್ಸೆ ಮತ್ತು ನಿರ್ವಹಣೆಯು ತ್ರಾಸದಾಯಕವಾಗಿರುತ್ತದೆ. ಈ ರೋಗವು ಒಮ್ಮಿಂದೊಮ್ಮೆಗೇ ಅಥವಾ ನಿದಾನವಾಗಿಯೂ ಕಾಲಾನಂತರದಲ್ಲಿಯೂ ಶರೀರದಲ್ಲಿ ಸಂಜ್ಞಾವಹ ಹಾಗೂ ಕ್ರಿಯಾವೈಕಲ್ಯಗಳನ್ನು ಉಂಟುಮಾಡಬಹುದು. ಇದು ಶರೀರದ ಯಾವುದಾದರೂ ಒಂದು ಅಂಗ, ಮುಖ, ಒಂದು ಕೈ ಅಥವಾ ಒಂದು ಕಾಲು, ಒಂದು ಪಾರ್ಶ್ವ, ಎರಡೂ ಪಾರ್ಶ್ವ, ದವಡೆ, ಧ್ವನಿ ಪೆಟ್ಟಿಗೆ, ತಾಲು, ಗಂಟಲು ಹಾಗೂ ಸಂಪೂರ್ಣ ಶರೀರವನ್ನು ಆವರಿಸಬಹುದು, ಅಥವಾ ವ್ಯಕ್ತಿ ಕೋಮಾ ಸ್ಥಿತಿಗೆ ಜಾರಬಹುದು. ಮೆದುಳಿನ ನರಕೋಶಗಳು ಸಂಪೂರ್ಣ ನಾಶಹೊಂದಿದರೆ ಸಾವು ಉಂಟಾಗುತ್ತದೆ ಅಥವಾ ಒಂದು ಪಾರ್ಶ್ವದ ನರಕೋಶಗಳು ನಶಿಸಿದರೆ ವಿರುದ್ಧ ಪಾರ್ಶ್ವದ ವೈಕಲ್ಯವು ಶಾಶ್ವತವಾಗಿರುತ್ತದೆ. ನರಕೋಶಗಳನ್ನು ಪುನಶ್ಚೇತನಗೊಳಿಸಿದರೆ ಅಂಗವೈಕಲ್ಯವು ಸರಿಹೋಗುತ್ತದೆ.
ಪ್ರಮುಖ ಕಾರಣಗಳು:
ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಕೊಲೆಸ್ಟೆರಾಲ್, ಬೊಜ್ಜು, ಹೃದಯದ ಕಾಯಿಲೆ, ಮೆದುಳು ಜ್ವರ, ಮೆದುಳಿನ ಗಡ್ಡೆ, ಅಪಘಾತದಿಂದ ಮೆದುಳಿಗೆ ಹಾನಿ, ಮೆದುಳಿನ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ, ಮಲ್ಟಿಪಲ್ ಸ್ಕಿ÷್ಲÃರೋಸಿಸ್, ಮೆದುಳಿನ ಸೋಂಕು ಹಾಗೂ ಕೀವು ತುಂಬಿಕೊಳ್ಳುವುದು, ಅನುವಂಶಿಕ ಮೆದುಳಿನ ರೋಗ, ಜನ್ಮಜಾತ ದೋಷಗಳು, ಫಿಟ್ಸ್, ಮಾನಸಿಕ ಕಾಯಿಲೆ ಇತ್ಯಾದಿ.
ಪ್ರಾಥಮಿಕ ಉಪಚಾರ: ರಕ್ತದೊತ್ತಡ ನಿಯಂತ್ರಣ, ರಕ್ತದ ಸಕ್ಕರೆಯಂಶ ನಿಯಂತ್ರಣ, ಕೊಲೆಸ್ಟರಾಲ್ ನಿಯಂತ್ರಣ, ಸರಾಗ ಉಸಿರಾಟದ ವ್ಯವಸ್ಥೆ ಪೂರೈಕೆ, ಆಹಾರದ ಪೂರೈಕೆ ಹಾಗೂ ಮಲಮೂತ್ರ ವಿಸರ್ಜನೆಗೆ ಅನುವು ಮಾಡಿಕೊಳ್ಳುವುದು.
ತಪಾಸಣೆ: ನಿಖರ ಕಾರಣಗಳ ಪತ್ತೆಕಾರ್ಯ- ಕೂಲಂಕುಷ ರಕ್ತ ತಪಾಸಣೆ, ಮೂತ್ರ ತಪಾಸಣೆ, ನರಗಳ ತಪಾಸಣೆ, ಮೆದುಳಿನ ಸ್ಕ್ಯಾನಿಂಗ್, ಆಂಜಿಯೋಗ್ರಾಮ್, ಎನ್ಸೆಫೆಲೋ ಡಾಪ್ಲರ್ ಸ್ಟಡಿ
ಚಿಕಿತ್ಸೆ: ಮೆದುಳಿನ ಭಾಗದಲ್ಲಿ ರಕ್ತಹೆಪ್ಪುಗಟ್ಟಿರುವುದನ್ನು ನಿವಾರಿಸಿ ರಕ್ತಪರಿಚಲನೆಯನ್ನು ಸರಿಪಡಿಸುವುದು, ಮೆದುಳಿನಲ್ಲಿ ರಕ್ತಸ್ರಾವವುಂಟಾಗಿದ್ದಲ್ಲಿ ಅದನ್ನು ಹೀರಿಕೊಳ್ಳುವುದು ಹಾಗೂ ರಿಹೇಬಿಲಿಟೇಷನ್. ಅಗ್ನಿಚಿಕಿತ್ಸಾ, ವಿರೇಚನ, ಬಸ್ತಿ, ನಸ್ಯಕರ್ಮ ಅಭ್ಯಂಗ, ಪಿಂಡಸ್ವೇದ, ಫಿಝಿಚ್ಚಿಲ್ ಪಥ್ಯ ಆಹಾರ ಸೇವನೆ, ಜೀವನ ಶೈಲಿ ಬದಲಾವಣೆ.
ತಡೆಗಟ್ಟುವಿಕೆ: ಒತ್ತಡ ನಿವಾರಣೆ, ಪರಿಶ್ರಮ, ವ್ಯಾಯಾಮ, ನಡಿಗೆ, ಯೋಗ, ಪ್ರಾಣಾಯಾಮ, ಧ್ಯಾನ, ಯೋಗ್ಯ ನಿದ್ದೆ, ಋತು ಪಂಚಕರ್ಮ ಚಿಕಿತ್ಸೆ
- ಡಾ. ಹರಿಪ್ರಸಾದ್ ಸುವರ್ಣ,
ಸುವರ್ಣ ಕ್ಲಿನಿಕ್, ಅಳಕೆ, ಮಂಗಳೂರು
ಅಳದಂಗಡಿ, ಬೆಳ್ತಂಗಡಿ 9449616356
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ