
ಮಂಗಳೂರು: ಪ್ರಭು ಶ್ರೀರಾಮನನ್ನು ಹಾಗೂ ಹಿಂದು ದೇವರುಗಳಿಗೆ ಹಲವಾರು ಭಾರಿ ಅವಮಾನ ಮಾಡಿದ ಮಂಗಳೂರಿನ ಸಂತ ಜೆರೋಸಾ ಶಾಲೆಯ ಶಿಕ್ಷಕಿಯರ ನಡೆಯನ್ನು ವಿರೋಧಿಸಿದ ಶಾಸಕರ ಮೇಲೆಯೇ ಸರ್ಕಾರ ಕೇಸ್ ದಾಖಲಿಸಿರುವುದು ಖಂಡನೀಯ. ಕಾಂಗ್ರೆಸ್ಸಿನ ಹಿಂದೂ ವಿರೋಧಿ ಹಾಗೂ ಓಲೈಕೆ ರಾಜಕಾರಣ ಮಿತಿ ಮೀರಿದೆ. ಜಿಲ್ಲೆಯ ಪೊಲೀಸ್ ಇಲಾಖೆ ಕೂಡ ಜವಾಬ್ಧಾರಿ ಮರೆತು, ಕೆಲವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ ಖಂಡಿಸಿದ್ದಾರೆ.
ಶಾಲೆ ಬಳಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಡಾ.ಭರತ್ ಶೆಟ್ಟಿ ಹಾಗೂ ವಿ.ಹಿಂ.ಪ. ಮುಖಂಡ ಶರಣ್ ಪಂಪವೆಲ್ ಮೇಲೆ ಸುಳ್ಳು ಕೇಸು ದಾಖಲು ಹಾಗೂ ಮನನೊಂದ ಪುಟ್ಟ ವಿದ್ಯಾರ್ಥಿಗಳ ಪರವಾಗಿ ನಿಂತ ವೇದವ್ಯಾಸ್ ಕಾಮತ್ ಮೇಲೆ ವಿನಾ ಕಾರಣ ಕೇಸು ದಾಖಲಿಸಿದ ಪೊಲೀಸ್ ಇಲಾಖೆ ತಲೆ ತಗ್ಗಿಸುವ ಕೆಲಸ ಮಾಡಿದೆ. ಆದ್ದರಿಂದ ಶಾಸಕರ ವಿರುದ್ಧದ ಮೊಕದ್ದಮೆ ಹಿಂಪಡೆದು, ತಪ್ಪು ಮಾಡಿದ ಶಾಲೆಯ ವಿರುದ್ಧ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುದರ್ಶನ ಆಗ್ರಹಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ