ಮಂಗಳೂರು: ಮಾಂಡೋವಿ ಮೋಟರ್ಸ್ ಸುರತ್ಕಲ್ ಶಾಖೆಯು 3000ಕ್ಕೂ ಅಧಿಕ ಗ್ರಾಹಕರೊಂದಿಗೆ ಹ್ಯಾಪಿ ಕಸ್ಟಮರ್ಸ್ ಉತ್ಸವವನ್ನು ಇಂದು ಮತ್ತು ನಾಳೆ (ಫೆ.17) ಆಚರಿಸಿಕೊಳ್ಳುತ್ತಿದೆ.
ಈ ಸಂದರ್ಭದಲ್ಲಿ ಮೆಗಾ ಕಾರುಗಳ ಪ್ರದರ್ಶನ, ಎಕ್ಸ್‌ಚೇಂಜ್ ಮೇಳ, ಸುಲಭ ಹಣಕಾಸು ಸೌಲಭ್ಯ, ಉಚಿತ ಸರ್ವಿಸ್ ಚೆಕ್ ಅಪ್‌ಗಳನ್ನು ಮಾಡಲಾಗುತ್ತಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಸುರತ್ಕಲ್ ಕಾನ ರಸ್ತೆಯ ಮಾಂಡೋವಿ ಮೋಟರ್ಸ್‌ನಲ್ಲಿ ನಾಳೆ ಸಂಜೆ 4 ಗಂಟೆಗೆ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಗರಿ ಎಂಟರ್‌ಪ್ರೈಸಸರ್ ಮಾಲೀಕರಾದ ಅಗರಿ ರಾಘವೇಂದ್ರ ರಾವ್, ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪಿ. ಕೃಷ್ಣಮೂರ್ತಿ, ಮಿಸ್ಬಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ಚೇರ್‌ಮನ್ ಮುಮ್ತಾಜ್ ಆಲಿ, ಎಂಆರ್‌ಪಿಎಲ್‌ನ ಎಚ್‌ಆರ್ ಮತ್ತು ಅಡ್ಮಿನಿಸ್ಟ್ರೇಶನ್ ಸಿಜಿಎಂ ಕೃಷ್ಣ ಹೆಗ್ಡೆ, ಎನ್‌ಐಟಿಕೆ ವಿದ್ಯಾರ್ಥಿ ಕ್ಷೇಮಪಾಲನೆ ವಿಭಾಗದ ಡೀನ್ ಚಿತ್ತರಂಜನ್ ಹೆಗ್ಡೆ, ಮಾಂಡೋವಿ ಮೋಟರ್ಸ್‌ನ ನಿರ್ದೇಶಕರಾದ ಆರೂರ್ ಸಂಜಯ್ ರಾವ್ ಪಾಲ್ಗೊಳ್ಳಲಿದ್ದಾರೆ.
ಅನಂತರ ವಿಸ್ಮಯ ವಿನಾಯಕ ಮತ್ತು ತಂಡದವರಿಂದ ತುಳು ಹಾಸ್ಯಮಯ ಕಾರ್ಯಕ್ರಮ 'ಕಡೆ ಕೊಡಿ ಕಾಮಿಡಿ' ಪ್ರದರ್ಶನ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ: 9686193196 ಸಂಪರ್ಕಿಸಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ